ಶಿರಹಟ್ಟಿ : ಗದಗ್ ತೊಂಟದಾರ್ಯ ಮಠದ ಲಿಂಗೈಕ್ಯ ಸಿದ್ದಲಿಂಗ ಶ್ರೀಗಳ ಜಯಂತಿಯನ್ನು ಭಾವೈಕ್ಯತಾ ದಿನವನ್ನಾಗಿ ಆಚರಣೆ ಮಾಡತ್ತಿರುವುದಕ್ಕೆ ಶಿರಹಟ್ಟಿ ಫಕೀರೇಶ್ವರ ಮಠದ ದಿಂಗಾಲೇಶ್ವರ ಶ್ರೀಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಶಿರಹಟ್ಟಿ ಫಕೀರೇಶ್ವರ ಮಠದಲ್ಲಿ ಇಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಠದ ಉತ್ತರಾಧಿಕಾರಿಗಳಾದ ಫಕೀರದಿಂಗಾಲೇಶ್ವರ ಶ್ರೀಗಳು. ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದ್ದಾಗಿದೆ, ತೊಂಟಾದರ್ಯ ಮಠದ ಲಿಂಗೈಕ್ಯ ಸಿದ್ದಲಿಂಗ ಶ್ರೀಗಳ ಭವೈಕ್ಯತಾ ದಿನ ಆಚರಣೆಗೆ ನಮ್ಮ ಆಕ್ಷೇಪ ವಿದೆ ಎಂದು ಫಕೀರ ದಿಂಗಾಲೇಶ್ವರ ಶ್ರೀಗಳು ಹೇಳಿದ್ದಾರೆ.
ಫೆಬ್ರುವರಿ 21ನೇ ತಾರೀಕು ಸಿದ್ದಲಿಂಗ ಸ್ವಾಮಿಗಳ 75ನೇ ಜಯಂತಿಯನ್ನು ಭಾವೈಕ್ಯತಾ ದಿನ ಎಂದು ಆಚರಣೆ ಮಾಡಿದ್ದೆ ಆದರೆ ಗದಗ್ ನಗರದಲ್ಲಿ ನಾಳೆ ನಾವು ಕರಾಳ ದಿನ ಆಚರಣೆ ಮಾಡಲಾಗುತ್ತದೆ ಎಂದು ಹೇಳಿದ್ದಾರೆ.
ಭಾವೈಕ್ಯತಾ ಯಾತ್ರೆ ಪದ ಬಳಕೆಗೆ ದಿಂಗಾಲೇಶ್ವರ ಶ್ರೀಗಳು ಆಕ್ಷೇಪ ವ್ಯಕ್ತಪಡಿಸಿದ್ದು . ಭಾವೈಕ್ಯತೆಯ ಪರಂಪರೆ ಶಿರಹಟ್ಟಿಯ ಫಕೀರೇಶ್ವರ ಮಠದಾಗಿದೆ. ಲಿಂಗೈಕ್ಯ ಡಾಕ್ಟರ್ ಸಿದ್ದಲಿಂಗ ಸ್ವಾಮೀಜಿಯವರಿಗೆ ಭಾವೈಕ್ಯತೆಯ ಹರಿಕಾರ ಎಂಬುವುದು ಅನ್ವಯ ಆಗೋದಿಲ್ಲ. ಹೀಗಾಗಿ ಭಾವೈಕ್ಯತಾ ಹರಿಕಾರ ಎನ್ನುವ ಪದವನ್ನು ಬಳಕೆ ಮಾಡಬಾರದೆಂದು ಹೇಳಿದರೂ ಸಹ ಅವರು ಆಚರಿಸಿದರೆ ಭಾವೈಕ್ಯತಾ ದಿನಾಚರಣೆಗೆ ನಮ್ಮ ವಿರೋಧ ಇದೆ. ನಮ್ಮ ಮನವಿಗೆ ಸ್ಪಂದಿಸದೇ ಇದ್ದರೆ ತೋಂಟದಾರ್ಯ ಮಠದ ರಥದ ಆವರಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಹಾಗೂ ಅಂದು ಕರಾಳ ದಿನವೆಂದು ಆಚರಿಸುತ್ತೇವೆ ಎಂದು ಖಡಕ್ ಎಚ್ಚರಿಕೆಯನ್ನು ದಿಂಗಾಲೇಶ್ವರ ಶ್ರೀಗಳು ನೀಡಿದ್ದಾರೆ.
ಶ್ರೀಗಳ ಇಂದಿನ ಸುದ್ದಿಗೋಷ್ಟಿಯಲ್ಲಿ ಎನ್ ಆರ್ ಕುಲಕರ್ಣಿ, ಎಚ್ ಎಂ ದೇವಗೇರಿ, ಸಂದೀಪ್ ಕಪ್ಪತ್ತನವರ,ಪರಮೇಶ ಪರಬ,ಎಮ್.ಕೆ.ಲಮಾಣಿ, ನಾಗರಾಜ್ ಲಕ್ಕುಂಡಿ,ಹೊನ್ನಪ್ಪ ಶಿರಹಟ್ಟಿ, ಅಕ್ಬರ್ ಸಾಬ್ ಯಾದಗಿರಿ, ಶಿವನಗೌಡ ಪಾಟೀಲ ಹಾಗೂ ಮಠದ ಭಕ್ತರು ಉಪಸ್ಥಿತರಿದ್ದರು.
ವರದಿ : ವೀರೇಶ್ ಗುಗ್ಗರಿ, ಶಿರಹಟ್ಟಿ, ಗದಗ್