LOCAL NEWS : ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಅವ್ಯವಹಾರದ ದೂರು! : ಹಾಲಪ್ಪ ಆಚಾರ್‌ಗೆ ಮಾತಿನ ಚಾಟಿ ಬೀಸಿದ ಶಾಸಕ ರಾಯರೆಡ್ಡಿ..!
ಕುಕನೂರು : ಕುಕನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ದೊಡ್ಡ ಮಟ್ಟದಲ್ಲಿ ಅವ್ಯವಹಾರ ನಡೆದಿದೆ ಎಂದು ಸಂಘದ ಸದಸ್ಯರು ನನಗೆ ದೂರು ನೀಡಿದ್ದಾರೆ ಇದರ ಬಗ್ಗೆ ಕಾನೂನಿನ ಚೌಕಟ್ಟಿನಲ್ಲಿ ತನಿಖೆಗೆ ಆದೇಶ ನೀಡಲಿದ್ದೇನೆ ಎಂದು ಶಾಸಕ ಬಸವರಾಜ ರಾಯರೆಡ್ಡಿ ತಿಳಿಸಿದರು.
ಈ ಕುರಿತು ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಈ ಸಂಘದಲ್ಲಿ ಅನಧಿಕೃತವಾಗಿ ಸಾಲ ಸೌಲಭ್ಯ ನೀಡುವುದರ ಬಗ್ಗೆ ಅವ್ಯವಹಾರ ನಡದಿದೆ ಎಂದು ನನಗೆ ಮಾಹಿತಿ ಇದೆ. ಇದರ ಬಗ್ಗೆ ಹಾಗೂ ಸಂಘದ ಕಾರ್ಯಧರ್ಶಿ ಹಾಗೂ ಈ ಹಿಂದಿನ ಆಡಳಿತ ಮಂಡಳಿಯು ಸುಮಾರು 1300 ಮತದಾರರನ್ನು ಅನರ್ಹ ಮಾಡಿದ್ದಾರೆ ಎಂಬ ವಿಷಯವೂ ತಿಳಿದು ಬಂದಿದೆ. ಈ ಎಲ್ಲಾ ವಿಷಯದ ಕುರಿತು ಸಂಪೂರ್ಣ ತನಿಖೆಯನ್ನು ಕೈಗೊಳ್ಳುವಂತೆ ನಿರ್ದೇಶನ ನೀಡಲಾವುದು ಎಂದರು.
ಈ ಹಿಂದೆ ನಡೆದ ಸಂಘದ ಚುನಾವಣೆ ಮತದಾನ ದಿನದ ಬೆಳವಣಿಗೆ ಹಾಗೂ ಅಂದಿನ ರಾಜಕೀಯ ಹೈಡ್ರಾಮದ ಕುರಿತು ಮಾತನಾಡಿದ ಶಾಸಕ ರಾಯರೆಡ್ಡಿ ಅವರು, ‘ನನ್ನ ಮೇಲೆ ಸುಳ್ಳ ಆರೋಪ ಮಾಡಿದ್ದು, ಈ ಚುನಾವಣೆಗೆ ನನಗೆ ಯಾವುದೇ ಸಂಬಂಧವಿಲ್ಲ ಆದರೂ ನನ್ನನ್ನು ಇದರಲ್ಲಿ ಎಳೆದು ತರಲಾಗಿದೆ. ಕೋರ್ಟ್‌ನ ಮೊರೆ ಹೊದ ಮತದಾರ ಪರ ಕೋರ್ಟ್ ಆದೇಶದ ಚುನಾವಣಾಧಿಕಾರಿಗೆ ಫಲಿತಾಂಶ ಘೋಷಣೆ ಮಾಡುವ ಕುರಿತು ಸಂಪೂರ್ಣ ಸ್ವತಂತ್ರ್ಯವನ್ನು ನೀಡಿದೆ. ಕೋರ್ಟ್ ಈ ವಿಷಯದ ಬಗ್ಗೆ ತಿಳಿದುಕೊಂಡಿದ್ದೇನೆ. ಅಂದಿನ ಪರಿಸ್ಥಿತಿಯನ್ನು ನಿಭಾಯಿಸುವುದಕ್ಕೆ ಫಲಿತಾಂಶ ಘೋಷಣೆ ಮಾಡದೆ ಒಂದು ಉತ್ತಮ ನಿರ್ಧಾರವನ್ನು ಚುನಾವಣಾಧಿಕಾರಿ ತಗೆದುಕೊಂಡಿದ್ದಾರೆ ಎಂದರು.
ಮಾಜಿ ಸಚಿವ ಹಾಲಪ್ಪ ಆಚಾರ್‌ಗೆ ಶಾಸಕ ಬಸವರಾಜ್ ರಾಯರೆಡ್ಡಿ ಮಾತಿನ ಚಾಟಿ..!
ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಮಾಡಿರುವ ಆರೋಪದ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕ, ‘ಈ ಸಂಘದ ಚುನಾವಣೆಯಲ್ಲಿ ನನ್ನ ಹಸ್ತಕ್ಷೇಪ ಇದೆ ಎಂದು ಆರೋಪಿಸಿದ್ದಾರೆ. ಮುಂದುವರೆದು ನನಗೆ ಸಹಕಾರಿ ರಂಗದ ಬಗ್ಗೆ ಗಂಧ ಗಾಳಿಯೂ ಗೋತ್ತಿಲ್ಲ ಎಂದು ಹೇಳಿದ್ದಾರೆ. ಅವರು ಹೇಳಿದ್ದು ನೀಜ ನನಗೆ ಸಹಕಾರಿ ರಂಗದ ಬಗ್ಗೆ ಗೋತ್ತಿಲ್ಲ, ಆದರೆ, ಅದರ ಕಾನೂನು ಚೆನ್ನಾಗಿ ಗೊತ್ತಿದೆ’ ಎಂದರು.
‘ಇದೇ ಹಾಲಪ್ಪ ಆಚಾರ್‌ರನ್ನು ನಾನು ಆರ್‌ಡಿಸಿಸಿ ಬ್ಯಾಂಕ್ ರಾಯಚೂರು ಜಿಲ್ಲೆಗೆ ಅಧ್ಯಕ್ಷನನ್ನಾಗಿ ಮಾಡಿದ್ದೇ, ಅದು ಅವರು ಮರೆತು ಹೋಗಿದ್ದಾರೆ. ನನಗೆ ಇದೆಲ್ಲಾ ಚಿಲ್ಲರೇ ರಾಜಕಾರಣ ಮಾಡುವುದು ಗೊತ್ತಿಲ್ಲ, ಇಂತಹ ಸಣ್ಣ ಪುಟ್ಟ ವಿಚಾರಕ್ಕೆ ತಲೆ ಹಾಕುವುದಿಲ್ಲ, ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೂ ಈ ರೀತಿ ಹೇಳಿದ್ದಾರೆಂದರೇ, ಅದು ಅವರ ಸ್ವಾಭಾವವನ್ನು ತೋರಿಸುತ್ತದೆ’ ಎಂದು ಮಾತಿನಲ್ಲೇ ಹಾಲಪ್ಪ ಆಚಾರ್‌ಗೆ ಚಾಟಿ ಬೀಸಿದರು.