PV ನ್ಯೂಸ್ ಡೆಸ್ಕ್- ಕುಕನೂರು : ರಾಜ್ಯದಲ್ಲಿ ಇತ್ತೀಚೆಗೆ ಸಾಲ ಬಾಧೆಯಿಂದ ಕೆಲ ರೈತರು ಆತ್ಮಹತ್ಯೆ ಮಾಡಿಕೊಳ್ಳುವುದು ಸರ್ವೆ ಸಾಮಾನ್ಯವಾಗಿಬಿಟ್ಟಿದೆ. ಖಾಸಗಿ ಬ್ಯಾಂಕುಗಳಲ್ಲಿ “ಆಧಾಯಕ್ಕೂ ಮೀರಿ ಸಾಲಮಾಡಿದರೆ, ಮೃತ್ಯುವನ್ನು ಆಹ್ವಾನಿಸಿದಂತೆ” ಎಂಬ ಮಾತಿದೆ. ಅದರಂತೆ ಕೊಪ್ಪಳದ ಯುವ ರೈತನೊಬ್ಬನು ಸಾಲ ಬಾಧೆಯಿಂದ ಮನನೊಂದು ಜೀವನದ ಮೇಲೆ ಜಿಗುಪ್ಸೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಮಂಡಲಗೇರಿ ಗ್ರಾಮದ ಆನಂದ ತಂದೆ ಅಂದಪ್ಪ ಬಂಡಿ ಎಂಬ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆಗೆ ಮೂಲ ಕಾರಣವೇ “ಸಾಲ ಬಾಧೆ” ಎಂದು ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ. ಈ ಪ್ರಕರಣವು ಕುಕನೂರು ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಅವರ ಕುಟುಬಂಸ್ಥರು ಹೇಳುವ ಪ್ರಕಾರ ಹಾಗೂ ಎಫ್‌ಆರ್‌ಐನಲ್ಲಿ ನಮೂದಿಸಿದ ಪ್ರಕಾರ, ನಿನ್ನೆ ಸಂಜೆ ವೇಳೆ 4:30ರಿಂದ 5:00ಯ ವಳಗೆ ಮಂಡಲಗೇರಿಯ ತಮ್ಮ ಮನೆಯ ಒಳಗೆ ನೇಣು ಬೀಗಿದ ಸ್ಥಿತಿಯಲ್ಲಿ ಇದ್ದನು ಎನ್ನಲಾಗಿದೆ. ಮೃತನ ಪತ್ನಿ ಶಿವಲೀಲಾ ಪೊಲೀಸ್ ಠಾಣೆಗೆ ಆಗಮಿಸಿ ಕಂಪ್ಲೇಟ್ ಮಾಡಿದ್ದಾರೆ. “ನನ್ನ ಪತಿಯ ಸಾವಿಗೆ ಯಾರು ಕಾರಣರಲ್ಲಾ ಅವರೇ ಸ್ವತಃ ಈ ಕೃತ್ಯ ಮಾಡಿಕೊಂಡಿದ್ದಾರೆ. ನಮಗೆ ಯಾರ ಮೇಲೂ ಅನುಮಾನ ಇಲ್ಲ” ಎಂದು ಕಂಪ್ಲೇಟ್ ಕಾಪಿ ಹೇಳಿಕೊಂಡಿದ್ದಾರೆ.
ಐಡಿಎಫ್‌ಸಿ ಬ್ಯಾಂಕ್ ಹಾಗೂ ಧರ್ಮಸ್ಥಳದ ಗುಂಪಿನಲ್ಲಿ ಬೇರೆ ಬೇರೆ ಕಾರಣಗಳಿಗೆ ಸುಮಾರು 2 ಲಕ್ಷ ರೂ. ಸಾಲ ತೆಗದುಕೊಂಡಿದ್ದಾನೆ. ಆದರೆ ಈ ಸಾಲವನ್ನು ಸರಿಯಾದ ಸಮಯದಲ್ಲಿ ಕಟ್ಟಲಾಗದೆ, ಮನನೊಂದು ಜೀವನದ ಮೇಲೆ ಜಿಗುಪ್ಸೆ ಉಂಟಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.