LOCAL NEWS : ಬಿಜೆಪಿಯ ನಾಯಕರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು : ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ

You are currently viewing LOCAL NEWS : ಬಿಜೆಪಿಯ ನಾಯಕರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು : ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ

ಪ್ರಜಾವೀಕ್ಷಣೆ ಸುದ್ದಿಜಾಲ :-

LOCAL NEWS : ಬಿಜೆಪಿಯ ನಾಯಕರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು : ಕಾಂಗ್ರೆಸ್ ವಕ್ತಾರ ಸಂಗಮೇಶ್ ಗುತ್ತಿ

ಕುಕನೂರು : ‘ಬಿಜೆಪಿಯ ನಾಯಕರು ನಾಲಿಗೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಮನ ಬಂದಂತೆ ಮಾತಡುವುದು ನಿಲ್ಲಿಸಬೇಕು. ಇಲ್ಲಾವಾದರೆ ಮುಂದಿನ ದಿನಗಳಲ್ಲಿ ರಾಜಕೀಯ ಮಾಡುವುದು ಕಷ್ಟವಾಗಬಹುದು’ ಎಂದು ಕಾಂಗ್ರೆಸ್‌ನ ತಾಲೂಕಾ ವಕ್ತಾರ ಸಂಗಮೇಶ ಗುತ್ತಿ ಕಿವಿಮಾತು ಹೇಳಿದರು.

ಇಂದು ಕುಕನೂರು ಪಟ್ಟಣದ ಎಪಿಎಂಸಿಯ ಆವರಣದಲ್ಲಿನ ಕಾಂಗ್ರೆಸ್‌ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಎರಡು ದಿನಗಳ ಹಿಂದೆ ನಡೆದ (ಡಿ.29ರಂದು) ಕೃಷಿ ಪತ್ತಿನ ಸಹಕಾರಿ ಸಂಘದ ಚುನಾವಣೆ ರಾಜಕೀಯ ಪ್ರೇರಿತ ಎಂದು ಆರೋಪಿಸಿ ಹಾಗೂ ಕೋರ್ಟ್‌ ಆದೇಶವಿದ್ದರೂ ಗೊಂದಲಮಯ ವಾತವರಣವನ್ನು ಸೃಷ್ಠಿಸಿ ಮತ ಎಣಿಕೆಯಾಗದಂತೆ ಮಾಡಿದರು ಎಂದು ಆರೋಪಿಸಿದರು.

‘ಮೊನ್ನೆ ನಡೆದ ಸ್ವಯಂ ಘೋಷಿತ ಪ್ರತಿಭಟನೆಗೆ ಕೆರ ನೀಡಿದ ಬಿಜೆಪಿಗರು, ಪ್ರತಿಭಟನೆ ನೆಪದಲ್ಲಿ ತಾಲೂಕಿನಲ್ಲಿ ಕಾಂಗ್ರೆಸ್ ಅಭಿವೃದ್ದಿ ಸಹಿಸದೇ ಬಾಯಿಗೆ ಬಂದಂತೆ ಮಾತನಾಡಿದ್ದಾರೆ. ಒಬ್ಬ ಹಿರಿಯ ರಾಜಕಾರಣಿ ಮಾಜಿ ಸಚಿವ ಹಾಲಪ್ಪ ಆಚಾರ್ ಹಾಗೂ ಅವರ ಹಿಂಬಾಲಕರು ಹೇಗೆ ಮಾತನಾಡಬೇಕು ಹೇಗೆ ಮಾತನಾಡಬಾರದು ಎನ್ನುವ ಸಂಸ್ಕೃತಿಯ ಪಾಠ ಕಲಿಯಬೇಕು’ ಎಂದರು.

