ಇಟಗಿ ಉತ್ಸವದಲ್ಲಿ 3ನೇ ಬಾರಿಗೆ ನಡೆಯುವ ಯುವ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕ ಶ್ರೀ ಕುದಾನ್ ಮುಲ್ಲಾ ಆಯ್ಕೆ

You are currently viewing ಇಟಗಿ ಉತ್ಸವದಲ್ಲಿ 3ನೇ ಬಾರಿಗೆ ನಡೆಯುವ ಯುವ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕ ಶ್ರೀ ಕುದಾನ್ ಮುಲ್ಲಾ ಆಯ್ಕೆ

ಇಟಗಿ ಉತ್ಸವದಲ್ಲಿ 3ನೇ ಬಾರಿಗೆ ನಡೆಯುವ ಯುವ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಶಿಕ್ಷಕ ಶ್ರೀ ಕುದಾನ್ ಮುಲ್ಲಾ ಆಯ್ಕೆ

ಜನವರಿ 12 ರಿಂದ 14ರವರೆಗೆ ದೇವಾಲಯ ಚಕ್ರವರ್ತಿ ಬಿರುದಾಂಕಿತ ಮಹದೇವ ದೇವಾಲಯದ ಆವರಣದ
ಮಹದೇವ
ದಂಡ ನಾಯಕ ವೇದಿಕೆಯಲ್ಲಿ
20ನೇ ಬಾರಿಗೆ ಇಟಗಿ ಉತ್ಸವವನ್ನು ಇಟಗಿ ಉತ್ಸವದ ಸಾಂಸ್ಕೃತಿಕ ಸಮಿತಿಯು ನಡೆಸಲಿದ್ದು
ಜನವರಿ 12ರಂದು ಕಾರ್ಯಕ್ರಮ ಉದ್ಘಾಟನೆಯಾಗಲಿದೆ
ಅಂದು ಸ್ವಾಮಿ ವಿವೇಕಾನಂದರ ಜಯಂತಿ
ಇದರ ಅಂಗವಾಗಿ ಮೂರನೇ ಯುವ ಸಾಂಸ್ಕೃತಿಕ ಸಮ್ಮೇಳನವನ್ನು ನಡೆಸಲಾಗುತ್ತಿದ್ದು ಇದರ ಸರ್ವಾಧ್ಯಕ್ಷರನ್ನಾಗಿ ಸ್ಥಳೀಯ ಶಿಕ್ಷಕ ಕ್ರೀಡಾಪಟು ಹಾಗೂ ಲೇಖಕ ಶ್ರೀ ಕುದಾನ್ ಮುಲ್ಲಾ ಅವರನ್ನು ಆಯ್ಕೆ ಮಾಡಲಾಗಿದೆ.
ಕುದಾನ್ ಮುಲ್ಲಾ ಅವರು M A Bed ಮಾಡಿದ್ದು
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹಾಗೂ ಶಾಲಾ ಕಾಲೇಜಿನ ಪ್ರವೇಶದ ಪರೀಕ್ಷೆಗಳಿಗೆ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಆದರ್ಶ ಮಿತ್ರ ಎಂಬ ಪುಸ್ತಕವನ್ನು ಬರೆದು ಕಳೆದ ಹತ್ತು ವರ್ಷಗಳಿಂದಲೂ ಐದಾರು ಪುನರ್ ಮುದ್ರಣ ಗಳನ್ನ ಮಾಡಿಸಿ ಯಶಸ್ವಿಯಾಗಿದ್ದಾರೆ
