ಅಬಕಾರಿ ತೆರಿಗೆ ಹೆಚ್ಚಿಸುವ ಸುಳಿವು ನೀಡಿದ ಶಾಸಕ ಬಸವರಾಜ ರಾಯರೆಡ್ಡಿ


ಕುಕನೂರು : ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳನ್ನು ಈಡೇರಿಸುವ ಮುಂದಾಗಿದ್ದು ಇದಕ್ಕೆ ಹಣ ಹೊಂದಾಣಿಕೆ ಸಲುವಾಗಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಲಾಗುತ್ತದೆ ಎಂಬ ಸುಳಿವನ್ನು ಶಾಸಕ ಬಸವರಾಜ ರಾಯರೆಡ್ಡಿ ಅವರು ನೀಡಿದ್ದಾರೆ.
ಪಟ್ಟಣದ ತೇರಿನ ಗಡ್ಡೆ ಹತ್ತಿರ ಶುಕ್ರವಾರ ಸಂಜೆ ಕುಕನೂರು ಬ್ಲಾಕ್ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಅಭಿನಂದನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು ಚುನಾವಣೆಯ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷ ಹೇಳಿರುವ ಐದು ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾಗಿದ್ದು ಈ ಯೋಜನೆಯ ಗಳಿಗೆ ಹಣ ಹೊಂದಾಣಿಕೆ ಮಾಡಲಾಗುತ್ತಿದೆ. ಆದರೆ ಯಾವುದೇ ವಸ್ತುಗಳ ಮೇಲೆ ತೆರಿಗೆಯನ್ನು ವಿಧಿಸುತ್ತಿಲ್ಲ. ಪೆಟ್ರೋಲ್ ಡೀಸೆಲ್ ಗಳ ಮೇಲೆಯೂ ಸಹ ತೆರಿಗೆಯನ್ನು ವಿಧಿಸಲು ಮುಖ್ಯಮಂತ್ರಿಗಳು ಬೇಡ ಎಂದು ಹೇಳಿದ್ದಾರೆ . ಆದ್ದರಿಂದ ಈಗ ಅಬಕಾರಿ ಒಂದೇ ಉಳಿದಿರು ಅದರ ಮೇಲೆಯೇ ತೆರಿಗೆಯನ್ನು ಹೆಚ್ಚಿಸಲಾಗುತ್ತದೆ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ಪ್ರಮುಖರಾದ ಬಸವರಾಜ ಉಳ್ಳಾಗಡ್ಡಿ, ಸಿದ್ದಯ್ಯ ಕಳ್ಳಿಮಠ, ಹನಮಂತಗೌಡ ಚೆಂಡುರೂ, ವೀರನಗೌಡ ಪೊಲೀಸ್ ಪಾಟೀಲ, ಕಾಸಿಂ ಸಾಬ ತಳಕಲ್, ಸತ್ಯನಾರಾಯಣಪ್ಪ ಹರಪನಹಳ್ಳಿ, ರಾಮಣ್ಣ ಭಜಂತ್ರಿ, ವೀರಯ್ಯ ತೋಂಟದಾರ್ಯಮಠ, ಮಂಜುನಾಥ ಕಡೆಮನಿ, ಹನಮೇಶ್ ಕಡೆಮನಿ, ಈರಪ್ಪ ಕುಡಗುಂಟಿ,ಶರಣಪ್ಪ ಗಾಂಜಿ, ಶಿವನಗೌಡ ದಾನರಡ್ಡಿ ಹಾಗೂ ಇತರರಿದ್ದರು.

Leave a Reply

error: Content is protected !!