LOCAL NEWS : ಶಾಲಾ ಪೂರ್ವ ಶಿಕ್ಷಣ ಕಲಿಕಾ ಅಧ್ಯಯನ : ಅಂಗನವಾಡಿಗೆ ಮೇಘಾಲಯ ತಂಡ ಭೇಟಿ!

You are currently viewing LOCAL NEWS : ಶಾಲಾ ಪೂರ್ವ ಶಿಕ್ಷಣ ಕಲಿಕಾ ಅಧ್ಯಯನ : ಅಂಗನವಾಡಿಗೆ ಮೇಘಾಲಯ ತಂಡ ಭೇಟಿ!

ಕುಕನೂರು : ಶಾಲಾಪೂರ್ವ ಶಿಕ್ಷಣ ಕಲಿಕೆ ಮತ್ತು ಬಲವರ್ಧನೆಗೆ ಸಂಬಂಧಿಸಿದಂತೆ ಮೇಘಾಲಯ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ತಂಡವು ತಾಲೂಕಿನ ಮಂಡಲಗಿರಿ, ತಳಕಲ್ ಅಂಗನವಾಡಿಗಳಿಗೆ ಭೇಟಿ ನೀಡಿ ಅಧ್ಯಯನ, ವೀಕ್ಷಣೆ ಮಾಡಿತು.

ಈ ಸಂದರ್ಭದಲ್ಲಿ ಜಿಲ್ಲಾ ಯೋಜನಾಧಿಕಾರಿ ಗಂಗಪ್ಪ, ಸಿಡಿಪಿಒ ಬೆಟದಪ್ಪ, ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್, ಅಂಗನವಾಡಿ ಮೇಲ್ವಿಚಾರಕಿ, ಕಾರ್ಯಕರ್ತೆಯರು ಅಧ್ಯಯನ ತಂಡದ ಸದಸ್ಯರಿಗೆ ಕಲಿಕೆಯ ಮಾಹಿತಿ ವಿವರಣೆ ನೀಡಿದರು.

ಶಾಲಾಪೂರ್ವ ಶಿಕ್ಷಣದ ಕಲಿಕೆ ಮತ್ತು ಬಲವರ್ಧನೆಯ ಉದ್ದೇಶದಿಂದ ಮೇಘಾಲಯ ರಾಜ್ಯದ ಮಹಿಳಾ, ಮಕ್ಕಳ ಅಭಿವೃದ್ಧಿ ಇಲಾಖೆಯು ಕಲಿಕೆ ಟಾಟಾ ಟ್ರಸ್ಟ್ ನೊಂದಿಗೆ ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಅಧ್ಯಯನ ಮತ್ತು ಸಮಾಲೋಚನೆ ಸಭೆ ನಡೆಸುತ್ತಿದೆ.

ಅದರಂತೆ ಇಂದು ಶುಕ್ರವಾರ ಕುಕನೂರು ತಾಲೂಕಿನ ಮಂಡಲಗಿರಿ ಮತ್ತು ತಳಕಲ್ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ ಶಾಲಾ ಪೂರ್ವ ಶಿಕ್ಷಣ ಕಲಿಕೆಯ ಅನುಭವಾತ್ಮಕ ಮಾಹಿತಿ ಸಂಗ್ರಹಿಸಿತು.

ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ನಿರ್ದೇಶನ ಮತ್ತು ಸೂಚನೆಯ ಮೇರೆಗೆ ಇಂದು ಮತ್ತು ನಾಳೆ ಗಂಗಾವತಿ, ಯಲಬುರ್ಗಾ, ಕುಷ್ಟಗಿ ತಾಲೂಕಿನಲ್ಲಿ ಎರಡು ತಂಡಗಳಲ್ಲಿ ಶಾಲಾಪೂರ್ವ ಕಲಿಕಾ ಅಧ್ಯಯನ ನಡೆಸಲಾಗುತ್ತಿದೆ.

ಕಾರ್ಯಕರ್ತೆ ಶರಣಮ್ಮ ಶಶಿಮಠಗೆ ಮೆಚ್ಚುಗೆ : ಮಂಡಲಗಿರಿ ಅಂಗನವಾಡಿ 3 ರ ಕಾರ್ಯಕರ್ತೆ ಶರಣಮ್ಮ ಶಶಿಮಠ ಅವರ ಕಲಿಕಾ ಬೋಧನೆಗೆ ಮೇಘಾಲಯ ಮಹಿಳಾ ಮಕ್ಕಳ ಅಭಿವೃದ್ಧಿ ಅಧ್ಯಯನ ತಂಡ ಮೆಚ್ಚುಗೆ ಸೂಚಿಸಿತು. ಕಾರ್ಯಕರ್ತೆ ಅವರ ವಿಶೇಷ ಆಸಕ್ತಿ, ಕಲಿಕಾ ಸಾಮರ್ಥ್ಯ ವು ಮಕ್ಕಳಲ್ಲಿ ಶಿಕ್ಷಣದ ಕಡೆಗೆ ಒಲವು ಉಂಟಾಗುವಂತೆ ಮಾಡುತ್ತಿದೆ ಎಂದು ಅಧ್ಯಯನ ತಂಡ, ಜಿಲ್ಲಾ ಯೋಜನಾ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.

Leave a Reply

error: Content is protected !!