ಈ ಪುಸ್ತಕದ ಮೂಲಕ ಸ್ಪರ್ಧಾತ್ಮಕ ಪುಸ್ತಕ ರಚನೆಕಾರರಲ್ಲಿ ಖ್ಯಾತರಾಗಿದ್ದಾರೆ
ವಿದ್ಯಾರ್ಥಿ ದೆಸೆಯಿಂದಲೇ ಕ್ರೀಡಾಪಟುವಾಗಿದ್ದ ಕುದಾನ್ ಮುಲ್ಲಾ ಅವರು ಸ್ಥಳೀಯ ಗ್ರಾಮೀಣ ಹಂತದಲ್ಲಿ ಶಿಕ್ಷಕರಾಗಿ ಅನೇಕ ವಿದ್ಯಾರ್ಥಿಗಳಿಗೆ ಓದು
ಕ್ರೀಡೆ. ಗಾಯನ. ನೃತ್ಯ ಮೊದಲಾದವುಗಳನ್ನು ಉಚಿತವಾಗಿ ಹೇಳಿಕೊಡುತ್ತಾ ಅನೇಕ ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ
ಈ ಹಿನ್ನೆಲೆಯಲ್ಲಿ ಅವರ ಯುವಜನ ಕ್ಷೇತ್ರದ ಸೇವೆಯನ್ನ ಪರಿಗಣಿಸಿ ಇಟಗಿ ಉತ್ಸವದ ಸಂಚಾಲಕ
ರಾದ ಮಹೇಶ್ ಬಾಬು ಸುರ್ವೆ ಅವರು
ಶ್ರೀ ಕುದಾನ ಮುಲ್ಲಾ ಅವರನ್ನು
3ನೇ ಯುವ ಸಾಂಸ್ಕೃತಿಕ ಸಮ್ಮೇಳನದ ಸರ್ವಾಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದಾರೆ
ಅವರ ನೇತೃತ್ವದಲ್ಲಿ ಮೂರನೇ ಯುವ
ಸಾಂಸ್ಕೃತಿಕ
ಸಮ್ಮೇಳನ
ಶ್ರೀ ವಿವೇಕಾನಂದರ ಜನ್ಮದಿನ ಆಚರಣೆ ಅಂಗವಾಗಿ ನಡೆಯಲಿದೆ.
ಕುದಾನ್ ಮುಲ್ಲಾ ಅವರ ಹೆಸರನ್ನು ಲೇಖಕ ಜಿ.ಎಸ್. ಗೋನಾಳ್ ಅವರು ಸೂಚಿಸಿದರೆ ಮಹೇಶ್ ಬಾಬು ಸುರ್ವೆ ಅವರು ಅನುಮೋದಿಸಿ ಅಧಿಕೃತವಾಗಿ ಆಯ್ಕೆಯ ಘೋಷಣೆ ಮಾಡಿದರು
ಸಭೆಯಲ್ಲಿ
ವೈ ಬಿ ಜೂಡಿ.
ಎಂ ಸಾಧಿಕ ಅಲಿ
ಶಿವಕುಮಾರ್ ಹಿರೇಮಠ್
ಉಮೇಶ್ ಪೂಜಾರ
ಶರಣಪ್ಪ ಹಾದಿ ಗೋವಿಂದ ಮರಾಠಿ ಉಮೇಶ್ ಬಾಬು ಸುರ್ವೆ
ಅನ್ನಪೂರ್ಣ ಮನ್ನಾಪುರ್
ಸುಶೀಲಾ ಎಂ ಎಸ್. ಮಂಜುನಾಥ್ ಅಂಗಡಿ
ಅನಿಲ್ ಬೇಗಾರ್ ಇತರರು ಆಯ್ಕೆ ಸಭೆಯಲ್ಲಿ ಭಾಗವಹಿಸಿದ್ದರು ಎಂದು ಪ್ರಕಟಣೆಯಲ್ಲಿ
ಸಂಘದ ಹಿರಿಯ ಉಪಾಧ್ಯಕ್ಷ ಸಿದ್ದಪ್ಪ ಹಂಚಿನಾಳ ತಿಳಿಸಿದ್ದಾರೆ
ಹೆಚ್ಚಿನ ಮಾಹಿತಿಗಾಗಿ 9845338160 ಸಂಪರ್ಕಿಸಲು ಕೋರಲಾಗಿದೆ

Leave a Reply

error: Content is protected !!