ಯಲಬುರ್ಗಾ : ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾದ ಬಸವರಾಜ್ ರೆಡ್ಡಿ ಯಲಬುರ್ಗಾ ಪಟ್ಟಣದ ಮಗ್ಗಿ ಬಸವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಲು ತೆರಳಿದರು.
ಕಾರ್ಯಕರ್ತರನ್ನ ಉದ್ದೇಶಿಸಿ ಮಾತನಾಡುತ್ತಿರುವ ಬಸವರಾಜ ರಾಯರೆಡ್ಡಿ
ಈ ಸಂದರ್ಭದಲ್ಲಿ ತೆರೆದ ವಾಹನದಲ್ಲಿ ಪ್ರಚಾರಕ್ಕಾಗಿ ಏರಿದ್ದ ಅಳಿಯ ಹಾಗೂ ಮಗಳನ್ನು ವಾಹನದಿಂದ ಕೆಳಗೆ ಇಳಿಸಿ ಫ್ಯಾಮಿಲಿ ಮೆಂಬರ್ ಆರ್ ನಾಟ್ ಅಲೋವೆಡ್ ಎಂದು ಸಾರ್ವಜನಿಕವಾಗಿ ಹೇಳಿದರು.
ಮಗಳು ಮಮತಾ ರಾಯರೆಡ್ಡಿ, ಲಕ್ಷ್ಮಣ ಸವದಿ ಅವರ ಹತ್ತಿರದ ಸಂಬಂಧಿಯಾದ ಅಳಿಯ ರತನ್ ಭಾಟೆ. ಇವರನ್ನು ಪ್ರಚಾರ ವಾಹನದಿಂದ ಕೆಳಗೆ ಇಳಿಸಿ ನೆರೆದಿದ್ದವರಲ್ಲಿ ಆಶ್ಚರ್ಯ ಮೂಡಿಸುವಂತೆ ಮಾಡಿದರು. ಇನ್ನೇನು ಕೆಲವೇ ಕ್ಷಣಗಳಲ್ಲಿ ಅಧಿಕೃತ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.