ಪ್ರಜಾವೀಕ್ಷಣೆ ಸುದ್ದಿ :
LOCAL NEWS : ಹಾಳಾದ ಗ್ರಾಮೀಣ ರಸ್ತೆ ಸುಧಾರಣೆಗಾಗಿ ತಾಲೂಕ್ ದಂಡಾಧಿಕಾರಿಗೆ ಮನವಿ..!!
ಶಿರಹಟ್ಟಿ : ಮಾಜಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ನಾಗರಾಜ ಲಕ್ಕುಂಡಿ ಅವರ ನೇತೃತ್ವದಲ್ಲಿ ಶಿರಹಟ್ಟಿ ಯಿಂದ ಸೂರಟೂರು ರಸ್ತೆಯ ರಿಂಗ್ ರೋಡ್, ಶಿರಹಟ್ಟಿಯಿಂದ ಚಬ್ಬಿ ರಸ್ತೆಯ ರಿಂಗ್ ರೋಡ್ ಹೋಗುವ ರಸ್ತೆಗಳು ಹದಗೆಟ್ಟಿರುವ ಕ್ರಮ ಖಂಡಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ಪಟ್ಟಣ ಪಂಚಾಯತ್ ಅಧ್ಯಕ್ಷ ನಾಗರಾಜು ಲಕ್ಕುಂಡಿ ಹಾಗೂ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಫಕೀರೇಶ ರಟ್ಟಿಹಳ್ಳಿ ಮಾತನಾಡಿ, ಗದಗ್ ಹೊನ್ನಾಳಿ ರಾಜ ಹೆದ್ದಾರಿ ಕಾಮಗಾರಿ ಪ್ರಾರಂಭವಾಗಿ 4,5 ವರ್ಷಗಳಾಗಿವೆ.
ಕಾಮಗಾರಿಗೆ ಬೃಹತ್ ವಾಹನಗಳ ಮೂಲಕ ಸಲಕರಣೆಗಳನ್ನು ಸಾಗಿಸಲು ನಗರದ ರಸ್ತೆಗಳ ಮೂಲಕ ಸಂಚರಿಸಿ ನಗರದಲ್ಲಿರುವ ರಸ್ತೆಗಳು ಸಂಪೂರ್ಣ ಹದಗಟ್ಟಿದೆ ಈ ರಾಜ್ಯ ಹೆದ್ದಾರಿ ಕಾಮಗಾರಿ ಈಗಾಗಲೇ ಸಂಪೂರ್ಣವಾಗಿ ಮುಗಿದಿದ್ದು ನಗರದಲ್ಲಿರುವ ಹದಗಿಟ್ಟಿರುವ ರಸ್ತೆಗಳ ಬಗ್ಗೆ ಇಲಾಖೆ ಅಧಿಕಾರಿಗಳು ಗುತ್ತಿಗೆದಾರರು ಯಾವುದೇ ಕ್ರಮ ಕೈಗೊಂಡಿಲ್ಲ ಇದರಿಂದ ಬೃಹತಾಕಾರದ ಗುಂಡಿಗಳ ನಿರ್ಮಾಣವಾಗಿ ಮಹಿಳೆಯರಿಗೆ ವೃದ್ಧರಿಗೆ ಮಕ್ಕಳಿಗೆ ಲಘು ವಾಹನಗಳ ಸಂಚಾರಕ್ಕೆ ಬಹಳ ತೊಂದರೆಯಾಗಿದೆ ಇದರ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಜಾಣ ಕುರುಡುತನ ಪ್ರದರ್ಶನ ಸುಸುತ್ತಿದ್ದಾರೆ ಆದ್ದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿರುವ ಗುಂಡಿಗಳ್ ಬಿದ್ದಿರುವ ರಸ್ತೆಗಳನ್ನು ದುರಸ್ತಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕೆಂದು ಈ ಮೂಲಕ ಆಗ್ರಹಿಸುತ್ತೇವೆ ಎಂದು ಹೇಳಿದರು.
ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಎಂಟು ದಿನ ಒಳಗಾಗಿ ರಸ್ತೆ ಸಂಪೂರ್ಣವಾಗಿ ಡಾಂಬರೀಕರಣ ಮಾಡಿಕೊಡಬೇಕೆಂದು ಇಲ್ಲವಾದಲ್ಲಿ ರಾಜ್ಯ ಹೆದ್ದಾರಿಯನ್ನ ಬಂದ್ ಮಾಡಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಜಾನು ಲಮಾಣಿ,ಗುಳಪ್ಪ ಕರಿಗಾರ, ಅಕ್ಬಸಾಬ್ ಯಾದಗಿರಿ, ಮಲ್ಲು ಕಬಾಡಿ, ವಿನೋದ್ ಕಪ್ಪತ್ನವರ್, ಮಂಜುನಾಥ್ ಬಳೆಗಾರ, ಮಲ್ಲು ಕುದುರೆ, ತಿಪ್ಪಣ್ಣ ಲಮಾಣಿ,ವೀರಣ್ಣ ಅಂಗಡಿ, ಗಿರೀಶ್ ತುಳಿ, ಸಂತೋಷ್ ಕುಬೇರ್, ಯಲ್ಲಪ್ಪ ಖಾನಾಪುರ್, ಬಸವರಾಜ್ ವಡವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವರದಿ: ವೀರೇಶ್ ಗುಗ್ಗರಿ