LOCAL NEWS : ದೈಹಿಕ ವಿಕಲಚೇತನರಿಗೆ ಬ್ಯಾಟರಿ ಚಾಲಿತ ವ್ಹೀಲ್‌ಚೇರ್ ಪಡೆಯಲು ಅರ್ಜಿ ಅಹ್ವಾನ..!
ವಿಜಯನಗರ : ಪ್ರಸಕ್ತ ಸಾಲಿನಲ್ಲಿ ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ವತಿಯಿಂದ ದೈಹಿಕ ವಿಕಲಚೇತನರಿಗಾಗಿ ಅನುಷ್ಠಾನಗೊಳಿಸುತ್ತಿರುವ ವ್ಹೀಲ್‌ಚೇರ್ ಯೋಜನೆಯಡಿ ಬ್ಯಾಟರಿ ಚಾಲಿತ ವ್ಹೀಲ್‌ಚೇರ್‌ಗಾಗಿ ಅರ್ಹ ದೈಹಿಕ ವಿಕಲಚೇತನರಿಂದ ಆನ್‌ಲೈನ್‌ನಲ್ಲಿ ಆರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ಅವಿನಾಶಲಿಂಗ ಎಸ್.ಗೊಟಖಿಂಡಿ ತಿಳಿಸಿದ್ದಾರೆ.
ಅರ್ಹ ದೈಹಿಕ ವಿಕಲಚೇತನರು ತಮ್ಮ ಅರ್ಜಿಗಳನ್ನು ಸೇವಾಸಿಂಧು ಪೋರ್ಟಲ್‌ನ (SEVASINDU WEBSITE https://suvidha.karnataka.gov.in/) ನಲ್ಲಿ ಆನ್‌ಲೈನ್ ಮೂಲಕ ಅರ್ಜಿಯನ್ನು ಜ.21 ರೊಳಗಾಗಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗೆ ಸ್ಥಳೀಯ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಗ್ರಾಪಂ ವ್ಯಾಪ್ತಿಯ ವಿಆರ್‌ಡಬ್ಲೂ, ನಗರಸಭೆ, ಪುರಸಭೆ, ಪ.ಪಂಗಳಲ್ಲಿ ಯುಆರ್‌ಡಬ್ಲೂ, ತಾಪಂ ವ್ಯಾಪ್ತಿಯ ಎಂಆರ್‌ಡಬ್ಲೂಗಳನ್ನು ಸಂಪರ್ಕಿಸಬಹುದು.
ಹೊಸಪೇಟೆ-9945252991, ಹಗರಿಬೊಮ್ಮನಹಳ್ಳಿ-9741185924, ಕೂಡ್ಲಿಗಿ–821762636, ಹೂವಿನಹಡಗಲಿ-9900890403, ಕೊಟ್ಟೂರು-7353974518, ಹರಪನಹಳ್ಳಿ-9901182525 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.