ಬೆಂಗಳೂರು: ರಾಜ್ಯ ಉಪನ್ಯಾಸಕರು 2ನೇ ಬಾರಿಗೆ ರಾಜ್ಯದಲ್ಲಿ ಮೊದಲ ಬಾರಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ನಡೆಸುತ್ತಿರುವುದಕ್ಕೆ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ಲೆಕ್ಕಿಸದೇ ಪದವಿ ಪೂರ್ವ ಶಿಕ್ಷಣ ಮಂಡಳಿಯಿಂದ ಇದೇ ಮೊದಲು ಎನ್ನುವಂತೆ 2ನೇ ಬಾರಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಗೆ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಈ ಬಗ್ಗೆ ಇಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ‘ಕರ್ನಾಟಕ ಶಾಲಾ ವತಿಯಿಂದ 2022-23ನೇ ಸಾಲಿನ ದ್ವಿತೀಯ ಪಿ.ಯು.ಸಿ. ಪೂರಕ ಪರೀಕ್ಷೆ-2 ಅನ್ನು ಪರೀಕ್ಷೆ ಹಾಗೂ ಮೌಲ್ಯನಿರ್ಣಯ ಮಂಡಳಿಯ ನಡೆಸಲಾಗುವುದು. ಕಳೆದ 2022-23ನೇ ಸಾಲಿನಲ್ಲಿ ಹಾಗೂ ಅದಕ್ಕಿಂತ ಹಿಂದಿನ ಸಾಲುಗಳಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮಾತ್ರ ಈ ಪರೀಕ್ಷೆಗೆ ನೋಂದಾಯಿಸಲು ಅರ್ಹರಾಗಿರುತ್ತಾರೆ ಎಂದು ಮಂಡಳಿ ತಿಳಿಸಿದೆ.
*2ನೇ ಬಾರಿಗೆ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆಯ ವೇಳಾಪಟ್ಟಿ ಹೀಗಿದೆ.*
ಆಗಷ್ಟ್ 21ರಂದು ಕನ್ನಡ, ಆರೇಬಿಕ್
ಆಗಷ್ಟ್ 22ರಂದು ಐಚ್ಛಿಕ ಕನ್ನಡ, ಕೆಮಿಸ್ಟ್ರಿ, ಬೇಸಿಕ್ ಮ್ಯಾಥ್ಸ್
ಆಗಷ್ಟ್ 23ರಂದು ಸಮಾಜ, ಎಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್
ಆಗಷ್ಟ್ 24ರಂದು ಲಾಜಿಕ್, ಹಿಂದೂಸ್ಥಾನಿ ಮ್ಯೂಸಿಕ್, ಬ್ಯುಸಿನೆಸ್ ಸ್ಟಡೀಸ್
ಆಗಷ್ಟ್ 25ರಂದು ಇತಿಹಾಸ, ಸ್ಟಾಟಸ್ಟಿಕ್ಸ್.
ಆಗಷ್ಟ್ 26ರಂದು ಇನ್ಫರ್ಮೇಷನ್ ಟೆಕ್ನಾಲಜಿ, ರಿಟೇಲ್, ಆಟೋ ಮೊಬೈಲ್, ಹೆಲ್ತ್ ಕೇಸ್, ಬ್ಯೂಟಿ ಆಂಡ್ ವೆಲ್ನೆಸ್.
ಆಗಷ್ಟ್ 28ರಂದು ಜಿಯೋಗ್ರಾಫಿ, ಸೈಕಾಲಜಿ, ಫಿಜಿಕ್ಸ್.
ಆಗಷ್ಟ್ 29ರಂದು ಅಕೌಂಟ್ಸ್, ಜಿಯಾಲಜಿ, ಎಜುಕೇಷನ್, ಹೋಂ ಸೈನ್ಸ್.
ಆಗಷ್ಟ್ 30ರಂದು ಪೊಲಿಟಿಕಲ್ ಸೈನ್ಸ್, ಮ್ಯಾಥಮೆಟಿಕ್ಸ್
ಆಗಷ್ಟ್ 31ರಂದು ಹಿಂದಿ
ಸಪ್ಟಂಬರ್ 01ರಂದು ಎಕನಾಮಿಕ್ಸ್, ಬಯಾಲಜಿ.
ಸಪ್ಟಂಬರ್ 02 ರಂದು ತಮಿಳ್, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ ಹಾಗೂ ಫ್ರೆಂಚ್
ವರದಿ : ಚಂದ್ರು ಆರ್. ಭಾನಾಪೂರ್