ವಿಶೇಷ ಬರಹ : ನನ್ನ ಆಯ್ಕೆ ಕನ್ನಡಿಗರ ನಂದಿನಿಯೇಹೊರೆತು ಗುಜರಾತಿಗಳ ಅಮುಲ್ ಅಲ್ಲ..!!

You are currently viewing ವಿಶೇಷ ಬರಹ : ನನ್ನ ಆಯ್ಕೆ ಕನ್ನಡಿಗರ ನಂದಿನಿಯೇಹೊರೆತು ಗುಜರಾತಿಗಳ ಅಮುಲ್ ಅಲ್ಲ..!!

💛❤️ ನಂದಿನಿ (Nandini) ಮತ್ತು ಅಮುಲ್(Amul)
ವ್ಯಾಪಾರೀಕರಣ ಮತ್ತು ಅಸ್ಮಿತೆ

ಕರ್ನಾಟಕದಲ್ಲಿ ಅಮುಲ್ ತನ್ನ ಮೊಸರು ಮತ್ತು ಇತರ ಉತ್ಪನ್ನವನ್ನು ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ. ಇದೇನೋ ಸರಿ. ಯಾವುದೇ ವಸ್ತು ದೇಶದ ಯಾವುದೇ ಭಾಗದಲ್ಲಿ ಮಾರಾಟಕ್ಕೆ ನಿರ್ಬಂಧ ಹಾಕುವ ಯಾವುದೇ ಕಾನೂನು ಇಲ್ಲ ಎನ್ನುವುದು ನನ್ನ ಭಾವನೆ. ಇದೆಲ್ಲ ಬದಿಗಿಟ್ಟು ನೋಡೋಣ.

ಈ ಎಲ್ಲ ಬೆಳವಣಿಗೆಯ ಮದ್ಯೆ ಹಾಗೆ ಸುಮ್ಮನೆ ನಾನು ಭಾರತದ 2ನೇ ಅತಿ ದೊಡ್ಡ ಹಾಲು ಒಕ್ಕೂಟ ಯಾವುದು ಅಂತ ಸರ್ಚ್ ಮಾಡಿದಾಗ ದೊರೆತ ಉತ್ತರ ಕೆಎಂಎಫ್.ಒಕ್ಕೂಟ ಭಾರತದಲ್ಲಿ ಕ್ಷೀರಕ್ರಾಂತಿಗೆ ಕಾರಣವಾದ ಕುರಿಯನ್ ವರ್ಗೀಸ್ ಅವರಿಂದ ಸ್ಥಾಪಿತ ಅಮುಲ್ ಬಳಿಕ 2ನೇ ಸ್ಥಾನದಲ್ಲಿ ನಮ್ಮ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟ ಇದೆ.. ಇತ್ತೀಚೆಗೆ ಕೆಎಂಎಫ್ ಅನ್ನು ಅಮುಲ್ ಜೊತೆ ವಿಲೀನ ಮಾಡುವ ಪ್ರಕ್ರಿಯೆ ಬಗ್ಗೆ ಮಾತುಕತೆ ನಡೆದಿದೆ ಅಂತ ಅಲ್ಲಲ್ಲಿ ಗುಸುಗುಸು ಮಾತುಕತೆ ಓಡಾಡುತ್ತಾ ಇತ್ತು. ಸುಮ್ಮನೆ ನೋಡುವುದಾದರೆ ಬೆಂಕಿ ಇಲ್ಲದೆ ಹೊಗೆ ಆಡದು ಅಲ್ವಾ…? ಈ ಪ್ರಕ್ರಿಯೆ ಬಗ್ಗೆ ವ್ಯಾಪಕ ವಿರೋಧ ಬಂದಾಗ ಅದೆಲ್ಲ ವದಂತಿ ಅಷ್ಟೇ ಎಂದು ಕೆಎಂಎಫ್ ಹೇಳಿಕೆ ನೀಡಿ ಸುಮ್ಮನಾಗಿತ್ತು.

