ರಾಮಾಯಣವೆಂಬ ಮಹಾನ್ ಕಾವ್ಯವನ್ನು ಜಗತ್ತಿಗೆ ಕೊಡುಗೆ ನೀಡಿದ ಮಹಾನ್ ಮಹರ್ಷಿ ವಾಲ್ಮೀಕಿ: ದಂಡಾಧಿಕಾರಿ ವಾಸುದೇವಸ್ವಾಮಿ
ಲಕ್ಷ್ಮೇಶ್ವರ : ತಾಲೂಕು ಆಡಳಿತ ಹಾಗೂ ಸಮಾಜದ ವತಿಯಿಂದ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲೂಕ ದಂಡಾಧಿಕಾರಿಗಳ ಕಚೇರಿಯಲ್ಲಿ ಆಚರಿಸಲಾಯಿತು.
ಕಾರ್ಯಕ್ರಮವನ್ನು ದಂಡಾಧಿಕಾರಿ ವಾಸುದೇವ ಸ್ವಾಮಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಕರ್ಪೂರ ಬೆಳಗಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ರಾಮಾಯಣ ಮಹಾಕಾವ್ಯವನ್ನು ನೀಡಿದ್ದಾರೆ. ರಾಮಾಯಣ ಕೇವಲ ಧಾರ್ಮಿಕ ಗ್ರಂಥವಷ್ಟೇ ಅಲ್ಲದೆ ಕಾವ್ಯದ ದೃಷ್ಟಿಯಲ್ಲಿ ಮಹತ್ವ ಪಡೆದಿದೆ. ಸಕಲ ಜೀವರಾಶಿಗಳಿಗೆ ಲೇಸನ್ನು ಬಯಸುವ ಪರಿಕಲ್ಪನೆಯನ್ನು ಸಾರಿದ್ದಾರೆ. ಅವರ ಆದರ್ಶ ಚಿಂತನೆಗಳು ಅನುಕರಣೆ ಅರ್ಹವಾಗಿವೆ ಎಂದರು. ಅದಲ್ಲದೆ ರಾಮಾಯಣ ಮೂಲಕ ಇಡಿ ಮನುಕುಲಕ್ಕೆ ಪ್ರೀತಿ ನಂಬಿಕೆ ವಿಶ್ವಾಸ ಸೌಂದರ್ಯ ಪ್ರಜ್ಞೆ ಬದ್ಧತೆಯಂತಹ ಆದರ್ಶ ಮೌಲ್ಯಗಳನ್ನು ನೀಡಿದ್ದಾರೆ ಯುವಜನ ತತ್ವದರ್ಶನ ಅಳವಡಿಸಿಕೊಳ್ಳಬೇಕು.
ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಅಭಿವೃದ್ಧಿಗೊಳಿಸುವ ಸಲುವಾಗಿ ಮಹರ್ಷಿ ವಾಲ್ಮೀಕಿ ಅವರ ಚಿಂತನೆಗಳು ಸಹಕಾರವಾಗಿವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮಾಜದ ಮುಖಂಡರು ಸಮಾಜದವರು ಹಾಗೂ ಅಧಿಕಾರಿಗಳು ಸಿಬ್ಬಂದಿಗಳು ಭಾಗಿಯಾಗಿದ್ದರು.