LOCAL NEWS : ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗ ಪತ್ತೆ : ಇದರ ಲಕ್ಷಣಗಳು ಹೀಗಿವೆ, ಇಲ್ಲಿದೆ ಮಾಹಿತಿ..!!

You are currently viewing LOCAL NEWS : ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗ ಪತ್ತೆ : ಇದರ ಲಕ್ಷಣಗಳು ಹೀಗಿವೆ, ಇಲ್ಲಿದೆ ಮಾಹಿತಿ..!!

ಪ್ರಜಾ ವೀಕ್ಷಣೆ ಸುದ್ದಿ:-

ಕುಕನೂರು : ಜಿಲ್ಲೆಯಲ್ಲಿ ಆಗಾಗ ಜಿಟಿಜಿಟಿ ಮಳೆ ಮುಂದುವರಿದಿದ್ದು, ಕುಕನೂರ ತಾಲೂಕಿನ ತಳಕಲ್ಲ್‌, ತಳಬಾಳ, ನಿಂಗಾಪುರ, ಇಟಗಿ ಹಾಗೂ ಇನ್ನೀತರ ಗ್ರಾಮಗಳಲ್ಲಿ ಹೆಸರು ಬೆಳೆಯಲ್ಲಿ ಕುಡಿ ಸಾಯುವ ನಂಜು ರೋಗದ ಪರಿಶೀಲನೆ ಮಾಡಲಾಗಿದ್ದು, ಈ ವೇಳೆಯಲ್ಲಿ ಕುಡಿ ಸಾಯುವ ನಂಜು ರೋಗ ಪತ್ತೆಯಾಗಿದೆ ಎಂದು ತಾಲೂಕಿಗೆ ಆಗಮಿಸಿದ್ದ ಕೃಷಿ ವಿಜ್ಞಾನಿಗಳ ವಿಶೇಷ ತಂಡ ತಿಳಿಸಿದೆ.

-:ಶಿವಾಗಣಾರಾಧನೆ:-

ನಿವೃತ್ತ KSRP ಪೊಲೀಸ್ ಸಬ್ ಇನ್ಸ್ಪೆಕ್ಟರ್ ಶ್ರೀ ಸಿದ್ದಪ್ಪ ಶಿವಬಸಪ್ಪ ಭದ್ರಾಪುರ

ಹೆಸರು ಬೆಳೆಯ ಕುಡಿ ಸಾಯುವ ನಂಜು ರೋಗ ಪತ್ತೆ ಹಚ್ಚಲಾಗಿದೆ ಇದರ ಪ್ರಮುಖ ಲಕ್ಷಣಗಳು ಹೀಗಿವೆ. 

  • ಗಿಡ ಗಿಡ್ಡವಾಗುವುದು.

  • ಕುಡಿ ಎಲೆಯಲ್ಲಿ ತಿಳಿಹಳದಿ ಬಣ್ಣದ ವೃತ್ತಾಕಾರದ ಮಚ್ಚೆಗಳು ಕಂಡು ಬರುವವು.

  • ಗಿಡದಲ್ಲಿ ಹೂ ಇಲ್ಲದಿರುವುದು.

  • ಕುಡಿ ಸಾಯುವುದು ಹಾಗೂ ಹೊಸ ಚಿಗುರು ಬರುವುದು ಕಂಡು ಬರುತ್ತವೆ.

  • ಗಿಡದಲ್ಲಿ ಕಾಯಿಗಳು ಕಡಿಮೆ ಅಥವಾ ಇಲ್ಲದೆ ಇರಬಹುದು.

  • ಬೆಳಯ ಮೊಗ್ಗು ಬಾಡಿ/ಕೊಳೆತು ಸಾಯುವವು

ಈ ರೋಗ ಬರುವುದುಕ್ಕೆ ಪ್ರಮುಖ ಕಾರಣಗಳೇನು

  • ಪ್ರತಿಕೂಲ ವಾತಾವರಣ

  • ರೋಗವು ಥ್ರೀಪ್ಸ್‌ ಕೀಟದಿಂದ ಹರಡುತ್ತದೆ

  • ಬಿಸಿಲಿನ ವಾತಾವರಣ (23 ರಿಂದ 30ಡಿಸೆ) ಮತ್ತು ಆರ್ದ್ರತೆ (40 ರಿಂದ 70%) ಇದ್ದಲ್ಲಿ ರೋಗ ಉಲ್ಬಣವಾಗುತ್ತದೆ .

