ಬೆಂಗಳೂರು : ಕಾಂಗ್ರೆಸ್ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಲ್ಲಿ ಇದು ತುಂಬಾ ಮಹತ್ವದಾಗಿದ್ದು, ಇಂದು “ಅನ್ನ ಭಾಗ್ಯ ಯೋಜನೆ”ಗೆ ಅಕ್ಕಿ ಬದಲು ತಲಾ 170 ರೂ.ಗಳನ್ನು ಫಲಾನುಭವಿಗಳ ಅಕೌಂಟಿಗೆ ಜಮಾ ಮಾಡುವ ಕಾರ್ಯಕ್ರಮವನ್ನು ಸಿಎಂ, ಡಿಸಿಎಂ ಚಾಲನೆ ನೀಡಿದರು. ಇಂದು ರಾಜ್ಯದ ಎರಡು ಜಿಲ್ಲೆಗಳಿಗೆ ಹಣ ಜಮೆ ಮಾಡಿ ಉಳಿದ ಜಿಲ್ಲೆಗಳಿಗೆ ಶಿಘ್ರದಲ್ಲಿಯೇ ಜಮೆ ಆಗಲಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ಕೊಟ್ಟಿದ್ದು, ‘ನಮ್ಮ ಐದು ಗ್ಯಾರಂಟಿಗಳಲ್ಲಿ ಅನ್ನಭಾಗ್ಯ ಪ್ರಮುಖ ಗ್ಯಾರಂಟಿ. 2013 ರಲ್ಲೆ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದ್ವಿ. ಬಡವರಿಗೆ ಅಕ್ಕಿ ಕೊಡ್ತಿವಿ ಎಂದು ಪ್ರಣಾಳಿಕೆಯಲ್ಲೇ ಹೇಳಿದ್ವಿ. ಅಧಿಕಾರ ವಹಿಸಿಕೊಂಡ 1 ಗಂಟೆಯಲ್ಲೆ ಅನ್ನಭಾಗ್ಯ ಕಾರ್ಯಕ್ರಮ ಘೋಷಣೆ ಮಾಡಿದ್ದೇವೆ ಎಂದರು.
ಜಗದ್ಗುರು ಶ್ರೀ ಬಸವಣ್ಣನವರ ಜಯಂತಿ ದಿನ ನಾವು ಅಧಿಕಾರ ವಹಿಸಿಕೊಂಡ್ವಿ. ನಾವು ಕೊಟ್ಟ ಭರವಸೆಯನ್ನ ಈಡೇರಿಸಬೇಕೆಂದು 5 ಭರವಸೆ ಈಡೇರಿಸುವ ಕೆಲಸ ಮಾಡಿದ್ವಿ ಅದನ್ನ ಸಚಿವ ಸಂಪುಟದಲ್ಲಿ ಘೋಷಣೆ ಮಾಡಿದ್ವಿ. ಮನಮೋಹನ್ ಸಿಂಗ್ ಅವರು ಪ್ರಧಾನಿಯಾಗಿದ್ದಾಗ “ಆಹಾರ ಭದ್ರತಾ ಕಾಯ್ದೆ” ಜಾರಿಗೊಳಿಸಿದ್ರು. ಆಹಾರ ಭದ್ರತೆ ಕಾಯ್ದೆ 2013 ಕ್ಕೆ ಬಂತು. ಕೇಂದ್ರ ಸರ್ಕಾರ 3 ರೂಗೆ 1 ಕೆ ಜಿ ಅಕ್ಕಿ ಕೊಡ್ತಿದ್ರು, ನಾನು 1 ಕೆ ಜಿಗೆ 1 ರೂಗೆ ಕೊಡಲು ತೀರ್ಮಾನ ಮಾಡಿದ್ವಿ, ಆಮೇಲೆ ಉಚಿತ ಅಕ್ಕಿ ಕೊಡಲು ತೀರ್ಮಾನ ಮಾಡಿದ್ದೇವು ಎಂದು ಹೇಳಿದ್ದಾರೆ.
ಈ ಹಿಂದೆ 7 ಕೆ ಜಿ ಅಕ್ಕಿ ಕೊಡಲು ನಾವು ತೀರ್ಮಾನ ಮಾಡಿದ್ವಿ. ಆವಾಗಲೇ 1.27 ಕೋಟಿ ಪಡಿತರದಾರರಿಗೆ ಅಕ್ಕಿ ಕೊಡ್ತಿದೇವೆ. ಆದರೂ ಒಟ್ಟು 4.42 ಕೋಟಿ ಫಲಾನುಭವಿಗಳಿಗೆ ಸೌಲಭ್ಯ ದೊರೆಯಲಿದೆ. ಬಿಜೆಪಿ ಸರ್ಕಾರ 7 ಕೆ ಜಿ ಅಕ್ಕಿ ಕೊಡ್ತಿದನ್ನ 5 ಕೆಜಿಗೆ ಕಡತ ಮಾಡಿದ್ರೂ, ಇದಕ್ಕೆ ಜನ ಬಿಜೆಪಿ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದರು. ಆಗ ನಾವು ಅವರು ಎರಡು ಕೆ ಜಿ ಅಕ್ಕಿ ಕಡಿಮೆ ಮಾಡಿದ್ರೆ, ನಾವು 5 ಕೆಜಿ ಜೊತೆಗೆ 5 ಕೆ ಜಿ ಅಕ್ಕಿ ಸೇರಿಸಿ 10 ಕೆ.ಜಿ ಕೊಡ್ತೀವಿ ಎಂದು ಭರವಸೆ ನೀಡಿದ್ದೇವೆ. ಬರೀ ನಾವೇ 10 ಕೆ.ಜಿ ಅಕ್ಕಿ ಕೊಡ್ತಿವಿ ಎಂದು ಹೇಳಿಲ್ಲ, ಈಗಿನ 5 ಕೆಜಿ ಜೊತೆಗೆ 5 ಕೆಜಿ ಅಕ್ಕಿ ಸೇರಿಸಿ 10 ಕೆಜಿ ಕೊಡ್ತೀವಿ ಎಂದು ಹೇಳಿದ್ದು, ಅದರಂತೆ ಜಾರಿಗೊಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದರು.