JOB ALERT : ಗಣಿತ ವಿಷಯದ ಅತಿಥಿ ಶಿಕ್ಷರ ಹುದ್ದೆಗೆ ಅರ್ಜಿ ಆಹ್ವಾನ

You are currently viewing JOB ALERT : ಗಣಿತ ವಿಷಯದ ಅತಿಥಿ ಶಿಕ್ಷರ ಹುದ್ದೆಗೆ ಅರ್ಜಿ ಆಹ್ವಾನ

ಕೊಪ್ಪಳ : ತಾಲೂಕಿನ ಮುನಿರಾಬಾದ್ ಸರಕಾರಿ ಮೌಲಾನಾ ಆಜಾದ್ ಮಾದರಿ ಶಾಲೆಯ 2023-24ನೇ ಶೈಕ್ಷಣಿಕ ಸಾಲಿನಲ್ಲಿ ಖಾಲಿ ಇರುವ ಗಣಿತ ವಿಷಯದ ಒಂದು ಹುದ್ದೆಗೆ ಅತಿಥಿ ಶಿಕ್ಷಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಗಣಿತ ವಿಷಯದ ಅತಿಥಿ ಶಿಕ್ಷಕರ ಹುದ್ದೆಗೆ ಕನಿಷ್ಠ ವಿದ್ಯಾರ್ಹತೆ ಬಿ.ಎಸ್.ಸಿ (ಪಿಸಿಎಂ), ಬಿ.ಇಡಿ ಆಗಿರಬೇಕು. ಈ ಹುದ್ದೆಗೆ ಅತಿಥಿ ಶಿಕ್ಷಕರಾಗಿ ಸೇವೆ ಸಲ್ಲಿಸಲು ಆಸಕ್ತಿಯುಳ್ಳ ಅರ್ಹ ಅಭ್ಯರ್ಥಿಗಳು ಸೆಪ್ಟೆಂಬರ್ 01ರ ಒಳಗಾಗಿ ಸರಕಾರಿ ಮೌಲಾನಾ ಆಜಾದ್ ಮಾದರಿ ಶಾಲೆ ಮುನಿರಾಬಾದ್, ತಾಲೂಕ ಮತ್ತು ಜಿಲ್ಲಾ ಕೊಪ್ಪಳ, ಇಲ್ಲಿಗೆ ಖುದ್ದಾಗಿ ಬಂದು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 9900617290 ಹಾಗೂ 9980229105 ಗೆ ಸಂಪರ್ಕಿಸಬಹುದಾಗಿದೆ ಎಂದು ಶಾಲೆಯ ಮುಖ್ಯೋಪಾಧ್ಯಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!