ಕುಕನೂರು : ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ಇರುವಂತೆ,ಯಲಬುರ್ಗಾ ಕ್ಷೇತ್ರದ ಹಿಂದುಳಿದ ನಾಯಕ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ, ಈರಪ್ಪ ಕುಡಗುಂಟಿ ಅವರು ಇಂದು ಬೆಳಿಗ್ಗೆ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಪಕ್ಷದ ರಾಜ್ಯ ಅದ್ಯಕ್ಷರಾದ ಡಿಕೆ ಶಿವುಕುಮಾರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಕುಕನೂರ ಕ್ಷೇತ್ರ ಹಾಗೂ ಮಂಗಳೂರು ಕ್ಷೇತ್ರದಲ್ಲಿ ಎರಡು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ ರಾಜಕೀಯ ಅನುಭವ ಇರುವ ಈರಪ್ಪ ಕುಡಗುಂಟಿ ಕುಕನೂರ ಮತ್ತು ಯಲಬುರ್ಗಾ ಕ್ಷೇತ್ರದಲ್ಲಿ ತನ್ನದೇ ಆದ ಬಲಿಷ್ಠ ಯುವ ಪಡೆ, ಅಭಿಮಾನಿ ಬಳಗ, ಹಿತೈಷಿಗಳನ್ನು ಹೊಂದಿದ್ದಾರೆ.
ಈ ಹಿಂದೆ ೨೦೧೮ರ ಚುನಾವಣೆಯಲ್ಲಿ ಕಟ್ಟಾ ನಿಷ್ಠಾವಂತ ಕಾರ್ಯಕರ್ತನಾಗಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿದ್ದ ಹಾಲಪ್ಪ ಆಚಾರ ಗೆಲವಿನಲ್ಲಿ ಇವರ ಪ್ರಮುಖ ಪಾತ್ರವಹಿಸಿದ್ದರು. ಹಾಲಪ್ಪ ಆಚಾರ ಗೆದ್ದು ಕೇವಲ ಎರಡು ವರ್ಷಗಳ ಕಾಲ ಅವರ ಜೊತೆ ಗುರುತಿಸಿಕೊಂಡಿದ್ದ ಕುಡಗುಂಟಿ ಶಾಸಕರ ಜೊತೆ ಮುನಿಸಿಕೊಂಡು ಸಕ್ರೀಯ ರಾಜಕರಣದಿಂದ ದೂರ ಉಳಿದು ಈಗ ಮಂತ್ರಿ ಆಚಾರ್ ವಿರುದ್ಧ ತೊಡೆ ತಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
ಕಳೆದ ಚುನಾವಣೆಯಲ್ಲಿ ಹಾಲಪ್ಪ ಆಚಾರ ಪರವಾಗಿ ಕೆಲಸ ಮಾಡಿ ಅವರ ಬಲಗೈ ಬಂಟನAತೆ ಇದ್ದ ಈರಪ್ಪ ಕುಡಗುಂಟಿ ಈಗ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿರುವುದು ಯಲಬುರ್ಗಾ ಕ್ಷೇತ್ರದಲ್ಲಿ ಬಾರಿ ಸಂಚಲವನ್ನು ಸೃಷ್ಠಿಮಾಡಿದ್ದು ಇದು ಬಿಜೆಪಿಗೆ ಬಾರಿ ಹೊಡೆತವನ್ನು ನೀಡಬಹುದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.