ಮನಸೂರೆಗೊಂಡ ಗವಿಮಠದ ತೆಪೋತ್ಸವ..!!

 

ಕೊಪ್ಪಳ : ಶ್ರೀಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಶ್ರೀ ಮಠದಿಂದ ಜರಗುವ ಸಾಂಪ್ರಾದಾಯಿಕ ಕಾರ್ಯಕ್ರಮಗಳಲ್ಲಿ ಒಂದಾದ ತೆಪ್ಪೋತ್ಸವ ಹಾಗೂ ಸಂಗೀತ ಕಾರ್ಯಕ್ರಮವು ಕಾರ್ಯಕ್ರಮವು ಇಂದು ಸಂಜೆ 5:00ಗಂಟೆಗೆ ಶ್ರೀ ಗವಿಮಠದ ಕೆರೆಯ ದಡದಲ್ಲಿ ಜರುಗಿತು. ಧಾರವಾಡದ ಹೆಸರಾಂತ ಕಲಾವಿದರಾದ ಶ್ರೀ ಎಸ್.ಎಸ್ ಹಿರೇಮಠ ಹಾಗೂ ಸಂಗಡಿಗರು ಮತ್ತು ಹರ್ಲಾಪೂರದ ಶ್ರೀ ಸಿ.ವಿ ಸಿ.ಡಿ ಕಲಾ ತಂಡದವವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ನಂತರ ಶ್ರೀ ಮಠದ ಸಂಪ್ರದಾಯದಂತೆ ಗಂಗಾರತಿ ಜರುಗಿತು. ನಂತರ ಗುಜಮಾಗಡಿ ಗ್ರಾಮದವರಾದ ಈಶ್ವರಯ್ಯ ಮತ್ತು ಶಂಕ್ರಮ್ಮ ಹಿರೇಮಠ ಹಾಗೂ ಮನ್ನಾಪುರ ಗ್ರಾಮದವರಾದ ಈಶ್ವರಯ್ಯ ಸುನಂದ ಹಿರೇಮಠ ದಂಪತಿಗಳವರು ಸಂಕಲ್ಪ ಪೂಜೆ ನೆರವೇರಿಸಿ, ತೆಪ್ಪೋಸ್ಸವಕ್ಕೆ ಚಾಲನೆ ನೀಡಿದರು.

ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ಭವ್ಯ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು, ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕ್ರುತಗೊಂಡು ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮಂಗಳವಾದ್ಯದದೊಂದಿಗೆ ಕರೆ ತಂದು ಮೂಹೂರ್ತಗೊಳಿಸಲಾಯಿತು. ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಹಗ್ಗದ ಮೂಲಕ ಹಾಗೂ ನಾವಿಕರ ಸಹಾಯದಿಂದ ಹುಟ್ಟು ಹಾಕಿ ಎರಡು ಸುತ್ತು ಪ್ರದಕ್ಷೀಣೆಯನ್ನು ಹಾಕಲಾಯಿತು. ಪ್ರದಕ್ಷೀಣೆ ಸಂದರ್ಭದಲ್ಲಿ ಶಕುಂತಲಾ ಭಿನ್ನಾಳ ಹಾಗೂ ಸಂಗಡಿಗರಿಂದ ಶ್ರೀ ಗವಿಮಠದೀಶರ ಗೀತೆಯ ಸಂಗೀತ ಕಾರ್ಯಕ್ರಮ ಜರುಗಿತು. ಬಳಗಾನೂರಿನ ಶ್ರೀ ಶಿವಶಾಂತವೀರ ಮಹಾಸ್ವಾಮಿಗಳು, ಬಿಜಕಲ್‌ನ ಶ್ರೀ ಶಿವಶಾಂತವೀರ ಶರಣರು, ಬಿಜಕಲ್‌ನ ಗುಲಗಂಜಿ ಮಠದ ಶ್ರೀ ಶಿವಲಿಂಗ ಮಹಾಸ್ವಾಮೀಗಳು, ಬೂದಿಹೊಸಳ್ಳಿಯ ಶ್ರೀ ಭೂದೇಶ್ವರ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.

