ಶಿರಹಟ್ಟಿ : ತಾಲೂಕು ಪಂಚಾಯಿತಿ ಸದಸ್ಯರಾದ ದೇವಪ್ಪ ಲಮಾಣಿ ಅವರ ಮಾರ್ಗದರ್ಶನ ಹಾಗೂ ನೇತೃತ್ವದಲ್ಲಿ ಛಬ್ಬಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷರಾಗಿ ಸೋಮವ್ವ ಹನುಮಂತ ಲಮಾಣಿ ಹಾಗೂ ಉಪಾಧ್ಯಕ್ಷರಾಗಿ ರಮೇಶ್ ಖೀರಪ್ಪ ಲಮಾಣಿ ಇವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿರಹಟ್ಟಿ ತಾಲೂಕು ಪಂಚಾಯತ್ ಸದಸ್ಯರಾದ ದೇವಪ್ಪ ಲಮಾಣಿ ಅವರು ಛಬ್ಬಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವತೋಮುಖ ಬೆಳವಣಿಗೆಗೆ ಪ್ರೇರಕವಾಗಿ ಅಧ್ಯಕ್ಷ ಉಪಾಧ್ಯಕ್ಷರು ಕೆಲಸ ಮಾಡಬೇಕು.
ಜನ ನಮ್ಮ ಮೇಲೆ ವಿಶ್ವಾಸವಿಟ್ಟು ಅಧಿಕಾರ ನೀಡಿದ್ದಾರೆ ಅವರಿಗೆ ನಮ್ಮ ಕೈಲಾದ ಸಹಾಯ ಸಹಕಾರ ಮಾಡಬೇಕು. ಛಬ್ಬಿ ಗ್ರಾಮ ಪಂಚಾಯಿತಿಯನ್ನು ಮಾದರಿ ಗ್ರಾಮ ಪಂಚಾಯಿತಿಯನಾಗಿ ಮಾಡಬೇಕು ಎಂದು ನೂತನವಾಗಿ ಆಯ್ಕೆಯಾದವರಿಗೆ ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಶ್ರೀಕಾಂತ್ ಗಾಳಿ, ಕೇಶವ ಅಂಗಡಿ, ಸುವರ್ಣವ್ವ ಆರಿ, ರೇಣುಕಾ ತಿಮ್ಮಿ ಶೆಟ್ಟರ್, ದುರ್ಗಪ್ಪ ಪೂಜಾರ್, ಗ್ರಾಮದ ಮುಖಂಡರಾದ ಹೆಗ್ಗಪ್ಪ ರುದ್ರಪ್ಪ ಲಮಾಣಿ, ಸಿ.ಡಿ. ರಾಥೋಡ್, ಹನುಮಂತಪ್ಪ ಲಮಾಣಿ, ಯಲ್ಲಪ್ಪ ಗುಂಡೂರ್, ಹೇಮಂತ್ ಲಮಾಣಿ, ಮರಿಯಪ್ಪ ಮ್ಯಾಗೇರಿ, ಕುಮಾರ್ ಲಮಾಣಿ, ದಯಾನಂದ ಲಮಾಣಿ, ದೇವು ಲಮಾಣಿ, ಈರಣ್ಣ ಚೌಹಾಣ್, ಷಣ್ಮುಖ ಪೂಜಾರ್ ಹಾಗೂ ಗ್ರಾಮಪಂಚಾಯಿತಿ ಸಿಬ್ಬಂದಿ ವರ್ಗದವರು ಚುನಾವಣಾ ಅಧಿಕಾರಿಗಳು ಮುಂತಾದವರು ಉಪಸ್ಥಿತರಿದ್ದರು.