ಬೆಂಗಳೂರು : ಸದಾ ಒಂದಿಲ್ಲ ಒಂದು ವಿವಾದದಲ್ಲಿ ಸಿಲುಕಿ ಹಾಕಿಕೊಳ್ಳುವ ಪ್ರಗತಿಪರ ಹೋರಾಟಗಾರ ನಟ ಅಹಿಂಸಾ ಚೇತನ್ ಕುಮಾರ್ ಇದೀಗ ಬಹುಭಾಷ ನಟ ಪ್ರಕಾಶ್ ರೈ ಈ ಇಬ್ಬರು ನಟರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚಿಗಷ್ಟೇ ಬಿಜೆಪಿಗೆ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಬೆಂಬಲ ನೀಡಿದ್ದರು. ಈ ಬಗ್ಗೆ ನಟ ಪ್ರಕಾಶ್ ರೈ, ಸುದೀಪ್ ವಿರುದ್ಧ ಟ್ವೀಟ್ ಮಾಡಿ ಕಿಡಿಕಾರಿದ್ದರು. ಇದೀಗ ಇಬ್ಬರೂ ನಟರಿಗೆ ಚೇತನ್ ಅಹಿಂಸಾ ಟ್ವಿಟರ್ ನಲ್ಲಿ ಪೋಸ್ಟ್ ಒಂದನ್ನು ಮಾಡುವ ಮೂಲಕ ಟಾಂಗ್ ನೀಡಿದ್ದಾರೆ.
“ಬಿಜೆಪಿಗೆ ನಟ ಸುದೀಪ್ ರವರು ನೀಡಿದ ಬೆಂಬಲದಿಂದ ಪ್ರಕಾಶ್ ರಾಜ್ ರವರು ‘ಆಶ್ಚರ್ಯ & ಆಘಾತಕ್ಕೊಳಗಾಗಿದ್ದಾರೆ’ ಇದು ಕುತೂಹಲಕಾರಿ ವಿಷಯವಾಗಿದೆ. ಇಬ್ಬರು ಪ್ರತಿಭಾವಂತ ನಟರು – ಒಬ್ಬರು ಬಿಜೆಪಿ ಪರ & ಮತ್ತೊಬ್ಬರು ಬಿಜೆಪಿ ವಿರೋಧಿ – ಜೂಜಿನ ಜಾಹೀರಾತುಗಳ ಮೂಲಕ ಇಬ್ಬರು ಸಹ ಹೆಚ್ಚು ಹಣವನ್ನು ಗಳಿಸಿದ್ದಾರೆ ಎಂದು ನಟ ಅಹಿಂಸಾ ಚೇತನ್ ಕುಮಾರ್ ಇವರಿಗೂ ಟಾಂಗ್ ನೀಡಿದ್ದಾರೆ.
‘ನಾನು ಇಬ್ಬರ ನಿಲವುಗಳು/ಸಿದ್ಧಾಂತಗಳು ಒಪ್ಪದಿದ್ದರೂ, ಅಂತಹ ಪ್ರಶ್ನಾರ್ಹ ಸಂಪಾದನೆಯನ್ನು ಮೊದಲು ಯಾರು ಸದ್ಬಳಕೆಗೆ ಹಿಂದುರುಗಿಸುತ್ತಾರೋ ಆ ವ್ಯಕ್ತಿ ಮೇಲುಗೈಯಾಗುತ್ತಾರೆ ಎಂದು ಇಬ್ಬರೂ ನಟರಿಗೆ ಚೇತನ್ ಅಹಿಂಸಾ ಪೋಸ್ಟ್ ಒಂದನ್ನು ಮಾಡುವ ಮೂಲಕ ಕಿಡಿಕಾರಿದ್ದಾರೆ.