‘ಒಬ್ಬ ಬಿಜೆಪಿ ನಾಯಕ ಈರಣ್ಣ ಹುಬ್ಬಳ್ಳಿ ಅವರು ಹಾಲಿ ಶಾಸಕ, ಸಂಪುಟ ದರ್ಜೆ ಸಚಿವ ಬಸವರಾಜ ರಾಯರೆಡ್ಡಿ ಅವರಿಗೆ ಅವಹೇಳನಕಾರಿ ಮಾತನಾಡಿದ್ದು, “ಹಾಲಿ ಶಾಸಕರನ್ನು ಯಾರು ಬಡಿತಾರೋ ಅವರೇ ಮುಂದಿನ ಶಾಸಕರಾಗುತ್ತಾರೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ಅವರನ್ನು ಹಲ್ಲೆ ಮಾಡುವಂತೆ ಸಾರ್ವಜನಿಕರಿಗೆ ಪ್ರಚೋದನೆ ನೀಡಿದ್ದಾರೆ. ಪ್ರತಿಭಟನೆಯಲ್ಲಿ ಅವಾಚ್ಯ ಪದಗಳನ್ನು ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು. ನಮಗೂ ಮಾತನಾಡಲು ಬರುತ್ತದೆ ನಾವು ಅಷ್ಟು ಕೀಳ ಮಟ್ಟಕ್ಕೆ ಇಳಿದು ಮಾತನಾಡುವುದಿಲ್ಲಾ, ನಮಗೆ ನಮ್ಮ ಮನೆಯವರು ಹಾಗೂ ಪಕ್ಷದ ಹಿರಿಯರಿಗೆ ಹೇಗೆ ಮಾತನಾಡಬೇಕು ಹೇಗೆ ಮಾತನಾಡಬಾರದು?, ಹೇಳಿಕೊಟ್ಟಿದ್ದಾರೆ ಎಂದರು. ಎಪಿಎಂಸಿ ಆವರಣದಲ್ಲಿ ಭಜನೆ ಮಾಡಿದವರು ಮುಂದೆಯು ಅವರ ರಾಜಕೀಯ ಜೀವನ ಭಜನೆಯಲ್ಲಿ ಕಳೆಯಲಿ’ಎಂದು ವ್ಯಂಗ್ಯವಾಡಿದರು.

ಮಾಜಿ ಸಚಿವರಿಗೆ ನೇರವಾಗಿ ಮಾತಿನ ಚಾಟಿ ಬೀಸಿದ ವಕ್ತಾರ ಸಂಗಮೇಶ್ ಗುತ್ತಿ

“ನೀವು ಸಹ ಬಿಜೆಪಿ ಸರ್ಕಾರದಲ್ಲಿ ಶಾಸಕ ಸಚಿವ ಸ್ಥಾನದಲ್ಲಿ ಮೂರು ಹುದ್ದೆಗಳನ್ನು ನಿಭಾಯಿಸಿ ಆಡಳಿತ ನಡೆಸಿದ್ದೀರಿ… ನೀವು ಅಧಿಕಾರದಲ್ಲಿದ್ದಾಗ ತಾಲೂಕಿಗೆ ಏನು ಕಿತ್ತು ಗುಡ್ಡೆ ಹಾಕಿದ್ದಿರಿ ಎಂದು ನಾವು ನೋಡಿದ್ದೇವೆ ತಾಲೂಕಿನಲ್ಲಿ ಏನು ಅಭಿವೃದ್ದಿ ಮಾಡಿದ್ದಿರಿ? ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಿ” ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಗೆ ನೇರವಾಗಿ ಮಾತಿನ ಚಾಟಿ ಬೀಸಿದರು.

ಈ ವೇಳೆಯಲ್ಲಿ ತಾಲೂಕಾ ಕಾಂಗ್ರೆಸ್ ವಕ್ತಾರರಾದ ಗಗನ್ ನೋಟಗಾರ, ಮುತ್ತು ವಾಲ್ಮೀಕಿ, ಯಮನೂರಪ್ಪ ಕಟ್ಟಿಮನಿ, ರಫಿ ಮಂಡಲಗಿರಿ, ಸಿದ್ದಯ್ಯ ಕಳ್ಳಿಮಠ, ಸುಧೀರ ಕೊರ್ಲಳ್ಳಿ, ಹಂಪಯ್ಯ ಹಿರೇಮಠ, ದಾನರಡ್ಡಿ, ರಾಮಣ್ಣ ಬಂಕದಮನಿ, ವೀರಯ್ಯ ತೋಂಟದಾರ್ಯಮಠ, ಕೆರಿಬಸಪ್ಪ ನಿಡಗುಂದಿ, ಶಿವಾನಂದ ಬಣಕಾರ, ಪ್ರಶಾಂತ ಆರಬೆರಳಿನ, ಅಶೋಕ ತೋಟದ, ದಸ್ತಗಿರಸಾಬ ರಾಜೂರ, ರಫಿ ಹಿರೇಹಾಳ, ನಿಂಗಪ್ಪ ಗೊರ್ಲೆಕೊಪ್ಪ ಹಾಗೂ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು ಇದ್ದರು.

Leave a Reply

error: Content is protected !!