ಪ್ರಜಾ ವೀಕ್ಷಣೆ ಸುದ್ದಿಜಾಲ :-
LOCAL NEWS : ರಾಜ್ಯದ ಜಂಪ್ ರೋಪ್ ತಂಡದಿಂದ ಅಂತರ ರಾಷ್ಟ್ರೀಯ ಮಟ್ಟದ ಸಾಧನೆ!!
ಕೊಪ್ಪಳ : ಇದೇ ಜನೇವರಿ 5 ರಿಂದ 8ರ ವರೆಗೆ ನೆಡೆದ ಇಂಡೋ ನೇಪಾಳ ಜಂಪ್ ರೋಪ್ ಚಾಂಪಿಯನ್ ಶಿಪ್‌ನಲ್ಲಿ ರಾಜ್ಯದಿಂದ ಒಟ್ಟು 9 ತಂಡಗಳು ಭಾಗವಹಿಸಿದ್ದವು. ಇದರಲ್ಲಿ 15 ಪದಕಗಳನ್ನು ಪಡೆಯುವ ಮೂಲಕ ಕ್ರೀಡಾ ಪಟುಗಳು ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ.
ಇಂಡೋ ನೇಪಾಳ ಜಂಪ್ ರೋಪ್ ಚಾಂಪೀಯನ್‌ಶಿಪ್ ಜನೇವರಿ 5 ರಿಂದ 8ರ ವರೆಗೆ ನೇಪಾಳದ ಪೋಖರಾ ಎಂಬಲ್ಲಿ ನೆಡೆಯಿತು. ಇದರಲ್ಲಿ 150 ಕ್ರೀಡಾ ಪಟುಗಳು ಭಾರತ ದೇಶವನ್ನು ಪ್ರತಿನಿದಿಸಿದ್ದರು. ಇದರಲ್ಲಿ ಕರ್ನಾಟಕ ರಾಜ್ಯದಿಂದ ಭಾಗವಹಿಸಿದ ಕ್ರೀಡಾ ಪಟುಗಳು 15 ಪದಕಗಳನ್ನು ಪಡೆಯುವ ಮೂಲಕ ಅಂತರ ರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ್ದಾರೆ ಎಂದು ಕರ್ನಾಟಕ ರಾಜ್ಯ ತಂಡದ ಮ್ಯಾನೇಜರ್ ಮಹೇಶ ಹೆಗ್ಡೆ ತಿಳಿಸಿದ್ದಾರೆ.
4-ಬಂಗಾರದ ಪದಕ, 8-ಬೆಳ್ಳಿಯ ಪದಕ, ಹಾಗೂ 3-ಕಂಚಿನ ಪದಕಗಳನ್ನು ಕರ್ನಾಟಕ ತಂಡದ ಕ್ರೀಡಾ ಪಟುಗಳು ಪಡೆದುಕೊಂಡಿದ್ದಾರೆ.
ಇದರಲ್ಲಿ ಕೊಪ್ಪಳ ಜಿಲ್ಲೆಯ ಹನುಮಸಾಗರ ಗ್ರಾಮದ 3 ಮೂರು ಜನ ಕ್ರೀಡಾ ಪಟುಗಳಾದ ಮೊಹಮ್ಮದ್ ಇರ್ಪಾನ್, ರವಿ ಭೀಮಪ್ಪ ಮಡಿವಾಳರ ಹಾಗೂ ಮಂಜುನಾಥ ಚೌಡಕಿ ಭಾಗವಹಿಸಿ ಪ್ರಶಸ್ತಿಯನ್ನು ಪಡೆದುಕೊಂಡು ಜಿಲ್ಲೆಯ ಹಾಗೂ ಗ್ರಾಮದ ಕಿರ್ತಯನ್ನು ಹೆಚ್ಚಿಸಿದ್ದಾರೆ.
ಕರ್ನಾಟಕ ರಾಜ್ಯ ಜಂಪ್ ರೋಪ್ ಸಂಸ್ಥೆಯ ಗೌರದ ಅಧ್ಯಕ್ಷ ಅಮರೇಗೌಡ ಬಯ್ಯಾಪೂರ, ಉಪಾಧ್ಯಕ್ಷ ಅಬ್ದುಲ್ ಕರೀಂ ಒಂಟೆಳ್ಳಿ, ಕಾರ್ಯದರ್ಶಿ ಅಬ್ದುಲ್ ರಜಾಕ ಟೇಲರ ಹಾಗೂ ಜಿಲ್ಲೆಯ ಹಾಗೂ ಗ್ರಾಮದ ಸ್ಥಳೀಯ ಕ್ರೀಡಾ ಅಭಿಮಾನಿಗಳು ಕ್ರೀಡಾಪಟುಗಳನ್ನು ಅಭಿನಂದಿಸಿದ್ದಾರೆ.