ಭಾರತದ ಇತಿಹಾಸದ ಇದೊಂದು ದಿನ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ ಅದುವೇ “ಕಾರ್ಗಿಲ್ ವಿಜಯ್ ದಿವಸ್” ಅಥವಾ “ಕಾರ್ಗಿಲ್ ವಿಜಯ ದಿನ” ಇದು ನಡೆದಿದ್ದು, 1999ರಲ್ಲಿ ಭಾರತದ ಭೂ ಪ್ರದೇಶದ ಕಾರ್ಗಿಲ್‌ನಲ್ಲಿ ಪಾಕಿಸ್ತಾನದ ವಿರುದ್ಧ ಭಾರತವು ಐತಿಹಾಸಿಕ ವಿಜಯದ ಸ್ಮರಣಾರ್ಥವಾಗಿ ಪ್ರತಿ ವರ್ಷ ಇಡೀ ದೇಶವೇ ಜುಲೈ 26 ರಂದು ಆಚರಿಸಲಾಗುತ್ತದೆ. ಈ ಯುದ್ಧದ ಸಮಯದಲ್ಲಿ, ಭಾರತೀಯ ಸೇನೆಯು ಟೈಗರ್ ಹಿಲ್ ಮತ್ತು ಭಾರತದ ಗಡಿ ನಿಯಂತ್ರಣ ರೇಖೆಯ ಭಾಗವಾಗಿ ಅಕ್ರಮವಾಗಿ ವಶಪಡಿಸಿಕೊಂಡ ಪಾಕಿಸ್ತಾನಿ ನುಸುಳುಕೋರರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿತು.
ಈ ಸಶಸ್ತ್ರ ಸಂಘರ್ಷವು ಲಡಾಖ್‌ನ ಕಾರ್ಗಿಲ್‌ನಲ್ಲಿ 60 ದಿನಗಳಿಗಿಂತ ಹೆಚ್ಚು ಕಾಲ ನಡೆಯಿತು ಹಾಗೂ ದೇಶವು 500 ಕ್ಕೂ ಹೆಚ್ಚು ಸೈನಿಕರನ್ನು ಕಳೆದುಕೊಂಡು ಐತಿಹಾಸಿಕ ವಿಜಯದ ಪತಾಕೆ ಹಾರಿಸಿತ್ತು. ದೇಶದಲ್ಲಿ ಪ್ರತಿ ವರ್ಷವು ಈ ಐತಿಹಾಸಿಕ ದಿನವನ್ನು ಪಾಕಿಸ್ತಾನವು ಪ್ರಾರಂಭಿಸಿದ ಯುದ್ಧದಲ್ಲಿ ಹುತಾತ್ಮರಾದ ಭಾರತೀಯ ಸೈನಿಕರಿಗೆ ಗೌರವ ಸಲ್ಲಿಸುವ ಸಲುವಾಗಿ ಆಚರಿಸಲಾಗುತ್ತದೆ.
*ಇಂದು ‘ಕಾರ್ಗಿಲ್ ಯುದ್ಧ’ದ ಮಹತ್ವದ ದಿನ*
ಈ ವರ್ಷ ದೇಶವು ‘ಕಾರ್ಗಿಲ್ ವಿಜಯ್ ದಿವಸ್’ನ 24 ನೇ ವಾರ್ಷಿಕೋತ್ಸವವನ್ನು ಆಚರಿಸುತ್ತಿದೆ. ಈ ದಿನವನ್ನು ‘ಕಾರ್ಗಿಲ್ ಯುದ್ಧ’ ಅಥವಾ ‘ಕಾರ್ಗಿಲ್ ಸಂಘರ್ಷ’ ಎಂತಲೂ ಕರೆಯಲಾಗುತ್ತದೆ.
