LOCAL NEWS : ಜ.21ರಂದು ವಿಶ್ವ ರೈತ ದಿನಾಚರಣೆ ಹಾಗೂ ರಾಜ್ಯ ಮಟ್ಟದ ರೈತರ ಮಹಾ ಸಮಾವೇಶ..!
ಕುಕನೂರು : ‘ಇದೇ ಜನವರಿ 21 ರಂದು “ವಿಶ್ವ ರೈತ ದಿನಾಚರಣೆ” ಹಾಗೂ “ರಾಜ್ಯ ಮಟ್ಟದ ರೈತರ ಮಹಾ ಸಮಾವೇಶ”ವು ಕುಕನೂರು ಪಟ್ಟಣದ ಅನ್ನದಾನೀಶ್ವರ ಶಾಖಾಮಠದ ಸಭಾಂಣದಲ್ಲಿ ನಡೆಯಲಿದೆ ಎಂದು ಭಾರತೀಯ ಕ್ರಾಂತಿಕಾರಿ ಕಿಶಾನ್ ಸೇನಾ ಸಂಸ್ಥಾಪಕ ರಾಷ್ಟ್ರೀಯ ಅಧ್ಯಕ್ಷ ಎಂ.ಎನ್. ಕುಕನೂರ ಹೇಳಿದರು.
ಇಂದು ಕುಕನೂರು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಜೊತೆಗೆ ಭಾರತೀಯ ಕ್ರಾಂತಿಕಾರಿ ಕಿಶಾನ್ ಸೇನಾ (ರಿ.)ದೆಹಲಿ ಸಂಘದ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದರು.
ಈ ಕಾರ್ಯಕ್ರಮದೊಂದು ಹಲವಾರು ಕ್ಷೇತ್ರಗಳಲ್ಲಿ ಸಾಧನೆಗೈದ ಮಹನೀಯರಿಗೆ ರಾಜ್ಯಮಟ್ಟದ ಪ್ರಶಸ್ತಿ ನೀಡಲು ನಮ್ಮ ರಾಜ್ಯ ಸಮಿತಿ ತೀರ್ಮಾನಿಸಿದ್ದು, ರಾಜ್ಯದ ಎಲ್ಲಾ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮತ್ತು ನಿವೃತ್ತ ಹೊಂದಿರುವ ಸಮಾಜಸೇವಕರು ಉದ್ಯಮದಾರರು ಹಾಗೂ ಚಾಲಕರು ಪತ್ರಿಕಾ ಮಿತ್ರರು ರೈತರು ವ್ಯಕ್ತಿಗಳಿಗೆ ರಾಜ್ಯಮಟ್ಟದ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತಿದೆ ಆದ್ದರಿಂದ ಆಸಕ್ತರು ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು 10 ರಿಂದ 15ರವರೆಗೆ ಇರುತ್ತದೆ ಎಂದು ತಿಳಿಸಿದರು.
ಈ ಸಮಾವೇಶದ ದಿವ್ಯ ಸಾನಿಧ್ಯವನ್ನು ಡಾ. ಮಹದೇವ ಮಹಾಸ್ವಾಮಿಗಳು, ಅಧ್ಯಕ್ಷರಾಗಿ ಪಚ್ಚೆ ನಂಜುಂಡಸ್ವಾಮಿ ಪ್ರಭಾವಿ ರೈತರ ಮುಖಂಡರು, ಉದ್ಘಾಟಕರಾಗಿ ಬಸವರಾಜ್ ರಾಯರೆಡ್ಡಿ ಶಾಸಕರು, ಶಿವರಾಜ್ ತಂಗಡಗಿ ಸಚಿವರು, ಸಂಸದ ರಾಜಶೇಖರ್ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಶಾಸಕ ದೊಡ್ಡನಗೌಡ ಹೆಚ್ ಪಾಟೀಲ್, ಶಾಸಕ ಗಾಲಿ ಜನಾರ್ದನ್ ರೆಡ್ಡಿ, ಮಾಜಿ ಸಚಿವ ಹಾಲಪ್ಪ ಆಚಾರ್, ಹಾಗೂ ಇನ್ನಿತರ ಗಣ್ಯಮಾನ್ಯರು ಉಪಸ್ಥಿತರಿರಲಿದ್ದಾರೆ ಎಂದು ಹೇಳಿದರು.
ಅರ್ಜಿ ಸಲ್ಲಿಸುವ ವಿಳಾಸ :-
ಭಾರತೀಯ ಕ್ರಾಂತಿಕಾರಿ ಕಿಸಾನ್ ಸೇನೆ (ರಿ.) ದೆಹಲಿ, ವಿದ್ಯಾಶ್ರೀ ಟ್ರಸ್ಟ್ ಹತ್ತಿರ ಕುಕನೂರು 583232, ಹೆಚ್ಚಿನ ಮಾಹಿತಿಗಾಗಿ 6362698430, 9886432831 ನಂಬರ್‌ಗಳನ್ನು ಸಂಪರ್ಕಿಸಿ.
ಈ ಸಂದರ್ಭದಲ್ಲಿ ರೈತ ಮುಖಂಡ ನಿಂಗರಾಜ್ ಬೆಣಕಲ್, ರಾಜು ವಾಲ್ಮೀಕಿ, ಮಜೀದ್ ಖಾನ್ ಮುಲ್ಲಾ, ಪಿಡ್ಡನಗೌಡ ಮಾಲಿಪಾಟೀಲ್ ಇದ್ದರು.