LOCAL NEWS : ಶಿರಹಟ್ಟಿ ಪಟ್ಟಣದಲ್ಲಿ ಹೆಸ್ಕಾಂ ಉಪ ವಿಭಾಗ ಪ್ರಾರಂಭಿಸಲು ವಿವಿಧ ಸಂಘಟನೆಗಳಿಂದ ಮನವಿ!
ಶಿರಹಟ್ಟಿ : ಇಂದು ಗದಗ ನಗರದ ಹೆಸ್ಕಾಂ ವಿಭಾಗದ ಮುಖ್ಯ ಅಧಿಕಾರಿಗಳಿಗೆ ಶಿರಹಟ್ಟಿ ಪಟ್ಟಣದಲ್ಲಿ ನೂತನ ಹೆಸ್ಕಾಂ ಉಪ ವಿಭಾಗ ಪ್ರಾರಂಭಿಸಲು ಪಟ್ಟಣದ ಸ್ಥಳೀಯ ಕುಂದು ಕೊರತೆ ನಿವಾರಣ ಸಮಿತಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಕುಮಾರ್ ಶೆಟ್ಟಿ ಬಣ ಇವರ ನೇತೃತ್ವದಲ್ಲಿ ಮನವಿ ಸಲ್ಲಿಸಲಾಯಿತು.
ಪ್ರವೀಣ್ ಕುಮಾರ್ ಶೆಟ್ಟಿ ರವರ ನೇತೃತ್ವದ ಬಣದವರ ಹೋರಾಟ ಸಮಿತಿ ಮತ್ತು ಕರವೇ ವಹಿಸಿಕೊಂಡಿತ್ತು, ಸಮಿತಿ ಅಧ್ಯಕ್ಷರಾದ ಅಕ್ಬರ್ ಸಾಬ್ ಯಾದಗಿರಿ ಮಾತಾಡಿ ಶಿರಹಟ್ಟಿ ತಾಲೂಕು ಅತ್ಯಂತ ಹಿಂದುಳಿದ ತಾಲೂಕಾಗಿದ್ದು ಪಟ್ಟಣದಲ್ಲಿ ತುಂಬಾ ದಿನಗಳಿಂದ ಬೇಡಿಕೆ ಹಾಗೂ ಅವಶ್ಯಕತೆ ಇರುವಂತಹ ಹೆಸ್ಕಾಂ ಉಪ ವಿಭಾಗ ಕಚೇರಿ ಪ್ರಾರಂಭಿಸಲು ಹೆಸ್ಕಾಂ ಹಿರಿಯ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದೇವೆ ಜೊತೆಗೆ ಕರವೇ ಅಧ್ಯಕ್ಷರಾದ ಗೋಸಸಾಬ್ ಕಲಾವಂತ್ ಮಾತನಾಡಿ ಪಟ್ಟಣದಲ್ಲಿ ಆದಷ್ಟು ಬೇಗನೆ ಹೆಸ್ಕಾಂ ಉಪ ವಿಭಾಗ ಕಚೇರಿ ಪ್ರಾರಂಭಿಸಬೇಕು.
ತಾಲೂಕಿನ ಅಭಿವೃದ್ಧಿಗೆ ಸಹಕರಿಸಬೇಕು ಇಲಾಖೆ ಪ್ರಾರಂಭಿಸಲು ಬೇಕಾದಂತಹ ಎಲ್ಲಾ ಸವಲತ್ತುಗಳು ಇಲ್ಲಿ ಇರುವುದರಿಂದ ಆದಷ್ಟು ಬೇಗನೆ ಉಪ ವಿಭಾಗ ಪ್ರಾರಂಭಿಸಿ ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕರವೇ ಹಿರಿಯ ಮುಖಂಡರಾದ ರಫೀಕೆ ಕೆರಿಮನಿ, ಮುನ್ನ ಡಲಾ ಯತ್ ಶ್ರೀನಿವಾಸ್ ಬಾರ್ ಬಾರ, ಕುಬೇರ್ ಅಪ್ಪಣ್ಣ, ಜಾಕಿರ್ ಕೊಳವಾಡ, ಇಂತಿಯಾಜ್ ಸಿಗ್ಲಿ, ಶ್ರೀನಿವಾಸ ಕಪಟಕರ್, ಹಾಗೂ ಇನ್ನಿತರರು ಹಾಜರಿದ್ದರು.