ಇನ್ನು ಹಾಲಿನ ಗುಣಮಟ್ಟವೂ ಹಾಗೆ ನಂದಿನಿ ತನ್ನ ಗುಣಮಟ್ಟಕ್ಕೆ ಹೆಸರುವಾಸಿ ಆಗಿದೆ. ಕರ್ನಾಟಕದ ಬ್ರಾಂಡ್ ಆಗಿ ತಿರುಪತಿಯ ಸನ್ನಿಧಾನದ ಪ್ರಸಾದ ತಯಾರಿಕೆಗೂ ಬಳಕೆ ಆಗುತ್ತಿದೆ ಅಂದ್ರೆ ನಮಗೆಲ್ಲ ಹೆಮ್ಮೆ ಅಲ್ವಾ..? ಗುಣಮಟ್ಟದಲ್ಲಿ ಎಂದಿಗೂ ರಾಜಿ ಮಾಡಿಕೊಳ್ಳದೆ ಗ್ರಾಹಕರಿಗೆ ಕೈಗೆ ಎಟಕುವ ದರದಲ್ಲಿ ನಂದಿನಿ ತನ್ನ ಉತ್ಪನ್ನ ಮಾರಾಟ ಮಾಡುತ್ತಾ ಬಂದಿದೆ. ಈಗ ಗೊತ್ತಿದ್ದೋ ಗೊತ್ತಿಲ್ಲದೆಯೋ ಅಮುಲ್ ಸದ್ದಿಲ್ಲದೆ ನಂದಿನಿಯನ್ನು ತಿನ್ನಲು ಹೊಂಚು ಹಾಕಿ ಕುಳಿತುಕೊಂಡು ಇರಬಹುದು. ತನ್ನ ಮಾರುಕಟ್ಟೆ ವಿಸ್ತರಣೆ ಎನ್ನುತ್ತಾ ನಿಧಾನವಾಗಿ KMF ಅನ್ನು ನುಂಗಬಹುದು ಎನ್ನುವ ಆತಂಕ ನಮಗೆಲ್ಲರಿಗೂ ಇದ್ದೆ ಇದೆ. ಆದ್ದರಿಂದ ನಾವೆಲ್ಲರೂ ನಮ್ಮ ಹೆಮ್ಮೆಯ ನಂದಿನಿ ಬ್ರಾಂಡ್ ಅನ್ನು ಉಳಿಸಲೇ ಬೇಕು.

ನಂದಿನಿಯನ್ನು ಉಳಿಸಲು ರಾಜಕಾರಣಿಗಳಿಗೆ ಮನಸ್ಸಿದೆಯೋ ಇಲ್ವೋ ಆದ್ರೆ ನಾವು ಪ್ರತಿನಿತ್ಯ ನಂದಿನಿಗೆ ಸಂಬಂಧಪಟ್ಟ ವಾರ್ತೆ ಗಮನಿಸುತ್ತಾ ಇರಬೇಕು ಮತ್ತು ವಿಲೀನದ ಮಾತುಕತೆ ಬಂದ್ರೆ ನಾವು ವಿರೋಧ ಮಾಡಲೇ ಬೇಕು. ಯಾಕಂದರೆ ನಮ್ಮ ರೈತರಿಗೆ ಏನ್ ಆಗುತ್ತೋ ಹೇಳೋದು ಯಾರು..? ಏಕಸ್ವಾಮ್ಯ ಬಂದುಬಿಟ್ಟರೆ ಅವರಾಡಿದ್ದೇ ಆಟ ಅಷ್ಟೇ ಮತ್ತು KMF ಉದ್ಯೊಗಗಳು ಕೂಡ ಅವರದ್ದೆ ಆಡಳಿತವಾದ ಅವರಿಗೆ ಅಲ್ಲಿನ ಉದ್ಯೋಗಗಳು ಸಿಗುತ್ತವೆ ಮತ್ತು ಸುಮಾರು ವರ್ಷದ ನಮ್ಮ ಹೆಮ್ಮೆಯ ನಂದಿನಿ ಹೇಳ ಹೆಸರಿಲ್ಲದಂತೆ ಹೋಗುತ್ತಾಳೆ ಅಮೂಲ್ ಗೆ ತಾನು ಮಾರುಕಟ್ಟೆಯಲ್ಲಿ ವಿಸ್ತರಣೆಗಾಗಿ ನಂದಿನಿ ನುಂಗುವುದು ಎಷ್ಟು ಸರಿ ಇಗಾಗಲೆ ಕರ್ನಾಟಕದ ವಿಜಯಾ ಬ್ಯಾಂಕ್ ಸಿಂಡಿಕೇಟ್ ಬ್ಯಾಂಕ್ ಮಣ್ಣಲ್ಲಿ ಮಣ್ಣಾಗಿ ಹೋಯ್ತು ಅದನ್ನು ಕಷ್ಟ ಪಟ್ಟು ಬೆಳೆಸಿ ಒಂದು ಬ್ರ್ಯಾಂಡ್ ಆಗಿ ಬೆಳಸಿದ ಕನ್ನಡಿಗರು ಅಂದರೆ ಸಂಸ್ಥಾಪಕರು ಅದೆ ಬ್ಯಾಂಕಿನ ಮೂಲೆಗೆ ಇಂದು ಸರಿದು ಹೋಗಿದ್ದಾರೆ ಬೇರೆ ಯಾರದ್ದೊ ಹೆಸರು ತಂದು ಕೂರಿಸಿದ್ದಾರೆ ಇಷ್ಟೆಲ್ಲ ಆದ ಮೇಲು ಕನ್ನಡಿಗರು ಎಚ್ಚೆತ್ತುಕೊಳ್ಳದಿದ್ದರೆ ಕರ್ನಾಟಕವನ್ನು
ಆ ಪರಮಾತ್ಮ ನೆ ಕಾಪಾಡಬೇಕು ಸ್ವಾಭಿಮಾನ ಇಲ್ಲನ ಜನ ಬದುಕಿದ್ದು ಉಪಯೋಗ ಇಲ್ಲ ನಮ್ಮ ನೆಲದ ಪ್ರತಿಯೊಂದು ಹೆಸರುಗಳು ದೇಶಕ್ಕೆ ಹೆಸರಾದವು ಇಂದು ಒಂದೊಂದೆ ನಮ್ಮ ಕಣ್ಣೆದುರೆ ಕಣ್ಮರೆಯಾಗಿ ಹೇಳ ಹೆಸರಿಲ್ಲದಂತೆ ಹೋಗುತ್ತಿವೆ.