1999ರಲ್ಲಿ ಈ ದಿನದಂದು, ಗಡಿ ನಿಯಂತ್ರಣ ರೇಖೆಯನ್ನು (LOC) ದಾಟಿ ಭಾರತದ ಭೂಪ್ರದೇಶಕ್ಕೆ ನುಗ್ಗಿದ ಪಾಕಿಸ್ತಾನಿ ನುಸುಳುಕೋರರ ವಿರುದ್ಧ ಭಾರತೀಯ ಸೈನಿಕರು ಹೋರಾಡಿ ವಿಜಯ ಸಾಧಿಸಿದ ಮಹತ್ವದ ದಿನವಾಗಿದೆ. 1999ರಲ್ಲಿ ಭಾರತವು ಆಪರೇಷನ್ ವಿಜಯ್ ಹೆಸರಿನ ಅಡಿಯಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದಾಗ ಯುದ್ಧವು ಮೇ 8 ರಿಂದ ಜುಲೈ 26 ರವರೆಗೆ ನಡೆದಿದ್ದು, ಐತಿಹಾಸಿಕ ಪುಟಗಳನ್ನು ಸೇರಿದೆ.
*1999ರ ಜುಲೈ 26ರಲ್ಲಿ ನಡೆದ ಕಾರ್ಗಿಲ್ ವಿಜಯ್ ದಿವಸ್” ಕುರಿತು ನೀವು ತಿಳಿದುಕೊಳ್ಳಬೇಕಾದ ಮಹತ್ವದ ಸಂಗತಿಗಳು.
❂ ಪಾಕಿಸ್ತಾನವು ಆರಂಭಿಕ ಯುದ್ಧದಲ್ಲಿ ತನ್ನ ಪಾಲ್ಗೊಳ್ಳುವಿಕೆಯನ್ನು ಕಡಾ ಖಂಡಿತವಾಗಿ ನಿರಾಕರಿಸಿತು ಹಾಗೂ ಕಾಶ್ಮೀರಿ ಉಗ್ರಗಾಮಿಗಳನ್ನು ಪಾಕ್ ದೂಷಿಸಿತು. ಆದರೆ, ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಮತ್ತು ಆಗಿನ ಪಾಕಿಸ್ತಾನದ ಸೇನಾ ಮುಖ್ಯಸ್ಥ ಪರ್ವೇಜ್ ಮುಷರಫ್ ಅವರ ಹೇಳಿಕೆಯು ಅವರ ಈ ಯುದ್ಧದಲ್ಲಿ ಪಾಲ್ಗೊಳ್ಳುವಿಕೆ ನಿಶ್ಚಿತ ಪಡೆಸಿತು.
❂ ಪಾಕಿಸ್ತಾನವು ತನ್ನ ಸೇನಾಪಡೆಗಳನ್ನು “ಆಪರೇಷನ್ ಬದ್ರ್” ಅಡಿಯಲ್ಲಿ ರಹಸ್ಯವಾಗಿ ಭಾರತೀಯ ಭೂಪ್ರದೇಶಗಳಿಗೆ ಕಳುಹಿಸಿತು ಮತ್ತು ಕಾರ್ಗಿಲ್‌ನಲ್ಲಿನ ಪ್ರದೇಶವನ್ನು ವಶಪಡಿಸಿಕೊಂಡಿತು.
❂ ಈ ತರಹದ ಒಳನುಗ್ಗುವಿಕೆಯ ಹಿಂದಿನ ಅಜೆಂಡಾವು ಕಾಶ್ಮೀರದಿಂದ ಲಡಾಖ್ ಅನ್ನು ಬೇರ್ಪಡಿಸಿ ಹಾಗೂ ಪಾಕಿಸ್ತಾನದ ಷರತ್ತುಗಳನ್ನು ಒಪ್ಪಿಕೊಳ್ಳುವಂತೆ ಭಾರತವನ್ನು ಒತ್ತಾಯಿಸಲು ಸಿಯಾಚಿನ್ ಕಣಿವೆಯ ನಿವಾಸಿಗಳನ್ನು ಉಪವಾಸ ಕೆಡವಿ ಹಾಗೂ ಹಿಂಸೆ ನೀಡಿತ್ತು.
