Local News : ಅದ್ದೂರಿಯಾಗಿ ಸಂಪನ್ನಗೊಂಡ ಐತಿಹಾಸಿಕ ಇಟಗಿಯ ಮಹೇಶ್ವರ ರಥೋತ್ಸವ.

You are currently viewing Local News : ಅದ್ದೂರಿಯಾಗಿ ಸಂಪನ್ನಗೊಂಡ ಐತಿಹಾಸಿಕ ಇಟಗಿಯ ಮಹೇಶ್ವರ ರಥೋತ್ಸವ.

ಅದ್ದೂರಿಯಾಗಿ ಸಂಪನ್ನಗೊಂಡ ಐತಿಹಾಸಿಕ ಇಟಗಿಯ ಮಹೇಶ್ವರ ರಥೋತ್ಸವ

ಕುಕನೂರು : ತಾಲೂಕಿನ ಇಟಗಿ ಗ್ರಾಮದಲ್ಲಿರುವ ಐತಿಹಾಸಿಕ ಮಹದೇವ ದೇವಾಲಯ ಮಹೇಶ್ವರ ರಥೋತ್ಸವವು ಅದ್ದೂರಿಯಾಗಿ ಸಂಪನ್ನಗೊಡಿಂತು.

ಇತಿಹಾಸ ಪ್ರಸಿದ್ದ ಇಟಗಿ ಗ್ರಾಮದ ಮಹದೇವ ಮಹೇಶ್ವರನ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ತೋಂಟದಾರ್ಯ ಶಾಖಾ ಮಠದಲ್ಲಿ ಶ್ರೀ ಶರಣಬಸವೇಶ್ವರ ದೇವರ ಪುರಾಣ ಪ್ರವಚನ, ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಎಳ್ಳ ಅಮವ್ಯಾಸೆಯ ದಿನವಾದ ಇಂದು ಗೊರ್ಲೇಕೊಪ್ಪ ಗ್ರಾಮದಿಂದ ನಂದಿ ಕೋಲು ಆಗಮಿಸುತ್ತಿದ್ದಂತೆ ಇಂದು ಸಂಜೆ 7 ಗಂಟೆಗೆ ಯಲಬುರ್ಗಾದ ಶ್ರೀ ಮುರಡಿ ಮಠದ ಬಸವಲಿಗೇಶ್ವರ ಶಿವಾಚಾರ್ಯ ಸ್ವಾಮಿಗಳು ಹಾಗೂ ಕುಕನೂರು ಪಟ್ಟಣದ ಅನ್ನದಾನೀಶ್ವರ ಮಠದ ಮಹಾದೇವ ಮಹಾಸ್ವಾಮಿಗಳ ನೇತೃತ್ವದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.


ಈ ರಥೋತ್ಸವು 360ಡಿಗ್ರಿ ತಿರುಗುವ ವಿಶೇಷತೆಯನ್ನು ಹೊಂದಿದ್ದು, ವಿದ್ಯುತ್ ದೀಪಾಲಂಕಾರದಿಂದ ಶೃಗಾಂರಗೊ0ಡು ನೆರೆದಿದ್ದ ಭಕ್ತರನ್ನು ಕಂಗೋಳಿಸುತ್ತಿತ್ತು. ರಥೋತ್ಸವಕ್ಕೆ ನೆರೆದಿದ್ದ ಸಾವಿರಾರು ಭಕ್ತರು ಮಹಾದೇವರ ಘೋಷಣೆಯನ್ನು ಉತ್ತತ್ತಿ ಹಾಗೂ ಬಾಳೆಯನ್ನು ಅರ್ಪಿಸಿ ತಮ್ಮ ಭಕ್ತಿಯನ್ನು ಮರೆದರು.

Leave a Reply

error: Content is protected !!