ಪ್ರಜಾವೀಕ್ಷಣೆ ಸುದ್ದಿಜಾಲ :-
LOCAL-EXPRESS :”ಹೆಲ್ಮೆಟ್ ಧರಿಸಿ ಜೀವ ಉಳಿಸಿ” ಶಾಲಾ ಮಕ್ಕಳಿಂದ ರಸ್ತೆ ಸುರಕ್ಷತಾ ಜಾತಾ..!
ಲಕ್ಷ್ಮೇಶ್ವರ : ಪಟ್ಟಣದ ಪೊಲೀಸ್ ಠಾಣೆಯ ಪಿಎಸ್ಐ ನಾಗರಾಜ್ ಗಡಾದಅವರ ವತಿಯಿಂದ ಅಪರಾಧ ತಡೆ ಮಾಸಾಚರಣೆ ಹಾಗೂ ರಸ್ತೆ ಸುರಕ್ಷತಾ ಅಭಿಯಾನ ನಿಮಿತ್ತ ಶಾಲಾ ಮಕ್ಕಳ ಜಾತಾ ಹಮ್ಮಿಕೊಳ್ಳಲಾಗಿತ್ತು.
ಪಟ್ಟಣದ ಮಹಾಕವಿ ಪಂಪ ಸರ್ಕಲ್ ಹತ್ತಿರ ಇರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಕು ನಂಬರ್ ಸ್ಕೂಲ್ ಮಕ್ಕಳಿಂದ ಹೆಲ್ಮೆಟ್ ಧರಿಸಿ ಜೀವ ಉಳಿಸಿ ಘೋಷಣೆ ಕೂಗುತ್ತಾ ಜಾತಾ ಕೈಗೊಂಡಿದ್ದರು.
ಬಳಿಕ ಮಾತನಾಡಿದ ಅವರು, ಮಕ್ಕಳು ಬೈಕ್ ಅನ್ನು ಓಡಿಸುವುದು ಅಪರಾಧವಾಗಿದೆ. ಅವರಿಗೆ ರಸ್ತೆಯ ನಿಯಮಗಳ ಬಗ್ಗೆ ಸರಿಯಾಗಿ ಗೊತ್ತಿರುವುದಿಲ್ಲ. ಇಂಥವರು ಬೈಕ್ ಓಡಿಸುವುದರಿಂದ ಅಪಘಾತಗಳು ಹೆಚ್ಚುತ್ತಿವೆ ಎಲ್ಲಿ ಅಂದರೆ ಅಲ್ಲೇ ಬೈಕ್ ಸವಾರರು ತಮ್ಮ ಜೀವದ ಸುರಕ್ಷತೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು ಎಂದರು.
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾತ ಸುರಕ್ಷತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ವರದಿ: ವೀರೇಶ್ ಗುಗ್ಗರಿ