LOCAL NEWS : ಕನಕದಾಸರ ಆದರ್ಶಗಳನ್ನು ಮೈಗೂಡಿಸಿಕೊಳ್ಳಿ : ಕಳಕಪ್ಪ ಕಂಬಳಿ
ತಾಲೂಕಿನ ವಿವಿಧಡೆ ಕನಕದಾಸರ ಜಯಂತಿ ಆಚರಣೆ
ಕುಕನೂರು : ಸಾಮಾಜಿಕ ಸಾಮರಸ್ಯದ ಜೀವನಕ್ಕಾಗಿ ಬೆಳಕು ನೀಡುವ ಅನೇಕ ಸಂದೇಶ ಸಾರಿದ ಸಂತ ಶ್ರೇಷ್ಠ , ದಾಸ ಶ್ರೇಷ್ಠ ಭಕ್ತ ಕನಕದಾಸರ ತತ್ವ, ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕಿದೆ ಎಂದು ಯುವ ಧುರೀಣ ಕಳಕಪ್ಪ ಕಂಬಳಿ ಹೇಳಿದರು.
ಕುಕನೂರು ಪಟ್ಟಣದಲ್ಲಿ ತಾಲೂಕು ಆಡಳಿತದಿಂದ ನಡೆದ ಭಕ್ತ ಕನಕದಾಸರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪ್ರತಿಯೊಬ್ಬರೂ ಶೈಕ್ಷಣಿಕವಾಗಿ, ಆರ್ಥಿಕವಾಗಿ ಪ್ರಗತಿ ಸಾಧಿಸಬೇಕಿದೆ, ಜಾತಿ ಬೆದವಿಲ್ಲದ ಸಂತರ ತತ್ವ, ಆದರ್ಶ, ಸಂದೇಶಗಳನ್ನು ಪಾಲಿಸಿ ಉತ್ತಮ ಜೀವನ ನಡೆಸಬೇಕು ಎಂದು ಕಳಕಪ್ಪ ಕಂಬಳಿ ಹೇಳಿದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಕುಂಭಮೇಳ, ವಾದ್ಯಗಳೊಂದಿಗೆ ಕನಕದಾಸರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು, ಜಯಂತಿ ಅಂಗವಾಗಿ ಉಚಿತ ಸಾಮೂಹಿಕ ವಿವಾಹಗಳು ನಡೆದವು. ಶಿಕ್ಷಕ ಮೆಹಬೂಬ್ ಭಾಷಾ ಅವರಿಂದ ಭಕ್ತ ಕನಕದಾಸರ ಜೀವನ ಕುರಿತು ವಿಶೇಷ ಉಪನ್ಯಾಸ ನಡೆಯಿತು.
ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಎಚ್ ಪ್ರಾಣೇಶ್, ತಾಲೂಕು ಹಾಲುಮತ ಸಂಘದ ಅಧ್ಯಕ್ಷ ಮಂಜುನಾಥ್ ಕಡೇಮನಿ, ಮಂಜುನಾಥಯ್ಯ ಗುರುವಿನ, ಪಟ್ಟಣ ಪಂಚಾಯತ್ ಅಧ್ಯಕ್ಷೆ ಲಲಿತಮ್ಮ ಯಡಿಯಾಪುರ, ಉಪಾಧ್ಯಕ್ಷ ಪ್ರಶಾಂತ್ ಆರುಬೆರಳಿನ, ಕಾಂಗ್ರೆಸ್ ಮುಖಂಡರಾದ ಖಾಸಿಂ ಸಾಬ್ ತಳಕಲ್, ಸಿದ್ದಯ್ಯ ಕಳ್ಳಿಮಠ, ರಹೇಮಾನ್ ಸಾಬ್ ಮಕ್ಕಪ್ಪನವರ್, ರಾಮಣ್ಣ ಬಜೇಂತ್ರಿ ಮಹೇಶ್ ಗವರಾಳ್,,ಶೇಖಪ್ಪ ಕಂಬಳಿ, ಸಕ್ರಪ್ಪ ಚೌಡ್ಕಿ, ಪಟ್ಟಣ ಪಂಚಾಯತ್ ಸದಸ್ಯರಾದ ಗಗನ್ ನೋಟಗಾರ್, ನೂರುದ್ದಿನ್ ಸಾಬ್ ಗುಡಿಹಿಂದಲ್, ಬಾಲರಾಜ್ ಗಾಳಿ, ರಾಮಣ್ಣ ಬಂಕದಮನಿ, ಸಿರಾಜ್ ಕರಮುಡಿ ಇತರರು ಉಪಸ್ಥಿತರಿದ್ದರು