❂ ಪಾಕಿಸ್ತಾನದ ವಿರುದ್ಧ ಭಾರತವು “ಆಪರೇಷನ್ ವಿಜಯ್” ಅಡಿಯಲ್ಲಿ ಕಾರ್ಗಿಲ್ ಅನ್ನು ರಕ್ಷಿಸಲು ವಿಶೇಷ ಸೇನಾಪಡೆಗಳೊಂದಿಗೆ ಸುಮಾರು 30,000 ಸೈನಿಕರನ್ನು ಕಾರ್ಗಿಲ್ ಭೂಪ್ರದೇಶಕ್ಕೆ ಸ್ಥಳಾಂತರಿಸಿತು.
❂ ಭಾರತೀಯ ವಾಯುಪಡೆಯು ಪಾಕಿಸ್ತಾನದ ಅಕ್ರಮವಾಗಿ ತಂಗಿದ್ದ ಪೋಸ್ಟ್‌ಗಳನ್ನು ಯಶಸ್ವಿಯಾಗಿ ನಾಶಪಡಿಸಿ, ಜುಲೈ 26 ರಂದು ಭಾರತವು ತನ್ನ ಪ್ರದೇಶದಿಂದ ಪಾಕಿಸ್ತಾನಿ ಸೈನಿಕರನ್ನು ಹಿಮ್ಮೆಟ್ಟಿ ವಿಜಯಸಾಧಿಸಿತು.
❂ ಈ “ಏಕತಾನತೆಯ ದಿನ”ವನ್ನು ಕಾರ್ಗಿಲ್ ಯುದ್ಧದ ವೇಳೆಯಲ್ಲಿ ದೇಶಕ್ಕಾಗಿ ಸೇವೆ ಸಲ್ಲಿಸಿ ತಮ್ಮ ಪ್ರಾಣವನ್ನು ಕಳೆದುಕೊಂಡ ಸೈನಿಕರಿಗೆ ಗೌರವ ಸಲ್ಲಿಸುವಾಗಿ ಕಾರ್ಗಿಲ್ ಯುದ್ಧದ “ಕಾರ್ಗಿಲ್ ವಿಜಯ್ ದಿವಸ್” ಎಂದು ಆಚರಿಸಲಾಗುತ್ತದೆ.
❂ ಕಾರ್ಗಿಲ್ ಯುದ್ಧದ ವೇಳೆಯಲ್ಲಿ ಭಾರತವು ವೀರ ಸೈನಿಕರಲ್ಲಿ ಒಬ್ಬರಾದ “ಕ್ಯಾಪ್ಟನ್ ವಿಕ್ರಮ್ ಬಾತ್ರಾ” ಅವರನ್ನು ಕಳೆದುಕೊಂಡಿತು. “ಕಾರ್ಗಿಲ್ ವಿಜಯ್ ದಿವಸ್” ಕಾರ್ಗಿಲ್ ನ ಮಹಾವೀರರನ್ನು ಗೌರವಿಸುತ್ತದೆ. ಅವರ ಮರಣದ ನಂತರ ಅವರಿಗೆ ಭಾರತದ ಅತ್ಯುನ್ನತ ಶೌರ್ಯ ಗೌರವವಾದ ಪರಮವೀರ ಚಕ್ರವನ್ನು ನೀಡಲಾಗಿದೆ. ಇತ್ತೀಚೆಗಷ್ಟೇ “ವಿಕ್ರಮ್ ಬಾತ್ರಾ” ಅವರ ಜೀವನಾಧಾರಿತ ಶೇರ್ಷಾ ಎಂಬ ಸಿನಿಮಾ ಕೂಡ ಬಿಡುಗಡೆಯಾಗಿತ್ತು.
ಇನ್ನಷ್ಟು ಮಹತ್ವದ ಮಾಹಿತಿ ನಿರೀಕ್ಷಿಸಿ….
ವಿಶೇಷ ಲೇಖನ : ಚಂದ್ರು ಆರ್ ಭಾನಾಪೂರ್
(ವಿವಿಧ ಮೂಲಗಳಿಂದ ಸಂಗ್ರಹಿಸಿದ ವಿಷಯ)