 ಈ ರೋಗವನ್ನು ಹತೋಟಿಯಲ್ಲಿ ತರುವ ಮುಖ್ಯ ಕ್ರಮಗಳು

  1.  ಬೇಸಿಗೆ ಬಿತ್ತನೆಯನ್ನು ಬೇಗನೆ ಮಾಡಬೇಕು

  2. ಹೊಲದಲ್ಲಿ ರೋಗಲಕ್ಷಣಗಳು ಕಂಡುಬಂದ ಕೂಡಲೇ ಶೇ.4ರ ಜೋಳದ ಎಲೆಯ ಕಷಾಯವನ್ನು, 15 ದಿನದ ಅವಧಿಯಲ್ಲಿ ಸಿಂಪರಣೆ ಮಾಡಬೇಕು 

  3. ತೀವ್ರ ಬಾಧೆ ಕಂಡುಬಂದಲ್ಲಿ 0.3 ಮಿ.ಲೀ ಇಮಿಡಾಕ್ಲೋಪ್ರೀಡ್ 17.8 ಎಸ್ . ಎಲ್‌ ಪ್ರತಿ ಲೀಟರ್‌ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. 

ಈ ಮಾಹಿತಿಯನ್ನು ಕೃಷಿ ವಿಜ್ಞಾನಿಗಳ ವಿಶೇಷ ತಂಡವೂ ಈ ಭಾಗದ ರೈತರಿಗೆ ಈ ಕುರಿತು ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ತಿಮ್ಮಣ್ಣ ಚೌಡಿ, ಆಡಳಿತ ಮಂಡಳಿಯು ಸದಸ್ಯರು, ಕೃಷಿ ವಿಜ್ಞಾನಗಳ ವಿದ್ಯಾಲಯ, ರಾಯಚೂರು ಹಾಗೂ ಕೃಷಿಕ ಸಮಾಜದ ಅಧ್ಯಕ್ಷರು, ಯಲಬುರ್ಗಾ. ಸಹದೇವ ಯರಗೊಪ್ಪ, ಉಪ ಕೃಷಿ ನಿರ್ದೇಶಕರು-1 ಕೊಪ್ಪಳ. ಪ್ರಾಣೇಶ್‌ ಹಾದಿಮನಿ, ಸಹಾಯಕ ಕೃಷಿ ನಿರ್ದೇಶಕರು. ಯಲಬುರ್ಗಾ. ಡಾ. ರಾಘವೇಂದ್ರ ಎಲಿಗಾರ್‌ , ಮುಖ್ಯಸ್ಥರು ಕೃಷಿ ಸಂಶೋಧನಾ ಕೇಂದ್ರ. ಗಂಗಾವತಿ. ಡಾ. ಎಸ್‌.ಬಿ.ಗೌಡರ್‌, ಸಸ್ಯರೋಗ ಶಾಸ್ತ್ರಜ್ಙರು ಕೆವಿಕೆ ಗಂಗಾವತಿ. ಡಾ. ವಾಮನಮೂರ್ತಿ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ. ಕೊಪ್ಪಳ. ಡಾ. ರೇವತಿ. ಆರ್‌. ಎಮ್, ಕೃಷಿ ವಿಜ್ಙಾನ ಕೇಂದ್ರ ಗಂಗಾವತಿ, ಬಸವರಾಜ ತೇರಿನ್‌, ಕೃಷಿ ಅಧಿಕಾರಿಗಳು ಕುಕನೂರ, ಸಿದ್ರಾಮರೆಡ್ಡಿ, ಸಹಾಯಕ ಕೃಷಿ ಅಧಿಕಾರಿಗಳು ಕುಕನೂರ, ಗೂಳಪ್ಪ ಕೊಳಜಿ, ಕೃಷಿ ತಾಂತ್ರಿಕ ವ್ಯವಸ್ಥಾಪಕರು ಕುಕನೂರ, ಪ್ರಗತಿ ಪರ ರೈತರಾದ ಮಲ್ಲಿಕಾರ್ಜುನ ಗಡಗಿ ,ಶಂಕರ್‌ ಕುಲಕರ್ಣಿ ,ಗಂಗಮ್ಮ ಗಡಗಿ , ಶಿವುಕುಮಾರ ಆದಾಪುರ ಹಾಗೂ ಹಲವಾರು ರೈತರು ಉಪಸ್ಥಿತರಿದ್ದರು.

Leave a Reply

error: Content is protected !!