LOCAL NEWS : ಆಡೂರ ಗ್ರಾಮದ ಮೃತ ಬಾಣಂತಿ ರೇಣುಕಾ ನಿವಾಸಕ್ಕೆ,,! ಶಾಸಕ ಬಸವರಾಜ ರಾಯರಡ್ಡಿ ಭೇಟಿ ಸಾಂತ್ವಾನ!
ಕುಕನೂರು : ತಾಲೂಕಿನ ಆಡೂರ ಗ್ರಾಮದ ಮೃತ ಬಾಣಂತಿ ರೇಣುಕಾ ಹಾಗೂ ಹಸುಗುಸು ವೈದ್ಯರ ನಿರ್ಲಕ್ಷದಿಂದ ಇತ್ತಿಚಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಮೃತರ ನಿವಾಸಕ್ಕೆ ಶಾಸಕ ಬಸವರಾಜ ರಾಯರಡ್ಡಿಯವರು ಭೇಟಿ ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಇಂದು ತಾಲೂಕಿನ ಆಡೂರ ಗ್ರಾಮದ ಪ್ರಕಾಶ ಹಿರೇಮನಿ ಎಂಬುವರ ಪತ್ನಿ ರೇಣುಕಾ ಹಾಗೂ ಮಗು ವೈದ್ಯರ ನಿರ್ಲಕ್ಷದಿಂದ ಇತ್ತಿಚಿಗೆ ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದರು. ಈ ಪ್ರಕರಣದ ಕುರಿತು ಮೃತರ ನಿವಾಸಕ್ಕೆ ಶಾಸಕ ಬಸವರಾಜ ರಾಯರಡ್ಡಿಯವರು ವಿಚಾರಿಸಿ ರಾಜ್ಯ ಸರ್ಕಾರದಿಂದ ಸಾದ್ಯವಾದಷ್ಟು ಪರಿಹಾರವನ್ನು ಕೊಡಿಸುವುದಾಗಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಈ ವೇಳೆ ಮಾತನಾಡಿ, ನಾನು ನನ್ನ ವಯಕ್ತಿಕವಾಗಿ ಧನ ಸಹಾಯ ಮಾಡಿದ್ದು, ಈ ಕುರಿತಂತೆ ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತಂದು ಸಾಧ್ಯವಾದಷ್ಟು ಕುಟುಂಬಕ್ಕೆ ಪರಿಹಾರ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮುಖಂಡರಾದ ಚಂದ್ರಶೇಖರಯ್ಯ ಹಿರೇಮಠ, ಶಿವನಗೌಡ ದಾನರೆಡ್ಡಿ, ಸಂಗಮೇಶ ಗುತ್ತಿ, ಹಂಪಯ್ಯ ಹಿರೇಮಠ, ವೀರುಪಾಕ್ಷಪ್ಪ ದೊಡ್ಮನಿ, ಅರವಿಂದ, ಶಿವುಕುಮಾರ ಆದಾಪೂರ ಇನ್ನಿತರರು ಇದ್ದರು.