LOCAL NEWS : ಅಭಿನವ ಗವಿಶ್ರೀಗಳ ಸಂಕಲ್ಪಕ್ಕೆ ನಾವೆಲ್ಲರೂ ಸಹಕಾರಿಯಾಗೋಣ : ಗವಿಸಿದಪ್ಪ ಕರಮುಡಿ

You are currently viewing LOCAL NEWS : ಅಭಿನವ ಗವಿಶ್ರೀಗಳ ಸಂಕಲ್ಪಕ್ಕೆ ನಾವೆಲ್ಲರೂ ಸಹಕಾರಿಯಾಗೋಣ : ಗವಿಸಿದಪ್ಪ ಕರಮುಡಿ

ಪ್ರಜಾ ವೀಕ್ಷಣೆ ಸುದ್ದಿ :-

LOCAL NEWS : ಅಭಿನವ ಗವಿಶ್ರೀಗಳ ಸಂಕಲ್ಪಕ್ಕೆ ನಾವೆಲ್ಲರೂ ಸಹಕಾರಿಯಾಗೋಣ : ಗವಿಸಿದಪ್ಪ ಕರಮುಡಿ

ಕುಕನೂರು : ಕೊಪ್ಪಳದ ಶ್ರೀ ಗವಿಸಿದ್ದೇಶ್ವರ ಮಹಾ ಜಾತ್ರೋತ್ಸವದ ಅಂಗವಾಗಿ ಕುಕನೂರು ಪಟ್ಟಣದಲ್ಲಿ “ಸಕಲಚೇತನ ಜಾಗೃತಿ ನಡಿಗೆ”ಯ ಜಾಥಾ ನಡೆಯಿತು.

ಇಂದು ಬೆಳಗ್ಗೆ ಸಂಸ್ಥಾನ ಶ್ರೀ ಕೊಪ್ಪಳ ಗವಿಸಿದ್ದೇಶ್ವರ ಟ್ರಸ್ಟ್ ನ ಶಾಲೆಯಾಗಿರುವ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಕುಕನೂರಿನ ಶಾಲೆಯ ಮಕ್ಕಳಿಂದ “ಸಕಲಚೇತನ ಜಾಗೃತಿ ನಡಿಗೆ” ವಿಶೇಷ ಅಭಿಯಾನದ ಜಾಥಾ ಕಾರ್ಯಕ್ರಮ ನಡೆಯಿತು. ‘ವಿಕಲಚೇತನ ನಡೆ, ಸಕಲ ಚೇತನ ಕಡೆ’ ಎಂಬ ಘೋಷಣೆಯೊಂದಿಗೆ ಈ ಜಾಥಾವು ಕೇಂದ್ರ ಸ್ಥಾನ ಶಾಲೆಯಿಂದ ಹೊರಟು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಅಭಿಯಾನ ನಡೆಯುತ್ತಾ ಮಹಾಮಯಾ ದೇವಿಯ ದೇವಸ್ಥಾನದಿಂದ ಅಂಬೇಡ್ಕರ್ ವೃತ್ತವನ್ನು ಪ್ರವೇಶಿಸಿ ಪಟ್ಟಣದ ಮೆನ್ ಬೇಜಾರು ಮೂಲಕ ಶಾಲೆಯಲ್ಲಿ ಮುಕ್ತಾಯಗೊಳಿಸಲಾಯಿತು.

 ಈ ಜಾಥಾವನ್ನು ಕುರಿತು ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರ ಗವಿಸಿದ್ದಪ್ಪ ಕರಮುಡಿ ಮಾತನಾಡಿ, ‘ ವಿಕಲಚೇತನರಿಗೆ ಅನುಕುಂಪದ ಬದಲಾಗಿ ಅವಕಾಶಗಳನ್ನು ನೀಡಬೇಕು. ಗವಿಸಿದ್ದೇಶ್ವರ ಜಾತ್ರೆಯು ಬಹಳ ವಿಶೇಷವಾದ ಸಮಾಜಮುಖಿ ಕಾರ್ಯಗಳಿಂದ ಹೆಸರುವಾಸಿಯಾಗಿದೆ. ಅಭಿನವ ಗವಿಶ್ರೀಗಳ ಸಂಕಲ್ಪಕ್ಕೆ ನಾವೆಲ್ಲರೂ ಸಹಕಾರಿಯಾಗೋಣ’ ಎಂದು ಹೇಳಿದರು.