ನಾವು ಎಚ್ಚೆತ್ತುಕೊಳ್ಳದಿದ್ದರೆ ನಮ್ಮದು ಎನ್ನುವುದಕ್ಕೆ ಯಾವುದೆ ಪುರಾವೆಗಳು ಇರೋದಿಲ್ಲ…

ಚ್ಯಾಲುಕ್ಯ ಕದಂಬರು ಹೊಯ್ಸಳರು ಗಂಗರು ರಾಷ್ಟ್ರಕೂಟರು ಆಳಿದ ನಾಡಲ್ಲಿ ಕನ್ನಡಿಗರು ನೀರಾಭಿಮಾನಿಗಳಾಗಿರೋದು ದುರಂತ.ಹಿಂದಿ ಹೇರಿಕೆ ಇರ್ಲಿ ಬಿಡಿ ಏನು ತೊಂದ್ರೆ ಇಲ್ಲ ಅನ್ನೊವ್ರೆ ಮೂರು ಬಿಟ್ಟು ಅಮೂಲ್ ಬಂದ್ರೆ ಬರ್ಲಿ ಬಿಡಿ ಏನ್ ಪ್ರಾಬ್ಲಮ್!? ಅಂತಾವ್ರೆ.
ಇಷ್ಟರಮಟ್ಟಕ್ಕೆ ಒಂದು ಪಕ್ಷದ ಕುರುಡು ಅಭಿಮಾನಿಗಳಾಗಬಾರದು. ಇಂತಹ ಗುಲಾಮಗಿರಿ ಮಾಡೋರನ್ನ ಕನ್ನಡಿಗರು ತಿರಸ್ಕಾರ ಮಾಡಬೇಕು.ನಂದಿನಿಗೆ ನಷ್ಟವಾದರೆ ಕನಿಷ್ಟ ಒಂದು ಕೋಟಿ ಕನ್ನಡಿಗ ಕುಟುಂಬಗಳು ಬೀದಿಗೆ ಬೀಳ್ತವೆ.

ಬರಹ ಕೃಪೆ:- ಸಾಮಾಜಿಕ ಜಾಲತಾಣ

Leave a Reply

error: Content is protected !!