ಯಲಬುರ್ಗಾ-ಕುಕನೂರು ತಾಲೂಕಿನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವ ದಿನೇಶ್ ಗುಂಡೂರಾವ್
ಕುಕನೂರು : ‘ಆರೋಗ್ಯ ಮತ್ತು ಶಿಕ್ಷಣ ಪ್ರತಿಯೊಬ್ಬರಿಗೂ ಅತ್ಯವ್ಯಶಕವಾಗಿದ್ದು, ಇವುಗಳನ್ನು ಜನಸಾಮಾನ್ಯರಿಗೆ ಮೊದಲ ಆದ್ಯತೆಯಲ್ಲಿ ಒದಗಿಸಬೇಕು. ಈ ಮಹತ್ತರ ಕಾರ್ಯವನ್ನು ನಿಮ್ಮ ಶಾಸಕರು ಆಸಕ್ತಯಿಂದ ಮಾಡುತ್ತಾರೆ’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶಾಸಕ ಬಸವರಾಜ ರಾಯರೆಡ್ಡಿ ಅವರ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.
ಇಂದು ಸಣ್ಣನೀರಾವರಿ ಇಲಾಖೆ, ಜಿಲ್ಲಾ ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಬಳಗೇರಿ ಮತ್ತು ಬೂದಗುಂಪ ಗ್ರಾಮಗಳ ಮಧ್ಯ ಹರಿಯುತ್ತಿರುವ ಹಳ್ಳಕ್ಕೆ ಬ್ಯಾರೇಜ್ ಕಂ ಬ್ರಿಡ್ಜ್ ನಿರ್ಮಾಣ, ನೂತನ ಪ್ರಥಾಮೀಕ ಆರೋಗ್ಯ ಕೇಂದ್ರ ಮತ್ತು ಮೊರಾರ್ಜಿ ವಸತಿ ಶಾಲೆ ಬಳಗೇರಿ ಪ್ರಾರಂಭೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ‘ತಮ್ಮ ಸುಧೀರ್ಘ 40 ವರ್ಷಗಳಿಂದ ರಾಜಕೀಯದಲ್ಲಿ ಇದ್ದರೂ ಸಹಿತ ಮೊದಲ ಬಾರಿಗೆ ಶಾಸಕರಾದ ಹುಮ್ಮಸ್ಸು ಇದೆ. ಅದೇ ರೀತಿಯಲ್ಲಿ ಕೇಲಸ ಮಾಡಿತ್ತಿದ್ದಾರೆ. ಶಾಸಕ ಬಸವರಾಜ ರಾಯರೆಡ್ಡಿಯವರು ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಕೇಲಸ ಮಾಡುತ್ತಿದ್ದು, ಇಷ್ಟು ಅಭಿವೃದ್ದಿ ಕೇಲಸಗಳು ಮುಖ್ಯಮಂತ್ರಿ ಕ್ಷೇತ್ರದಲ್ಲೂವು ಆಗಿದೀಯೋ ಇಲ್ಲವೂ ಗೋತ್ತಿಲ್ಲ ಎಂದರು.
ಶಾಸಕ ಬಸವರಾಜ ರಾಯರೆಡ್ಡಿ ಮಾತನಾಡಿ, ‘ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರೆಂಟಿ ಯೋಜನೆಗಳ ಮೂಲಕ ಕೋಟ್ಯಾಂತರ ರೂಪಾಯಿಗಳನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ನೀಡುತ್ತಿದ್ದು, ಇದನ್ನು ವಿರೋಧ ಪಕ್ಷದವರಿಗೆ ಸಹಿಸಲೂ ಆಗುತ್ತಿಲ್ಲ, ಶೀಘ್ರದಲ್ಲಿ ಕುಕನೂರು ಪಟ್ಟಣದಲ್ಲಿ 100 ಹಾಸಿಗೆ ಉಳ್ಳ ಆಸ್ಪತ್ರೆಯ ಶಂಕುಸ್ಥಾಪನೆ ಮಾಡಲಿದ್ದೇವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಅಧಿಕಾರಿ ಟಿ. ಲಿಂಗರಾಜ್, ಸಣ್ನ ನೀರಾವರಿ ಇಲಾಖೆಯ ಅಧಿಕಾರಿ ಬಿಎಸ್ ಪಾಟೀಲ್, ಯಲಬುರ್ಗಾ ತಹಶೀಲ್ದಾರ್ ಬಸವರಾಜ್ ಚೆನ್ನಳ್ಳಿ, ಕುಕನೂರು ಗ್ರೇಡ್ 2 ತಹಶೀಲ್ದಾರ್ ಮುರಳಿಧರ್ ರಾವ್ ಕುಲಕರ್ಣಿ, ಹನಮಂತ ಗೌಡ ಪಾಟೀಲ್, ಬಸವರಾಜ್ ಉಳ್ಳಾಗಡ್ಡಿ, ಯಂಕಣ್ಣ ಯರಾಶಿ, ವೀರನಗೌಡ ಬಳೂಟಗಿ, ಸತ್ತನಾರಯಣಪ್ಪ ಹರಪನಳ್ಳಿ, ಚಂದ್ರಶೇಖರಯ್ಯ ಹಿರೇಮಠ, ಪಿಡಿಒ ಮಹೇಶ್ ಗೌಡ, ಗ್ರಾ.ಪಂ. ಅಧ್ಯಕ್ಷೆ ಗೌರಮ್ಮ ವಿ. ಕುರ್ತುಕೋಟಿ ಹಾಗೂ ಗ್ರಾ. ಪಂ ಸರ್ವಸದಸ್ಯರು, ಶಾಲಾ ಮಕ್ಕಳು ಮತ್ತು ಗ್ರಾಮಸ್ಥರು ಇದ್ದರು.