PV ನ್ಯೂಸ್ ಡೆಸ್ಕ್- ಕುಕನೂರು : ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಅಗಸ್ಟ್ 1 ರಂದು ವ್ಯಸನ ಮುಕ್ತ ದಿನ ಎಂದು ಆಚರಣೆ ಮಾಡಬೇಕೆಂದು ಈಗಾಗಲೇ ಸರ್ಕಾರ ಆದೇಶ ಹೊರಡಿಸಿದೆ. ಹಾಗಾಗಿ ತಾಲೂಕಿನ ಎಲ್ಲಾ ಸರ್ಕಾರಿ ಕಛೇರಿ ಹಾಗೂ ಶಾಲಾ ಕಾಲೇಜುಗಳಲ್ಲಿ ಕಡ್ಡಾಯವಾಗಿ ಆಚರಣೆ ಮಾಡಬೇಕು ಎಂದು ತಹಶೀಲ್ದಾರ್ ಹೆಚ್. ಪ್ರಾಣೇಶ್ ತಿಳಿಸಿದರು.
ಇಂದು ತಹಶೀಲ್ದಾರ್ ಕಚೇರಿಯಲ್ಲಿ ನಡೆದ “ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಅಗಸ್ಟ್ 1 ರಂದು ವ್ಯಸನ ಮುಕ್ತ ದಿನ” ಆಚರಿಸುವ ಕುರಿತು ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ‘ದುರ್ವ್ಯಸನಗಳು ಹಾಗೂ ದುಶ್ಚಟಗಳ ಬಗ್ಗೆ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಸರ್ವಾಜನಿಕರಿಗೆ ಅರಿವು ಮೂಡಿಸಿವ ಮುಖ್ಯವಾದ ಕಾರ್ಯಕ್ರಮ ಇದು ಹಾಗಾಗಿ ಕಡ್ಡಾಯವಾಗಿ ಆಚರಣೆ ಮಾಡಲೇ ಬೇಕು, ಈ ಕುರಿತು ಪ್ರತಿಜ್ಞಾ ವಿಧಿ ಬೋಧನೆ ಮಾಡಬೇಕು ಎಂದು ಹೇಳಿದರು.
ಶ್ರೀ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಅಗಸ್ಟ್ 1 ರಂದು “ವ್ಯಸನ ಮುಕ್ತ ದಿನ” ಕಾರ್ಯಕ್ರಮವನ್ನು ನಾಳೆ 11:00 ಗಂಟೆಗೆ ಸರ್ಕಾರಿ ಕಾಲೇಜು ಆವರಣ ಗುದ್ನಪ್ಪನ ಮಠ-ಕುಕನೂರು ಇಲ್ಲಿ ನಡೆಯಲಿದೆ.
ಈ ಸಂದರ್ಭದಲ್ಲಿ ಗ್ರೆಡ್-2 ತಹಶೀಲ್ದಾರ್ ಮುರಳಿಧರ್ ರಾವ್, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು, ತಾಲೂಕ ಮಟ್ಟದ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ, ಅಗ್ನಿ ಶಾಮಕ ಇಲಾಖೆಯ ಸಿಗ್ಬಂದಿ ಇದ್ದರು.