ತೆಪ್ಪೋತ್ಸವ ವಿಶೇಷತೆ: ಜಾತ್ರಾ ಮಹೋತ್ಸವದಲ್ಲಿ ಅತ್ಯಂತ ಕಣ್ಮನ ಸೆಳೆಯುವ ಉತ್ಸವ ತೆಪ್ಪೋತ್ಸವ.ತೆಪ್ಪೋತ್ಸವಕ್ಕೆ ಭಕ್ತರು ಆಗಮಿಸಿ ಮಹಾಮಹಿಮ ಕತೃ ಗವಿಶಿದ್ಧೇಶನನ್ನು ಸಂಕಲ್ಪ ಮಾಡಿಕೊಂಡರೆ ಇಷ್ಟಾರ್ಥ ಸಿದ್ಧಿಸುತ್ತದೆಂಬ ನಂಬಿಕೆ ಭಕ್ತಾದಿಗಳಲ್ಲಿದೆ. ತೆಪ್ಪೋತ್ಸವ ಎಂದರೆ ಭಾವಿ, ಕೆರೆ, ನದಿಗಳಲ್ಲಿ ತೆಪ್ಪದ ಮೇಲೆ ನಡೆಯುವ ದೇವರ ಉತ್ಸವವೆಂದು ಅರ್ಥ. ಎರಡು ತೆಪ್ಪಗಳ ನಡುವೆ ಹಲಗೆಯಿಂದ ನಿರ್ಮಿಸಲಾದ ವೇದಿಕೆಯಲ್ಲಿ ಶ್ರೀ ಗವಿಸಿದ್ದೇಶ್ವರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಾಳೆ, ಕಬ್ಬು, ಮಾವಿನ ತಳಿರು ತೋರಣ, ಹಾಗೂ ಹೂವಿನಿಂದ ಅಲಂಕೃತಗೊಂಡ ಪಲ್ಲಕ್ಕಿಯಲ್ಲಿ ಶ್ರೀ ಗವಿಸಿದ್ಧೇಶ್ವರ ಮೂರ್ತಿಯನ್ನು ಮಂಗಳವಾದ್ಯಗಳೊಂದಿಗೆ ಕರೆ ತಂದು ಮೂಹೂರ್ತಗೊಳಿಸಿದ ತೆಪ್ಪವನ್ನು ನಾಲ್ಕು ದಿಕ್ಕುಗಳಲ್ಲಿ ಭಕ್ತಾಧಿಗಳು ಹಗ್ಗದ ಮೂಲಕ ಹಾಗೂ ನಾವಿಕರ ಸಹಾಯದಿಂದ ಹುಟ್ಟು ಹಾಕಿ ಸಾಗಿಸುತ್ತಾರೆ.

ಸುಂದರ ವಾತಾವರಣದ ಶುಭ ಸಾಯಂಕಾಲ ಸೂರ್ಯನ ಬಂಗಾರ ಕಿರಣ ನಿರ್ಗಮನ, ಚಂದ್ರನ ಬೆಳಕಿನ ಕಿರಣಗಳ ಆಗಮನದಲ್ಲಿ ಜರುಗುವ ಈ ಮಹೋತ್ಸವ ಭಕ್ತರನ್ನು ಆನಂದದಲ್ಲಿ ಭಕ್ತಿಯಲ್ಲಿ ತೇಲಾಡಿ ಮಂತ್ರಮುಗ್ದಗೊಳಿಸುತ್ತದೆ. ವಿದ್ಯುತ್ ದೀಪಾಲಂಕಾರದಿಂದ ಶೃಂಗಾರಗೊAಡ

Leave a Reply

error: Content is protected !!