ಬೆಂಗಳೂರು:‘ಇದು ರಾಜ್ಯವೇ ಖುಷಿಪಡುವ ಸುದ್ದಿ’ ಎಂದು ಖ್ಯಾತಿ ಪಡೆದಿದ್ದ ಖಾಸಗಿ ವಾಹಿನಿಯೊಂದರ ಟಿವಿ ಜರ್ನಲಿಸ್ಟ್ (tv journalist)
ಟಿವಿ ನಿರೂಪಕಿ ದಿವ್ಯ ವಸಂತ ವಂಚನೆ ಪ್ರಕರಣದಲ್ಲಿ ಕೊನೆಗೂ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ದಿವ್ಯಾ ಮತ್ತು ಅವಳ ಗ್ಯಾಂಗ್ ಇಂದಿರಾ ನಗರದ ಸ್ಪಾ ಮ್ಯಾನೇಜರ್‌ಗೆ ಬೆದರಿಕೆ ಹಾಕಿ ಹಣ ಸುಲಿಗೆ ಮಾಡಲು ಯತ್ನಿಸಲಾಗಿತ್ತು. ಈ ಕಾರಣಕ್ಕೆ ಈಗಾಗಲೇ| ಅವಳ ಗ್ಯಾಂಗ್‌ನ ಇಬ್ಬರನ್ನು ಬಂಧಿಸಲಾಗಿದ್ದು, ದಿವ್ಯಾ ಬಂಧನಕ್ಕಾಗಿ ಖಾಕಿ ಬಲೆ ಬೀಸಿತ್ತು, ಆದರೆ, ದಿವ್ಯಾ ಮೊದಲು ತಮಿಳುನಾಡು ಬಳಿಕ ಕೇರಳದಲ್ಲಿ ತಲೆಮರೆಸಿಕೊಂಡಿದ್ದಳು. ಇದೀಗ ಜೀವನ್ ಭೀಮಾನಗರದ ಪೊಲೀಸರು ದಿವ್ಯಾಳನ್ನು ಬಂಧಿಸಿ ಬೆಂಗಳೂರಿಗೆ ಕರೆತಂದಿದ್ದಾರೆ.