KOPPAL NEWS : ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದಲೇ ಆಗಬೇಕಾಗಿದೆ. ಜಿ ಎಸ್ ಗೋನಾಳ..!

You are currently viewing KOPPAL NEWS : ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದಲೇ ಆಗಬೇಕಾಗಿದೆ. ಜಿ ಎಸ್ ಗೋನಾಳ..!

ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದಲೇ ಆಗಬೇಕಾಗಿದೆ. ಜಿ ಎಸ್ ಗೋನಾಳ..!

ಕೊಪ್ಪಳ : ‘ಕನ್ನಡ ನಾಡು ನುಡಿ ಭಾಷೆ ಅಭಿವೃದ್ಧಿ ಕನ್ನಡಿಗರಿಂದ ಆಗಬೇಕಿದೆ . ಕರ್ನಾಟಕದಲ್ಲಿ ಕನ್ನಡಿಗರೇ ಸಾರ್ವಭೌಮರು . ಭಾಷಾ ಪ್ರೇಮವನ್ನು ಹೊಂದಿದವರು ಮಾತ್ರ ಭಾಷೆಯನ್ನು ಅಭಿವೃದ್ಧಿಪಡಿಸಲ್ಲರು ಎಂದು ಸಾಹಿತಿ, ಹಿರಿಯ ಪತ್ರಕರ್ತ ಜಿ.ಎಸ್. ಗೋನಾಳ. ಹೇಳಿಸಿದರು.

ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜು ಕೊಪ್ಪಳ ಇವರಿಂದ ಬಹದ್ದೂರ ಬಂಡಿ ಗ್ರಾಮದಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಶಿಬಿರದ ಎರಡನೇ ದಿನದ ವಿಷಯ ಉಪನ್ಯಾಸಕರಾಗಿ ಆಗಮಿಸಿದ ಜಿ.ಎಸ್. ಗೋನಾಳ, ‘ವಿದ್ಯಾರ್ಥಿಗಳು ಕನ್ನಡವನ್ನು ಪ್ರೀತಿಸಬೇಕು, ಕನ್ನಡ ಪತ್ರಿಕೆಯನ್ನು ಹೆಚ್ಚು ಓದಬೇಕು ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸ ಇದೆ . ನಾವು ಭಾಷಾ ಪ್ರೇಮವನ್ನು ಮರೆತು ಅನ್ಯ ಭಾಷಿಗರೊಂದಿಗೆ ಅವರ ಭಾಷೆಯಲ್ಲಿ ಮಾತನಾಡುತ್ತೇವೆ ಇದು ದುರ್ದೈವ. ಹಳೆಗನ್ನಡ, ನುಡಿಗನ್ನಡ, ಹೊಸಗನ್ನಡ ಈ ರೀತಿಯಾಗಿ ಕನ್ನಡ ಬೆಳೆದು ಬಂದಿದೆ ಎಂದರು.

‘ಕುವೆಂಪುರವರು ಹೇಳಿದಂತೆ ಎಲ್ಲಾದರೂ ಇರು ಎಂತಾದರೂ ಇರು ಎಂದೆಂದಿಗೂ ನೀ ಕನ್ನಡವಾಗಿರು ಎಂಬುದನ್ನು ನಾವು ಯಾವಾಗಲೂ ನೆನಪಲ್ಲಿಟ್ಟುಕೊಳ್ಳಬೇಕು . ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಲಾರರು ಎನ್ನುವಂತೆ ಕನ್ನಡವನ್ನು ತಿಳಿಯದವರು ಕನ್ನಡದಲ್ಲಿ ಏನನ್ನು ರಚಿಸಲು ಸಾಧ್ಯವಿಲ್ಲ. ಜಗತ್ತಿನ ಮಹಾನ್ ವ್ಯಕ್ತಿಗಳಲ್ಲಿ ಕನ್ನಡಿರಿಗೂ ಸ್ಥಾನಮಾನ ಇದೆ. 371 J ಸೌಲಭ್ಯಗಳ ಕುರಿತು ಮಾತನಾಡಿ ಅದರ ಸೌಲಭ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳಿ ಎಂದು ಸ್ವಯಂ ಸೇವಕೀಯರಿಗೆ ಕಿವಿ ಮಾತು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಶಾರದಾ ಎಸ್ ರಜಪುತ್ ಮಾತನಾಡುತ್ತಾ, ‘ಮಹಿಳೆಯವರು ಶಿಕ್ಷಣವಂತರಾಗಿ ಆಗ ಅವಕಾಶಗಳು ನಿಮ್ಮನ್ನು ಹುಡುಕಿಕೊಂಡು ಬರುತ್ತವೆ . ಏಕಲವ್ಯನಿಗೆ ಗುರು ದ್ರೋಣಾಚಾರ್ಯರು ವಿದ್ಯೆ ಕಲಿಸಲು ನಿರಾಕರಿಸಿದರೂ ಗುರುಗಳ ಮೂರ್ತಿಯನ್ನು ಮುಂದಿಟ್ಟುಕೊಂಡು ಶಬ್ಧವೇದಿ ವಿದ್ಯೆಯನ್ನು ಕಲಿತು ಸಾಹಸಿಗರಾದರು. ಎಂಬುದನ್ನು ಕಥೆಯ ಮೂಲಕ ತಿಳಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಮಂಜುಳಾ ಉಂಡಿ, ಗ್ರಾಂ ಪಂ ಸದಸ್ಯ ಯೋಗಾನಂದ ಲೆಬಗೇರಿ ಮಾತನಾಡಿದರು. ಅಧ್ಯಕ್ಷ ಸ್ಥಾನವನ್ನು ಎಸ್ ಎ ರಜಪೂತ್ ವಹಿಸಿದ್ದರು. ಗಂಗಾ ತಂಡದವರು ಕಾರ್ಯಕ್ರಮ ನಿರ್ವಹಿಸಿದರು. ಸ್ವಯಂ ಸೇವಕಿ ರಿಜ್ವಾನ್ ಸ್ವಾಗತಿಸಿದರು. ಉಪನ್ಯಾಸಕ ಮಂಜುನಾಥ ವಂದಿಸಿದರು.

Leave a Reply

error: Content is protected !!