ರಾಮಾಯಣವೆಂಬ ಮಹಾನ್ ಕಾವ್ಯವನ್ನು ಜಗತ್ತಿಗೆ ಕೊಡುಗೆಯಾಗಿ ನೀಡಿದ ಮಹಾನ್ ಮಹರ್ಷಿಗಳಾದ ವಾಲ್ಮೀಕಿ
ಶಿರಹಟ್ಟಿ : ಪಟ್ಟಣದಲ್ಲಿ ಮೇರವಣಿಗೆಯ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ವಿಜೃಂಭಣೆಯಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಿರಹಟ್ಟಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಡಾಕ್ಟರ್ ಚಂದ್ರು ಲಮಾಣಿ ಅವರು ವಾಲ್ಮೀಕಿಯವರು ಒಬ್ಬ ಋಷಿ ಹಾಗೂ ಸಂಸ್ಕೃತ ಕವಿ ರಾಮಾಯಣ ಮಹಾಕಾವ್ಯದ ಕರ್ತೃ. ಮೊದಲ ಮಹಾಕಾವ್ಯ ರಚಿಸಿದ ಕಾರಣ ವಾಲ್ಮೀಕಿಯವರನ್ನು ಆದಿಕವಿ ಎಂದು ಕರೆಯಲಾಗಿದೆ.
ಮಹರ್ಷಿ ವಾಲ್ಮೀಕಿ ಸಂಸ್ಕೃತದ ಮಹಾನ್ ಪ್ರತಿಪಾದಕರಾಗಿದ್ದರು ಮತ್ತು ಮಹಾಕಾವ್ಯ ರಾಮಾಯಣವನ್ನು ಬರೆದಿದ್ದಾರೆ. ಇದು ಹಿಂದೂ ಧರ್ಮದ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾಗಿದೆ ಮತ್ತು ಇದು ರಾಮನ ಸಂಪೂರ್ಣ ಜೀವನವನ್ನು ಬಿತ್ತರಿಸಿದೆ.ಸಂಸ್ಕೃತ ವಿದ್ವಾಂಸರು ರಾಮಾಯಣವನ್ನು ಪಠಿಸುವ ಮೂಲಕ ಅವರ ಜಯಂತಿಯನ್ನು ಆಚರಿಸುತ್ತಾರೆ. ಈಂಥಹ ಮಹಾನ್ ವ್ಯಕ್ತಿಯ ಆದರ್ಶಗಳ ಹಾಗೂ ತತ್ವಗಳ ಅಡೆಯಲ್ಲಿ ನಾವುಗಳು ಜೀವನ ಸಾಗಿಸಬೇಕು ಎಂದರು.