ಭಾರತ ಕ್ರಿಕೆಟ್ ತಂಡಕ್ಕೆ ಪ್ರಸ್ತುತ ಕೋಚ್ ರಾಹುಲ್ ದ್ರಾವಿಡ್ ಬದಲಿಗೆ ಇದೀಗ ಬಿಸಿಸಿಐ ಹೊಸ ಮುಖ್ಯ ಕೋಚ್ ಯಾರು ಎಂಬ ಬಗ್ಗೆ ದೊಡ್ಡಅಪ್‌ಡೇಟ್ ನೀಡಿದೆ. ಈ ವರ್ಷ ಅಕ್ಟೋಬರ್ ಮತ್ತು ನವೆಂಬರ್ 2023 ರಲ್ಲಿ ಭಾರತದ ನೆಲದಲ್ಲಿ ನಡೆಯಲಿರುವ 2023ರ ವಿಶ್ವಕಪ್ ಬಳಿಕ ರಾಹುಲ್ ದ್ರಾವಿಡ್ ಅವರ ಒಪ್ಪಂದವು ಕೊನೆಗೊಳ್ಳುತ್ತಿದ್ದು, ಆದರೆ, ಬಿಸಿಸಿಐ ಈಗಾಗಲೇ ಭಾರತದ ತಂಡಕ್ಕೆ ಹೊಸ ಮುಖ್ಯ ಕೋಚ್ ಅನ್ನು ಆಯ್ಕೆ ಮಾಡಿದೆ.
ದ್ರಾವಿಡ್ ನಿರ್ಗಮನಕ್ಕೂ ಮುನ್ನವೇ ಬಿಸಿಸಿಐ ಅನುಭವಿ ಆಟಗಾರರನ್ನು ಮುಖ್ಯ ಕೋಚ್ ಆಗಿ ನೇಮಿಸುವ ಮೂಲಕ ಭವಿಷ್ಯದ ತಯಾರಿ ಆರಂಭಿಸಿದೆ ಎನ್ನಲಾಗಿದೆ. ಬಿಸಿಸಿಐ ಈಗಾಗಲೇ ಟೀಮ್ ಇಂಡಿಯಾದ ಹೊಸ ಮುಖ್ಯ ಕೋಚ್ ಆಗಿ ವಿವಿಎಸ್ ಲಕ್ಷಣ್ ಅವರನ್ನು ಆಯ್ಕೆ ಮಾಡಲಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಬಂದಿದೆ.