ಕುಕನೂರು : ಪಟ್ಟಣ ಹೃದಯ ಭಾಗವಾದ ತೇರಿನ ಗಟ್ಟಿ ಹತ್ತಿರ ಕಳೆದು 8 ದಿನಗಳಿಂದ ಚರಂಡಿ ನೀರು ರಸ್ತೆ ಮೇಲೆಯೆ ಹರಿಯುತ್ತದ್ದರೂ ಸಹಿತ ಅಧಿಕಾರಿಗಳು ಹಾಗೂ ಪೌರ ಕಾರ್ಮಿಕರು ವ್ಯರ್ಥ ಪ್ರಯತ್ನ ಮಾಡುವ ಮೂಲಕ ಸಮಸ್ಯೆಯನ್ನು ಮತ್ತಷ್ಟು ಜಠಿಲಗೊಳಿಸಿದ್ದಾರೆ.
ಪಟ್ಟಣದ ಇಟಗಿ ಮೊಸುತಿಯಿಂದ ತೇರಿನ ಗಡ್ಡಿ ಮೂಲಕ ಮುಖ್ಯ ಚರಂಡಿ ಸೇರಬೇಕಿದ್ದ ಚರಂಡಿ ನೀರು, ಚರಂಡಿಯಲ್ಲಿ ಕಲ್ಲು ಹಾಗೂ ಪ್ಲಾಸ್ಟಿಕ್ ಹಾಳೆಗಳಿಂದ ತುಂಬಿದ್ದು ನೀರು ಹರಿದು ಹೋಗದೆ ಚರಂಡಿ ಮೇಲಿಂದ ಮೇಲೆ ಬಂದು ರಸ್ತೆಯಲ್ಲಿ ಹರಿಯುತ್ತಿದ್ದೆ. ಇದರಿಂದ ಇಲ್ಲಿನ ಜನತೆ ಕೊಳಚೆ ನೀರಲ್ಲೇ ನೆಡೆದುಕೊಂಡು ಹೋಗುವ ಪರಸ್ಥಿತಿ ನಿರ್ಮಾಣವಾಗಿದೆ. ಅದಲ್ಲೇ ದೇವಸ್ಥಾನಕ್ಕೂ ಸಹಿತ ಈ ನೀರಲ್ಲೇ ಹಾದು ಹೋಗಬೇಕಿದೆ. ಚರಂಡಿಯಲ್ಲಿ ಸಿಕ್ಕಿಕೊಂಡಿರುವ ಕಸವನ್ನು ಸ್ವಚ್ಚಗೊಳಿದ ಕಾರಣಕ್ಕೆ ಚರಂಡಿಯು ಬ್ಲಾಕ್ ಆಗಿದೆ ಎಂದು ಹೇಳಲಾಗುತ್ತಿದ್ದೆ.
ಚರಂಡಿಯಲ್ಲಿ ಸಿಕ್ಕಿಹಾಕಿಕೊಂಡಿರುವ ಪ್ಲಾಸ್ಟಿಕ್ ಹಾಗೂ ಚರಂಡಿಯನ್ನು ಸಚ್ವಗೊಳಿಸದೆ ಟಯ್ಲೇಟ್ ಕ್ಲಿನರ್ ಮೂಲಕ ಸುಮಾರು 5 ರಿಂದ 6 ಟ್ಯಾಂಕರ್ ನೀರುಯನ್ನು ಹೊರಚೆಲ್ಲಿದರು ಸಹಿತ ನೀರಿನ ಹರಿವು ಮಾತ್ರ ಕಡಿಮೆಯಾಗಿಲ್ಲ ಎಂದು ಇಲ್ಲಿನ ಜನ ಮತನಾಡಿಕೊಳ್ಳುತ್ತಿದ್ದಾರೆ.
ಒಟ್ಟಿನಲ್ಲಿ ಪಟ್ಟಣದ ಹೃದಯ ಭಾಗದಲ್ಲಿಯೇ ಸಮಸ್ಯೆಯನ್ನು ಒಂದು ವಾರವಾದರೂ ಸಹಿತ ಬಗೆಹರಿಸದ ಕುರಿತು ಸಾರ್ವಜನಿಕರು ಪಟ್ಟಣ ಪಂಚಾಯತಿಯ ಅಡಳಿತ ವ್ಯವಸ್ಥೆಯ ಕುರಿತು ರೋಸಿಹೋಗಿದ್ದಾರೆ.