LOCAL NEWS : ಸರ್ಕಾರಿ ನೌಕರ ಸಂಘದ ಚುನಾವಣೆ : ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ!

You are currently viewing LOCAL NEWS : ಸರ್ಕಾರಿ ನೌಕರ ಸಂಘದ ಚುನಾವಣೆ : ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ!

ಸರ್ಕಾರಿ ನೌಕರ ಸಂಘದ ಚುನಾವಣೆ : ನಿರ್ದೇಶಕರ ಸ್ಥಾನಕ್ಕೆ ನಾಮಪತ್ರ ಸಲ್ಲಿಕೆ!

ಕುಕನೂರು : “ಶಿಕ್ಷಕರು ಸಂಘಟನಾತ್ಮಕ ಕ್ರಿಯಾಶೀಲರಾಗಿ ಬೆಳೆಯಬೇಕಿದೆ” ಎಂದು ಪ್ರೌಢಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸೋಮಶೇಖರ್ ಹರ್ತಿ ಹೇಳಿದರು.

ಪಟ್ಟಣದ ಸರ್ಕಾರಿ ನೌಕರ ಚುನಾವಣೆ ಕಚೇರಿಯಲ್ಲಿ ನಿರ್ದೇಶಕರ ನಾಮಪತ್ರ ಸಲ್ಲಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರ ಸಂಘದ ಚುನಾವಣೆ ನಡೆಯುತ್ತಿದ್ದು, ನಮ್ಮ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ತಾಲ್ಲೂಕಿನಲ್ಲಿ ಇಬ್ಬರು ನಿರ್ದೇಶಕರು ಇದ್ದು, ಅದರಲ್ಲಿ ತಾಲ್ಲೂಕ ನೌಕರರ ಸಂಘದ ಅಧ್ಯಕ್ಷ ಚುನಾವಣೆಗೆ ಸ್ಪರ್ಧಿಸಲು ತಯಾರಿ ನಡೆಸಿದ್ದೇವೆ. ಎಲ್ಲಾ ಇನ್ನುಳಿದ ಇಲಾಖೆಗಳ ನೌಕರ ಸಂಘದವರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.

ಪ್ರೌಢಶಾಲಾ ಶಿಕ್ಷಕರ ರಾಜ್ಯ ಉಪಾಧ್ಯಕ್ಷ ಜಾಕಿರ್ ಹುಸೇನ್, ತಾಲ್ಲೂಕ ಅಧ್ಯಕ್ಷ ಬಸವರಾಜ್ ಮೇಟಿ, ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಉದಯಕುಮಾರ್ ತಳವಾರ್, ಕಾರ್ಯದರ್ಶಿ ಸುರೇಶ್ ಅಬ್ಬಿಗೇರಿ, ಪಕೀರಪ್ಪ ವಾಲ್ಮೀಕಿ, ರಂಗಪ್ಪ ಓಲೆಕಾರ್, ಸುರೇಶ್ ಮಾದಿನೂರ್ ಬಸವರಾಜ್ ಅಂಗಡಿ, ಶರಣಪ್ಪ ವೀರಾಪುರ್, ಹಣಮಂತಪ್ಪ ಅವರದಮನಿ, ಶರಣಪ್ಪ ಬಿಸನಳ್ಳಿ, ಕಾಶಿನಾಥ್ ಹಾಗೂ ಮುಂತಾದ ಶಿಕ್ಷಕರು ಇದ್ದರು.

Leave a Reply

error: Content is protected !!