LOCAL NEWS : ಕರ್ನಾಟಕ ರಾಜ್ಯ ಯುವ ಒಕ್ಕೂಟಕ್ಕೆ ರಾಮಮೂರ್ತಿ ನವಲಿ ನೇಮಕ!

You are currently viewing LOCAL NEWS : ಕರ್ನಾಟಕ ರಾಜ್ಯ ಯುವ ಒಕ್ಕೂಟಕ್ಕೆ ರಾಮಮೂರ್ತಿ ನವಲಿ ನೇಮಕ!

ಕರ್ನಾಟಕ ರಾಜ್ಯ ಯುವ ಒಕ್ಕೂಟಕ್ಕೆ ರಾಮಮೂರ್ತಿ ನವಲಿ ನೇಮಕ

ಕೊಪ್ಪಳ : ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟಕ್ಕೆ ಜಿಲ್ಲಾ ಗೌರವ ಅಧ್ಯಕ್ಷರಾಗಿ ಪತ್ರಕರ್ತ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಗಂಗಾವತಿಯ ರಾಮಮೂರ್ತಿ ನವಲಿ ಅವರನ್ನು ನೇಮಕ ಮಾಡಿ ಕಲಬುರಗಿ ವಿಭಾಗೀಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಆದೇಶ ಮಾಡಿದರು.

ಈ ಕುರಿತು ಪ್ರಕಟಣೆ ನೀಡಿರುವ ಮಂಜುನಾಥ ಜಿ. ಗೊಂಡಬಾಳ ಯುವ ಒಕ್ಕೂಟದ ರಾಜ್ಯಾಧ್ಯಕ್ಷ ಡಾ. ಎಸ್. ಬಾಲಾಜಿ ಅವರ ನಿರ್ದೇಶನದಂತೆ ಯುವಜನ ಸಂಘಗಳ ಅಭಿವೃದ್ಧಿಗೆ ಎರಡು ದಶಕಗಳ ಕಾಲ ಕೆಲಸ ಮಾಡಿದ ರಾಮಮೂರ್ತಿ ನವಲಿ ಅವರನ್ನು ನೇಮಕ ಮಾಡುವ ಮೂಲಕ ಜಿಲ್ಲೆಯಲ್ಲಿ ಯುವ ಸಂಘಗಳ ಪುನಶ್ಚೇತನಕ್ಕೆ ಹೊಸ ಮೈಲುಗಲ್ಲು ಸೃಷ್ಟಿಸುವ ಕಾರ್ಯ ನಡೆಯಲಿದೆ. 2008 ರಿಂದ ಯುವ ಸಂಘಗಳ ನೋಂದಣಿ ರದ್ದಾಗಿದ್ದು ಅವೆಲ್ಲವು ಜೀವ ಕಳೆದುಕೊಂಡಿವೆ, ಯುವಜನ ಮೇಳ ಮತ್ತು ಉತ್ಸವಗಳಲ್ಲಿ ಭಾಗವಹಿಸಲು ಸಹ ಸಂಘಗಳ ಸದಸ್ಯರಾಗುವದನ್ನು ಸಹ ತೆಗೆದು ಅವುಗಳಿಗೆ ಕೊಡುತ್ತಿದ್ದ ಆರ್ಥಿಕ ಸಹಾಯ ಎಲ್ಲವೂ ನಿಂತಿರುವದು ಸಮಾಜ ಸೇವೆ ಅನ್ನುವದು ಮೌಲ್ಯ ಕಳೆದುಕೊಂಡಿದೆ.

ಯುವ ಒಕ್ಕೂಟದಿಂದ ಕಲಬುರಗಿ ವಿಭಾಗ ಮಟ್ಟದಲ್ಲಿ ತಾಲೂಕ, ಜಿಲ್ಲೆ ಮತ್ತು ವಿಭಾಗೀಯ ಯುವಜನ ಸಾಂಸ್ಕೃತಿಕ ಮೇಳ, ಯುವ ಸಮಾವೇಶ, ಯುವ ಉದ್ಯೋಗ ಭರವಸೆ ತರಬೇತಿ, ಪ್ರತಿ ಗ್ರಾಮದಲ್ಲಿ ಯುವ ಸಂಘಗಳ ಮೂಲಕ ಯುವ ಸಮುದಾಯ ಭವನ, ನಿರಂತರ ಶ್ರಮದಾನ ಶಿಬಿರ, ಆರೋಗ್ಯ ಮೇಳ, ಯೋಗ ಕರಾಟೆ ತರಬೇತಿ, ಸಂಗೀತ ಕಾರ್ಯಕ್ರಮಗಳನ್ನು ಸಂಘಟಿಸಲು ಸ್ಪಷ್ಟವಾದ ಯೋಜನೆ ರೂಪಿಸಲಾಗಿದೆ ಎಂದು ಗೊಂಡಬಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

error: Content is protected !!