BREAKING : ಅಮಾನತ ಆದ ತಹಶೀಲ್ದಾರ್..!


ಅನರ್ಹ ಪಲಾನುಭವಿಗಳಿಗೆ ಬೆಳೆಹಾನಿ ಪರಿಹಾರ ನೀಡಿದ ಪ್ರಕರಣ , ತಹಸೀಲ್ದಾರ್ ಅಮಾನತ್ತು.


ಅನರ್ಹ ಪಲಾನುಭವಿಗಳಿಗೆ ಬೆಳೆಹಾನಿ ಪರಿಹಾರ ನೀಡಿದ ಪ್ರಕರಣದಲ್ಲಿ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಹಸೀಲ್ದಾರ್ ಶರಣಮ್ಮ ಕಾರಿ ಅವರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ.

2019 ರಲ್ಲಿ ಬ್ಯಾಡಗಿ ತಹಸೀಲ್ದಾರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ವೇಳೆ 29 ಅನರ್ಹ ಪಲಾನುಭವಿಗಳಿಗೆ ಬೆಳೆ ಹಾನಿ ಪರಿಹಾರ ನೀಡಿ ಸರ್ಕಾರ ಮತ್ತು ಅರ್ಹ ರಿಗೆ ನಷ್ಟ, ವಂಚನೆ ಮಾಡಿದ್ದರು. ಆರೋಪ ಸಾಬೀತಾದ ಹಿನ್ನೆಲೆ ಶರಣಮ್ಮ ಕಾರಿ ಅವರನ್ನು ಅಮಾನತ್ತುಗೊಳಿಸಿ ಸರ್ಕಾರದ ಅಧೀನ ಕಾರ್ಯದರ್ಶಿ ಮುಸ್ತಾಕ್ ಪಾಷಾ ಆದೇಶ ಹೊರಡಿಸಿದ್ದಾರೆ.

ಬೆಳೆಹಾನಿ ಪರಿಹಾರದಲ್ಲಿ ಲೋಪವೆಸಗಿ ಸರ್ಕಾರಕ್ಕೆ 8 ಲಕ್ಷ 57 ಸಾವಿರ 338 ರೂ ನಷ್ಟ, ಹಾಗೂ ಅರ್ಹ ಪಲಾನುಭವಿಗಳ ಖಾತೆಗೆ ಜಮೆ ಮಾಡಿಸಿ ಸರ್ಕಾರಕ್ಕೆ ಮತ್ತು ಜಮೀನಿನ ಮೂಲ ಮಾಲೀಕರಿಗೆ ವಂಚನೆ ಹಿನ್ನೆಲೆ ಪ್ರಕರಣ ದಾಖಲಾಗಿ ತನಿಖೆ ನಡೆದಿತ್ತು, ಆರೋಪ ಸಾಬೀತು ಆಗಿದ್ದು ಕರ್ತವ್ಯ ಲೋಪ, ಕರ್ನಾಟಕ ನಾಗರೀಕ ಸೇವಾ ನಿಯಮಗಳ ಉಲ್ಲಂಘನೆ ಹಿನ್ನೆಲೆ ತಹಸೀಲ್ದಾರ್ ಗ್ರೇಡ್ 1 ಶರಣಮ್ಮ ಕಾರಿ ಅವರನ್ನು ಸರ್ಕಾರ ಅಮಾನತ್ತು ಮಾಡಿದೆ.

Leave a Reply

error: Content is protected !!