ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯನ್ನು ವಾಟಾಳ ನಾಗರಾಜ್ ರಿಗೆ ನೀಡಲಿ : ಬನ್ನೂರು ಕೆ ರಾಜು
ಮೈಸೂರು /ಕೊಪ್ಪಳ ‘: ಮಂಡ್ಯದಲ್ಲಿ ಹಮ್ಮಿಕೊಂಡಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ದ ಅಧ್ಯಕ್ಷರಾಗಿ ಹೊಣೆಯನ್ನು ಈ ಬಾರಿ ಕನ್ನಡದ ಹೋರಾಟಗಾರ ವಾಟಾಳ್ ನಾಗರಾಜ್ ಅವರನ್ನುಆಯ್ಕೆ ಮಾಡಲಿ ಎಂದು ಮೈಸೂರಿನ ಹಿರಿಯ ಪತ್ರಕರ್ತ ಹಾಗೂ ಸಾಹಿತಿ ಬನ್ನೂರು ಕೆ ರಾಜು ಅಭಿಪ್ರಾಯ ಪಟ್ಟರು. ಅವರು ಭಾನುವಾರ ಮೈಸೂರಿನ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕನ್ನಡ ಭವನದಲ್ಲಿ ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಕೊಪ್ಪಳದ ಕನ್ನಡ ಸಾಹಿತ್ಯ ಸಂಸ್ಕೃತಿ ಅಭಿವೃದ್ದಿ ಟ್ರಷ್ಟ್ (ರಿ) ಹಾಗೂ ಜಸ್ಟ್ ಮಾತ ಮಾತಲ್ಲಿ ಸ್ನೇಹಕೂಟ ಸಹಯೋಗದಲ್ಲಿ ರಾಜ್ಯ ಮಟ್ಟದ ೧೧ ನೆಯ ಸಾಂಸ್ಕೃತಿಕ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಕನ್ನಡ ನಾಡು ಹಲವು ಹತ್ತಾರು ಬಿಕ್ಕಟ್ಟು ಎದುರಿಸುತ್ತಿದೆ , ನದಿ ನೀರು ಹಂಚಿಕೆ ಇರಬಹುದು, ಗಡಿನಾಡು ಸಮಸ್ಯೆ, ಭಾಷಾ ಸಮಸ್ಯೆ, ಎಲ್ಲ ಬಗೆಯಲ್ಲಿ ಕನಾ೯ಟಕ ಹತ್ತಾರು ಜ್ವಲಂತ ಸಮಸ್ಯೆಗಳ ನಡುವೆ ಸಾಹಿತ್ಯೇತರ ವ್ಯಕ್ತಿ ಹಿರಿಯ ಜೀವಿ ವಾಟಾಳ್ ನಾಗರಾಜ್ ಅವರನ್ನು ಆಯ್ಕೆ ಮಾಡಿದರೆ ಸೂಕ್ತ ಎಂದು ಆಗ್ರಹಿಸಿದರು.
ನಿವೃತ್ತ ಹಿರಿಯ ತಂತ್ರಜ್ಞರು ಹಾಗೂ ಸಾಹಿತಿ ಎಂ.ಬಿ.ಜಯಶಂಕರ್ ಸಮ್ಮೇಳನದ ಸವಾ೯ಧ್ಯಕ್ಷತೆ ವಹಿಸಿ ಮಾತನಾಡಿ, ನಾಡು ನುಡಿ ಪರಂಪರೆಗೆ ಹೆಸರಾದ ಮೈಸೂರಿನಲ್ಲಿ ಸಾಂಸ್ಕೃತಿಕ ಸಮ್ಮೇಳನ ಆಯೋಜಿಸುವ ಮೂಲಕ ಕಿರೀಯ ಹಿರಿಯ ಸಾಂಸ್ಕೃತಿಕ ಪ್ರತಿಭೆಗಳಿಗೆ ಉತ್ತಮ ವೇದಿಕೆ ಇದಾಗಿದೆ, ಇಂಥ ಅಪರೂಪದ ವೇದಿಕೆ ಮೂಲಕ ಸಮಾಜದ ಎಲ್ಲ ಸ್ತರದ ಜನರಿಗೆ ಪ್ರೋತ್ಸಾಹಿಸಿದ ಹಿರಿಮೆ ಗರಿಮೆಗಳನ್ನು ಹೆಚ್ಚಿಸಿದೆ ಎಂದು ಬಣ್ಣಿಸಿದರು. ಅಧ್ಯಕ್ಷತೆ ವಹಿಸಿದ್ದ
ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಮಾತನಾಡಿ, ಮೈಸೂರಿನಂತ ಕೇಂದ್ರ ಸ್ಥಳದಲ್ಲಿ ವೈಚಾರಿಕತೆ ಆಸಕ್ತಿ ಕಡಿಮೆ ಆಗುತ್ತಿರುವ ದಿನಗಳಲ್ಲಿ ರಾಜ್ಯದ ಮೂಲೆಗಳಿಂದ ಚಿಂತಕರು ಕಲಾವಿದರು ತಂತ್ರಜ್ಞರು ಕಾರ್ಮಿಕರಿಗೆ ಈ ವೇದಿಕೆಯಲ್ಲಿ ಅವಕಾಶ ದೊರೆತಿದ್ದು ಸಂತಸದ ಸಂಗತಿ ಎಂದರು.
