ಗಂಗಾವತಿ : ಈ ಕ್ಷೇತ್ರದ ಯುವ ನಾಯಕ ಸುಗ್ರೀವ ಅವರು ಗಂಗಾವತಿ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರವನ್ನು ಸಲ್ಲಿಸಿದ್ದಾರೆ. ‘ಇದೇ ಸಂದರ್ಭದಲ್ಲಿ ಮಾಧ್ಯಮದ ಜೊತೆ ಮಾತನಾಡಿದ ಸುಗ್ರೀವ,ಇದೆ ಏಪ್ರಿಲ್ 24 ರಂದು ನಮಗೆ ಗುರುತಿನ ಚಿನ್ಹೆ ಚುನಾವಣಾ ಆಯೋಗದಿಂದ ನೀಡಲಾಗುತ್ತೆ. ಚಿನ್ನೆ ಬಂದ ನಂತರ ತಮ್ಮೆಲ್ಲರಿಗೂ ನಾನು ಭೇಟಿಯಾಗಿ ನಿಮ್ಮ ಮತದಾನಕ್ಕೆ ಪ್ರಚಾರ ಮಾಡಲಿದ್ದೇನೆ’ ಎಂದು ಹೇಳಿದರು.
‘ನನ್ನ ಗುರುತಿಗೆ ನಿಮ್ಮ ಅಮೂಲ್ಯವಾದ ಮತವನ್ನು ಹಾಕಿ ಬಹುಮತದಿಂದ ಗೆಲ್ಲಿಸಿ ಕ್ಷೇತ್ರದ ಅಭಿವೃದ್ಧಿ ಹಾಗೂ ಸೇವೆ ಮಾಡಲಿಕ್ಕೆ ಒಂದು ಅವಕಾಶವನ್ನು ನೀಡುತ್ತಿರೆಂದು ಭಾವಿಸಿದ್ದೇನೆ. ಕ್ಷೇತ್ರದ ಮತದಾರ ಬಾಂಧವರೇಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ’ ಎಂದು ಮತದಾರರಲ್ಲಿ ವಿನಂತಿ ಮಾಡಿದರು.
ವರದಿ : ಹನುಮೇಶ ಬಟಾರಿ ಗಂಗಾವತಿ