ಕುಕನೂರು : ತಾಲೂಕಿನ ನೆಲಜೇರಿಗ್ರಾಮ ಪಂಚಾಯತ ಪಿಡಿಓ ಆನಂದ ಎಲಿಗಾರ ಎಂಬುವರು ಗುರುವಾರ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ನೆಲೆಜೇರಿ ಗ್ರಾಮ ಪಂಚಾಯತ ವ್ಯಾಪ್ತಿಯ ವಟಪರವಿ ಗ್ರಾಮದವರು ಫಾರ್ಮ್ ನಂ,9 ಗಾಗಿ ಅರ್ಜಿಯನ್ನು ಸಲಿಸಿದ್ದು ಅರ್ಜಿ ವಿಲೇವಾರಿಗೆ ಇಪ್ಪತ್ತು ಸಾವಿರಗಳಿಗೆ ಬೇಡಿಕೆ ಇಟ್ಟಿದ್ದರು ಎಂದು ಹೇಳಲಾಗುತ್ತಿದೆ. ಈ ವೇಳೆ 15 ಸಾವಿರ ಕೊಡುವುದಾಗಿ ಒಪ್ಪಿ, ಲೋಕಾಯುಕ್ತ ಕ್ಕೆ ದೂರು ನೀಡಿದ್ದಾರೆ.
ಗುರುವಾರ ಕೂದರಿಮೋತಿ ಗ್ರಾಮ ಪಂಚಾಯಿತಿ ಯಲ್ಲಿ ಪಿಡಿಓ ಬದಲಾಗಿ ಅವರ ಕಂಪ್ಯೂಟರ್ ಆಪರೇಟರ್ ಬಳಿ ಹಣ ನೀಡಲು ಹೇಳಿದಿದ್ದಾರೆ. ಹಣ ನೀಡುವ ಸಂದರ್ಭದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅಧಿಕಾರಿಯನ್ನು ಲೋಕಾಯುಕ್ತ ಕರೆದ್ಯೋದಿದ್ದಾರೆ ಎಂದು ಹೇಳಲಾಗುತ್ತಿದ್ದು ಈ ಕುರಿತು ಇನ್ನಷ್ಟು ಮಾಹಿತಿಗಳು ಇಂದು ಹೊರ ಬೀಳುವ ಮಾಹಿತಿ ಇದೆ.
ಲೋಕಾಯುಕ್ತ ಬೆಲೆಗೆ ಬಿದ್ದ ನೆಲಜೇರಿ ಪಿಡಿಓ
