Local News: ವೀರರಾಣಿ ಕಿತ್ತೂರು ಚೆನ್ನಮ್ಮನ ಜಯಂತಿಯ ಪೂರ್ವಭಾವಿ ಸಭೆ ಮುಂದೂಡಿಕೆ.

You are currently viewing Local News: ವೀರರಾಣಿ ಕಿತ್ತೂರು ಚೆನ್ನಮ್ಮನ ಜಯಂತಿಯ ಪೂರ್ವಭಾವಿ ಸಭೆ ಮುಂದೂಡಿಕೆ.

ವೀರರಾಣಿ ಕಿತ್ತೂರು ಚೆನ್ನಮ್ಮನ ಜಯಂತಿಯ ಪೂರ್ವಭಾವಿ ಸಭೆ ಮುಂದೂಡಲಾಗಿದೆ.

ಕುಕುನೂರು : ಇದೆ ಅಕ್ಟೋಬರ್ 23 ರಂದು ನಡೆಯಲಿರುವ 200ನೇ ವೀರರಾಣಿ ಕಿತ್ತೂರು ಚೆನ್ನಮ್ಮ  ಜಯಂತಿಯ ಪೂರ್ವಭಾವಿ ಸಭೆಯನ್ನು ಕುಕನೂರು ಪಟ್ಟಣದ ತಹಸಿಲ್ದಾರ್ ಕಾರ್ಯಾಲಯದಲ್ಲಿ ಬುಧವಾರ ಅ.16 ರಂದು ಹಮ್ಮಿಕೊಳ್ಳಲಾಗಿತ್ತು. ಆದರೆ ಪೂರ್ವ ಭಾವಿ ಸಭೆಗೆ ಸರ್ಕಾರದ ವಿವಿಧ 9 ಇಲಾಖೆಗಳಿಂದ ಅಧಿಕಾರಿಗಳು ಪೂರ್ವಭಾವಿ ಸಭೆಯಲ್ಲಿ ಹಾಜರಿರಬೇಕಿತ್ತು ಆದರೆ ಕೇವಲ ಮೂರು ಜನ ಅಧಿಕಾರಿಗಳು ಬಂದಿದ್ದರಿಂದ ಪಂಚಮಸಾಲಿ ಸಮಾಜದ ಮುಖಂಡರು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಮಾಜದ ಮುಖಂಡರಾದ ಈರಣ್ಣ ಅಣ್ಣಿಗೇರಿ ಮಾತನಾಡಿ ಸಮಾಜದ ಪ್ರತಿಯೊಂದು ಜಯಂತಿಯಲ್ಲಿಯು ಸಹ ಸರ್ಕಾರಿ ಅಧಿಕಾರಿಗಳು ಇದೇ ರೀತಿಯಾಗಿ ಬೇಕಾಬಿಟ್ಟಿಯಾಗಿ ನಡೆದುಕೊಳ್ಳುತ್ತಿದ್ದಾರೆ. ಎಲ್ಲ ಇಲಾಖೆಗಳ ಅಧಿಕಾರಿಗಳ ಸಮ್ಮುಖದಲ್ಲಿ ಮತ್ತೊಮ್ಮೆ ಪೂರ್ವ ಭಾವಿ ಸಭೆಯನ್ನು ಮಾಡಿ ವೀರರಾಣಿ ಕಿತ್ತೂರು ಚೆನ್ನಮ್ಮರ ಜಯಂತಿಯನ್ನು ಅಚ್ಚುಕಟ್ಟಾಗಿ ಹಾಗೂ ಎಲ್ಲ ಇಲಾಖೆ ಅಧಿಕಾರಿಗಳು ಆಚರಿಸುವಂತೆ ಕ್ರಮ ಕೈಗೊಳ್ಳಬೇಕೆಂದು ತಹಸಿಲ್ದಾರ್ ಗೆ ಮನವಿ ಮಾಡಿದರು.

ಬಳಿಕ ಗ್ರೇಟ್ ತಸಿಲ್ದಾರಾದ ಮುರಳಿದ ರಾವ್ ಕುಲಕರ್ಣಿ ಮಾತನಾಡಿ ಈ ಪೂರ್ವಭಾವಿ ಸಭೆಯನ್ನು ಮುಂದೂಡಲಾಗಿದ್ದು ಅ.19ರಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮತ್ತೊಮ್ಮೆ ಪೂರ್ವ ಭಾವಿ ಸಭೆಯನ್ನು ಹಮ್ಮಿಕೊಳ್ಳಲಾಗುವುದು ಆ ಸಭೆಯಲ್ಲಿ ಎಲ್ಲಾಧಿಕಾರಿಗಳು ಹಾಜರಲಿರಲಿದ್ದಾರೆ ಎಂದು ತಿಳಿಸಿದರು. ಈ ಸಂಧರ್ಭದಲ್ಲಿ ಶಿರಸ್ತೇದಾರ್ ಮುಸ್ತಾಫ ಹಾಗು ಸಮಾಜದ ಮುಖಂಡರಾದ ಗೆದೆಗಪ್ಪ ಪವಾದಷೆಟ್ಟಿ, ಪ್ರಭು ಹಳ್ಳಿ, ರಾಮನಗೌಡ, ಮಲ್ಲಿಕಾರ್ಜುನ ಕುಡ್ಲೂರ್, ಕಳಕಪ್ಪ ಕ್ಯಾದಗುಂಪಿ, ಶರಣಪ್ಪ ವೀರಾಪುರ, ಅಂದಪ್ಪ ಹುರಳಿ, ಮಹದೇವಪ್ಪ ಕುರಿ, ಚಂದ್ರು ಬಗನಾಳ, ವೀರೇಶ ಸಬರದ, ಲಿಂಗನಗೌಡ. ವೀರಣಗೌಡ ಮಾಲಿಪಾಟೀಲ, ಮಂಜುನಾಥ ಹೀರೆಗೌಡರ, ಬಸಣ್ಣ ಇಬೇರಿ, ಶರಣಪ್ಪ ಚೆಂಡುರು. ಬಸಪ್ಪ ನಾಡಗೌದ್ರ, ಸಿದ್ದಪ್ಪ ಸಬರದ, ಕಲಕೇಶ ಹತ್ತಿಕಟಗಿ, ಕಲ್ಲಪ್ಪ ಕಿವಡಿ ಹಾಗು ಇತರರಿದ್ದರು.

ವರದಿ: ಶರಣಯ್ಯ V.T

 

 

Leave a Reply

error: Content is protected !!