 ಬಳಿಕ ಶಾಲೆಯ ಮುಖ್ಯೋಪಾಧ್ಯಾಯ ವೆಂಕಟೇಶ್ ಬಂಡಿವಡ್ಡರ್ ಮಾತನಾಡಿ, ‘ ಅಂಗವಿಕಲರಿಗಾಗಿಯೇ ಈ ಜಾತ್ರೆಯಲ್ಲಿ ವಿಶೇಷವಾದ ಕಾರ್ಯಕ್ರಮಗಳನ್ನು ಗವಿಶ್ರೀಗಳು ಹಮ್ಮಿಕೊಂಡಿದ್ದು, ವಿಶೇಷ ಚೇತನರಿಗೆ ಕೃತಕ ಅಂಗಾಂಗಗಳ ಸಲಕರಣೆಗಳನ್ನು ನೀಡುತ್ತಿದ್ದಾರೆ. ಇದರಿಂದ ವಿಶೇಷ ಚೇತನರು ಸ್ವಾವಲಂಬಿ ಬದುಕನ್ನ ಕಟ್ಟಿಕೊಳ್ಳುವುದಕ್ಕೆ ಸಂಸ್ಥಾನ ಶ್ರೀ ಗವಿಸಿದ್ದೇಶ್ವರ ಮಠವು ಸುಧಾ ಮುಂಚೂಣಿಯಲ್ಲಿ ಇಂಥ ಕೆಲಸ ಕಾರ್ಯಗಳನ್ನು ಮಾಡುತ್ತಲೇ ಬಂದಿದೆ. ಇಂತಹ ಕಾರ್ಯಕ್ರಮದಲ್ಲಿ ನಾವು ಸಹ ಭಾಗಿಯಾಗಿ ಶ್ರೀಗಳ ಇಂತಹ ಕಾರ್ಯಗಳಿಗೆ ನಾವು ಕೈಜೋಡಿಸಿ ವಿಕಲಚೇತನರ ಸಕಲಚೇತನರನ್ನಾಗಿ ಮಾಡುವುದೇ ಈ ಜಾಥಾದ ಮುಖ್ಯ ಉದ್ದೇಶವಾಗಿದೆ. ನಿಮ್ಮ ಸುತ್ತಮುತ್ತಲಿನ ವಿಕಲಚೇತನರ ಪೋಷಕರಿಗೆ ಈ ಮಾಹಿತಿ ನೀಡಿ, ಉಚಿತವಾದ ಸೌಲಭ್ಯ ಪಡೆಯಲು ಸಹಕಾರ ಮಾಡಿ ಎಂದು ಕರೆ ನೀಡಿದರು.

ಈ ಜಾಥಾ ಕಾರ್ಯಕ್ರಮದಲ್ಲಿ ಶಿಕ್ಷಕರಾದ ಎಸ್ ಎಂ ಹಿರೇಮಠ್, ಶರಣಪ್ಪ ಗೂಡ್ಲಾನೂರ್, ಎಸ್ ಜೆ ಪಾಟೀಲ್, ವಿ.ಬಿ ಕಟ್ಟಿ, ಬಿವಿ ಲಕ್ಷಾಣಿ, ಎನ್‌ಟಿ ಸಜ್ಜನ್, ಡಿ ಡಿ ಜೋಗಣ್ಣವರ್, ಆರ್ ಡಿ ರಾಥೋಡ್ ಜಿ ಎಂ ಹೊಸ್ಮನಿ, ರುದ್ರಪ್ಪ ತಳವಾರ್, ವಿಆರ್ ಹಿರೇಮಠ್, ಭುವನೇಶ್ವರಿ, ಮಂಜುಳಾ, ಬಿ ಎಸ್ ಅರಳಿಮಠ ಇನ್ನಿತರ ಶಾಲಾ ಸಿಬ್ಬಂದಿಗಳು ಭಾಗವಹಿಸಿದ್ದರು.

Leave a Reply

error: Content is protected !!