ನವದೆಹಲಿ : ಉತ್ತರ ಭಾರತದಲ್ಲಿ ಭಾರೀ ಮಳೆಯಾಗುತ್ತಿದ್ದು, ಈ ಪರಿಣಾಮವಾಗಿ ದೇಶದ ರಾಜಧಾನಿ ನವದೆಹಲಿಯಲ್ಲಿ ಯಮುನಾ ನದಿಯಿಂದ ಪ್ರವಾಹದ ಭೀತಿಯಿಂದ ಜನರು ಆತಂಕದಲ್ಲಿದ್ದಾರೆ. ದೇಹಲಿಯ ಸಿವಿಲ್ ಲೈನ್ಸ್ ಪ್ರದೇಶವು ಸಂಪೂರ್ಣ ಜಲಾವೃತಗೊಂಡಿದ್ದು, ಈ ಪ್ರದೇಶದಲ್ಲಿ ಜಲದಿಗ್ಬಂದನ ವಿಧಿಸಿರುವ ವಿಡಿಯೋಗಳನ್ನು ಎಎನ್‌ಐ ಸುದ್ದಿ ಸಂಸ್ಥೆ ಟ್ವಿಟರ್‌ನಲ್ಲಿ ಹಂಚಿಕೊಂಡಿದೆ.
ಭಾರೀ ಮಳೆಯ ಬಳಿಕ ಹತ್ನಿಕುಂಡ್ ಬ್ಯಾರೇಜ್‌ನಿಂದ ಹೆಚ್ಚುವರಿ ನೀರು ಬಿಡುಗಡೆಯಾದ್ದು, ಇದೀಗ ಯಮುನಾ ನದಿಯ ನೀರಿನ ಮಟ್ಟವು ಹೆಚ್ಚಾಗುತ್ತಿರುವುದರಿಂದ ನಗರದ ಹಲವಾರು ಪ್ರದೇಶಗಳು ಪ್ರವಾಹ ಪೀಡಿತವಾಗಿದೆ.