, ಕಾವೇರಿ ಕೊಳ್ಳದ ನೀರಾವರಿ ಸಮಸ್ಯೆಗಳು ಮತ್ತು ಪರಿಹಾರ ಕುರಿತು ವಿಚಾರ ಗೋಷ್ಠಿಯಲ್ಲಿ ಹಿರಿಯ ಪತ್ರಕರ್ತ ರಮೇಶ್ ಸುವೆ೯ ವಿಷಯ ಮಂಡಿಸಿದರು.,
ಚುಸಾಪ ಸಂಸ್ಥಾಪಕ ಅಧ್ಯಕ್ಷ ರಾದ ಡಾ. ಎಂ.ಜೆ ಆರ್ ಅರಸು ಅಧ್ಯಕ್ಷತೆ ವಹಿಸಿದ್ದರು.,
ವಿವಿಧ ಸಾಧಕರಿಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಕವಿರತ್ನ ರಾಜ್ಯ ಪ್ರಶಸ್ತಿಯನ್ನು ಹಿರಿಯ ಸಮಾಜ ಸೇವಕ ಎಂ. ಬಿ.ಅಳವಂಡಿ ಅವರು ಪ್ರದಾನ ಮಾಡಿದರು. , ಡಾ. ಟಿ.ತ್ಯಾಗರಾಜು, ಡಾ. ಜಂಬಣ್ಣ ಅಂಗಡಿ, ಮೊದಲಾದವರು ಅತಿಥಿಗಳಾಗಿ ಆಗಮಿಸಿದ್ದರು.
. ಸಮ್ಮೇಳನ ಸಂಚಾಲಕ ರುದ್ರಪ್ಪ ಭಂಡಾರಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.
ನಂತರ ನಡೆದ ಕವಿಗೋಷ್ಠಿಯನ್ನು ಹಟ್ಟಿ ಚಿನ್ನದ ಗಣಿ ಯ ಸಾಹಿತಿ ಡಾ. ಮಹೇಂದ್ರ ಕುಡಿ೯ ಚಾಲನೆ ನೀಡಿದರು. ಸಾಹಿತಿ ಡಾ.ಲಾವಣ್ಯ ಪ್ರಭ ಅವರು ಅಧ್ಯಕ್ಷತೆ ವಹಿಸಿದ್ದರು.,
ಡಾ. ರಾಜಶೇಖರ ಜಮದಂಡಿ , ಹಾಗೂ ಬರಹಗಾರ ಸಂತೋಷ ತಾಮ್ರಪಣಿ೯ ಉಪಸ್ಥಿತರಿದ್ದರು. ರಾಜ್ಯದ ವಿವಿಧ ಭಾಗಗಳಿಂದ ಬಂದಿದ್ದ ೧೫ ಜನ ಕವಿತೆ ವಾಚಿಸಿದರು. ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಯದುಗಿರಿ ಎಂ.ಎಸ್.ಇವರಿಂದ ನೃತ್ಯ, ನಾಟಕ ಭಾಗ೯ವ ಕೆಂಪರಾಜು (ಹಾಸ್ಯ) ಪುಷ್ಪಲತಾ ನಾರಾಯಣ ಅವರಿಂದ ಗಾಯನ, ಬಾಪು ಆರ್. ರತ್ನಮ್ಮ ಅವರಿಂದ ಸುಗಮ ಸಂಗೀತ, ವೈಷ್ಣವಿ ಜೋಶಿ ಅವರಿಂದ ಭರತ ನಾಟ್ಯ, ಮುರಾರಿ ಭಜಂತ್ರಿ ಅವರಿಂದ ಸುಗಮ ಸಂಗೀತ, ದೇವಪ್ಪ ಹರಿಜನ ಅವರಿಂದ ಜನಪದ ಗಾಯನ, ವೈಷ್ಣವಿ ರಾಠೋಡ್ ಅವರಿಂದ ಭಾರತ ನಾಟ್ಯ, ಬ್ರಹ್ಮಿಣಿ, ಶ್ರಾವಣಿ ಅವರಿಂದ ನೃತ್ಯ ಗಾಯನ, ವಿನ್ಮಯಿ ಅವರಿಂದ ಭಾರತ ನಾಟ್ಯ, ಕುಕನೂರಿನ ರಿದಂ ಡ್ಯಾನ್ಸ್ ಸ್ಟುಡಿಯೋ ತಂಡದಿಂದ ನೃತ್ಯ ಪ್ರದಶ೯ನ, ಹುಬ್ಬಳ್ಳಿಯ ಬಡಿಗೇರ ಓಣಿಯ ಕನಕದಾಸ ಭಜನಾ ಮಂಡಳಿಯಿಂದ ಕೋಲಾಟ ಹಾಗೂ ಭಜನೆ, ಮೈಸೂರಿನ ಮಾತೆಯೇ ಮಡಿಲು ತಂಡದಿಂದ ಗಾಯನ ಹಾಗೂ ಕೊಟ್ಟೂರು ತಾಲ್ಲೂಕಿನ ಕೊಗಳಿಯ ಶ್ರೀ ದುರ್ಗಾಂಬಿಕ ಎಸ್.ಸಿ.ಕಲಾತಂಡ ವತಿಯಿಂದ ದೊಡ್ಡಾಟ ಪ್ರದ ರ್ಶನ ನಡೆದವು. ಸಮಾರೋಪ:
ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಸಾಹಿತಿಗಳಾದ ಪದ್ಮನಾಭ ಸಮಾರೋಪ ನುಡಿ ಹೇಳಿದರು., ಸಾಹಿತಿ ಸತೀಶ್ ಜವರೇಗೌಡ ಅವರು ಆಶಯ ನುಡಿ ಹೇಳಿದರು, ಸಾಹಿತಿ ಶಶಿಕುಮಾರ್ ಎಂ. ಎ. ಹಾಗು ಯೋಗಗುರು ನಾಗರತ್ನ ಹಿರೇಮಠ ಅವರು ಅತಿಥಿಯಾಗಿ ಭಾಗವಹಿಸಿದ್ದರು.