STATE NEWS : ಗಣೇಶ ವಿಸರ್ಜನೆ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ನಟ ದರ್ಶನ್ ಅವರ ಅಭಿಮಾನಿಗಳ ನಡುವೆ ಗಲಾಟೆ..!

You are currently viewing STATE NEWS : ಗಣೇಶ ವಿಸರ್ಜನೆ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ನಟ ದರ್ಶನ್ ಅವರ ಅಭಿಮಾನಿಗಳ ನಡುವೆ ಗಲಾಟೆ..!

ಪ್ರಜಾವೀಕ್ಷಣೆ ಸುದ್ದಿ:-

ಗಣೇಶ ವಿಸರ್ಜನೆ ವೇಳೆ ಹಿಂದೂ ಕಾರ್ಯಕರ್ತರು ಹಾಗೂ ನಟ ದರ್ಶನ್ ಅವರ ಅಭಿಮಾನಿಗಳ ನಡುವೆ ಗಲಾಟೆ..!

ಚಿತ್ರದುರ್ಗ : ಇತ್ತೀಚಿಗೆ ಭಾರೀ ಸದ್ದು ಮಾಡಿದ್ದ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದ ಕೋಮು ಗಲಭೆ ಪ್ರಕರಣ ಇನ್ನೂ ಮಾಸುವ ಮುನ್ನವೇ ಚಿತ್ರದುರ್ಗದಲ್ಲಿ ಮತ್ತೊಂದು ಗಲಾಟೆ ನಡೆದಿದ್ದು, ಆದರೆ, ಇದು ಹಿಂದೂ ಮುಸ್ಲಿಂ ಗಲಾಟೆಯಲ್ಲ ಬದಲಾಗಿ, ಹಿಂದೂ ಕಾರ್ಯಕರ್ತರು ಹಾಗೂ ನಟ ದರ್ಶನ್ ಅವರ ಅಭಿಮಾನಿಗಳ ನಡುವೆ ನಡೆದಿದ್ದ ಗಲಾಟೆ ಎಂದು ಮಾಹಿತಿ ಬಂದಿದೆ.

ಇಡೀ ರಾಜ್ಯದಲ್ಲಿ ಅತ್ಯಂತ ದೊಡ್ಡ ಮೆರವಣಿಗೆ ಎಂದು ಹೆಸರುವಾಸಿಯಾಗಿರುವ ಕೋಟೆ ನಾಡು ಚಿತ್ರದುರ್ಗದ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತರು ಹಾಗೂ ನಟ ದರ್ಶನ್ ಅವರ ಅಭಿಮಾನಿಗಳ ನಡುವೆ ಗಲಾಟೆ ನಡೆದಿದೆ ಎನ್ನಲಾಗಿದೆ.

ಇಂದು ಚಿತ್ರದುರ್ಗದಲ್ಲಿ ಹಿಂದೂ ಮಹಾಗಣಪತಿ ವಿಸರ್ಜನಾ ಮೆರವಣಿಗೆ ಸಂದರ್ಭದಲ್ಲಿ ನಟ ದರ್ಶನ್ ಅವರ ಭಾವಚಿತ್ರ ಇರುವ ಬಾವುಟ ಹಾರಾಡಿದೆ. ಈ ಕಾರಣಕ್ಕೆ ಮೆರವಣಿಗೆಯಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಅಷ್ಟೇ ಅಲ್ಲ, ಈ ಸಂದರ್ಭದಲ್ಲಿ ಹಿಂದೂ ಮಹಾಗಣಪತಿ ಕಾರ್ಯಕ್ರಮ ಆಯೋಜಿಸಿರುವ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಹಾಗು ದರ್ಶನ್ ಅಭಿಮಾನಿಗಳ ನಡುವೆ ಕೆಲ ಕಾಲ ವಾಗ್ವಾದ ನಡೆದಿದೆ.

ನಗರದ ಮದಕರಿ ವೃತ್ತದಲ್ಲಿ ಈ ಘಟನೆ ನಡೆದಿದೆ. ಮದಕರಿ ವೃತ್ತದಲ್ಲಿ ಕೆಲವರು ಸುದೀಪ್ ಭಾವಚಿತ್ರದ ಬಾವುಟ ಹಿಡಿದು ಡ್ಯಾನ್ಸ್ ಮಾಡುತ್ತಿದ್ದರೆ, ಇನ್ನೊಂದೆಡೆ ಕೆಲವರು ದರ್ಶನ್ ಭಾವಚಿತ್ರದ ಬಾವುಟ ಹಿಡಿದು ಪ್ರದರ್ಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್ ಭಾವಚಿತ್ರದ ಬಾವುಟ ಹಿಡಿದವರ ಮೇಲೆ ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ತಿಳಿದು ಬಂದಿದೆ.

Leave a Reply

error: Content is protected !!