ಯಲಬುರ್ಗಾ : ಕರ್ನಾಟಕ ವಿಧಾನಸಭಾ ಸಾರ್ವತ್ರಿಕ ಚುನಾವಣೆಯ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅವರು ಇದೇ ಏಪ್ರಿಲ್ 17ರಂದು ಯಲಬುರ್ಗಾ ವಿಧಾನಸಭಾ ಕ್ಷೇತ್ರಕ್ಕೆ ಉಮೇದುವಾರಿಕೆ ಬಯಸಿ ನಾಮಪತ್ರ ಸಲ್ಲಿಸಲಿದ್ದಾರೆ.
ಯಲಬುರ್ಗಾ ಪಟ್ಟಣದನೆಡೆದ ಸಭೆಯೊಂದರಲ್ಲಿ ಮಾತನಾಡಿದ ಅವರು, ‘ನಾನು ಇದೇ ಏಪ್ರಿಲ್ 17ರಂದು ನಾಮಪತ್ರ ನೀಡುವುದು ನಿರ್ಧರಿಸಿದ್ದು, ನನ್ನ ಯಾವ ಕಾರ್ಯಕರ್ತರು ಸಹ ಆ ದಿನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಬೇಡಿ ಯಾಕೆಂದರೆ ನನಗೆ ಪ್ರತಿದಿನವೂ ಶುಭದಿನ ವಾಗಿದ್ದು, ಮಹೂರ್ತ ಪಂಚಾಂಗಗಳನ್ನು ನೋಡುವ ಅಭ್ಯಾಸ ನನಗಿಲ್ಲ, ಕಾರ್ಯಕರ್ತರ ಮೇಲೆ ಅಪಾರ ವಿಶ್ವಾಸ ಇಟ್ಟು ಏಪ್ರಿಲ್ 17ರಂದು ನಾಮಪತ್ರ ಸಲ್ಲಿಸಲಿದ್ದೇನೆ ಎಂದು ತಿಳಿಸಿದರು.