LOCAL NEWS : ಮಹತ್ವಕಾಂಕ್ಷೆಯ ಕೆರೆ ತುಂಬಿಸುವ ಯೋಜನೆ ಹಿನ್ನೆಲೆ ರೈತರೊಂದಿಗೆ ಶಾಸಕ ರಾಯರಡ್ಡಿ ಸಭೆ

You are currently viewing LOCAL NEWS : ಮಹತ್ವಕಾಂಕ್ಷೆಯ ಕೆರೆ ತುಂಬಿಸುವ ಯೋಜನೆ ಹಿನ್ನೆಲೆ ರೈತರೊಂದಿಗೆ ಶಾಸಕ ರಾಯರಡ್ಡಿ ಸಭೆ

ಪ್ರಜಾ ವೀಕ್ಷಣೆ ಸುದ್ದಿಜಾಲ :-

ಕುಕನೂರು : ಯಲಬುರ್ಗಾ ಕುಕನೂರು ಅವಳಿ ತಾಲೂಕಿನಲ್ಲಿ ಕೃಷ್ಣಾ ಜಲ ಭಾಗ್ಯ ನಿಗಮದಿಂದ 38 ಕೆರೆಗಳ ನಿರ್ಮಾಣ, ನೀರು ತುಂಬಿಸುವ 970 ಕೋಟಿ ಮೊತ್ತದ ಯೋಜನೆಯ ಅನುಷ್ಠಾನಕ್ಕೆ ವಿವಿಧ ಗ್ರಾಮಗಳ ಮುಖಂಡರು, ರೈತರೊಂದಿಗೆ ಶಾಸಕ ಬಸವರಾಜ್ ರಾಯರಡ್ಡಿ ಇಂದೂ ಕೂಡಾ ಸಭೆ ನಡೆಸಿದರು.

ಕುಕನೂರು ತಾಲೂಕಿನ ಮಂಗಳೂರು, ಶಿರೂರು, ಬಳಗೇರಿ, ತಿಪ್ಪರಸನಾಳ ಗ್ರಾಮಗಳ ಹಿರಿಯರು, ರೈತರೊಂದಿಗೆ ಶಾಸಕರಾದ ಬಸವರಾಜ್ ರಾಯರಡ್ಡಿ ಮತ್ತು ಕೆ ಬಿ ಜೆ ಎನ್ ಎಲ್ ಇಲಾಖೆಯ ಅಧಿಕಾರಿಗಳು ಸಭೆ ನಡೆಸಿ ಜಮೀನಿನ ಅವಶ್ಯಕತೆ ಲಭ್ಯತೆಯ ಬಗ್ಗೆ ಮನವರಿಕೆ ಮಾಡಿಕೊಂಡರು.

ಈ ಸಂದರ್ಭದಲ್ಲಿ ಕೊಪ್ಪಳ ಉಪ ವಿಭಾಗಧಿಕಾರಿ ಮಹೇಶ್ ಮಾಲಗಿತ್ತಿ, ತಹಸೀಲ್ದಾರ್ ಎಚ್ ಪ್ರಾಣೇಶ್, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಸಂತೋಷ್ ಬಿರಾದಾರ್, ಸೇರಿದಂತೆ ತಾಲೂಕು ಮಟ್ಟದ ಇತರ ಅಧಿಕಾರಿಗಳು ಇದ್ದರು. ಸಭೆಯಲ್ಲಿ ಕಾಂಗ್ರೆಸ್ ಮುಖಂಡರಾದ ವೀರನಗೌಡ ಪೊಲೀಸ್ ಪಾಟೀಲ್ ಯಂಕಣ್ಣ ಯರಾಶಿ , ಇತರರು ಉಪಸ್ಥಿತರಿದ್ದರು.

ವರದಿ :- ಈರಯ್ಯ ಕುರ್ತಕೋಟಿ

Leave a Reply

error: Content is protected !!