‘ಈ ಸರ್ಕಾರ ಸಾವಿನ ಗ್ಯಾರೆಂಟಿ ಕೊಡುವ ಸರ್ಕಾರ’ : ಬಿಜೆಪಿಯ ಸತ್ಯಶೋಧನಾ ತಂಡ ಮುಂದಾಳು ಶಾಸಕ ಬೆಲ್ದಾಳೆ!
ಕುಕನೂರು : ತಾಲೂಕಿನ ಅಡೂರು ಗ್ರಾಮದ ಮೃತ ಬಾಣಂತಿ ರೇಣುಕಾ ಮನೆಗೆ ರಾಜ್ಯ ಬಿಜೆಪಿವತಿಯಿಂದ ಬಾಣಂತಿ ಮತ್ತು ಮಕ್ಕಳ ಸಾವಿನ ಕುರಿತು ಸತ್ಯಶೋಧನಾ ತಂಡ ಭೇಟಿ ನೀಡಿ ಸಾಂತ್ವಾನ ಹೇಳಿ ವೈದ್ಯರ ಲೋಪದೋಷದ ಬಗ್ಗೆ ಮಾಹಿತಿ ಪಡೆದುಕೊಂಡಿತು.
ಈ ವೇಳೆಯಲ್ಲಿ ಈ ತಂಡದ ಮುಂದಾಳು ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಅವರು ಮಾತನಾಡಿ, ‘ಈ ಸರ್ಕಾರ ಸಾವಿನ ಗ್ಯಾರೆಂಟಿ ಕೊಡುವ ಸರ್ಕಾರ, ನಾವು ಗ್ಯಾರೆಂಟಿ ನೀಡಿದ್ದೇವೆ, ಇದರಿಂದ ನಿಮ್ಮ ಜೀವನ ಸುಧಾರಿಸುತ್ತೇ ಎಂದು ರಾಜ್ಯದ ಜನರಿಗೆ ಮೋಸ ಮಾಡುತ್ತಿದ್ದಾರೆ. ಸರಿಯಾದ ವೈಧ್ಯಕೀಯ ಸೌಲಭ್ಯವನ್ನು ನಿಮ್ಮ ಕಡೆಯಿಂದ ಕೊಡುವುದಕ್ಕೂ ಆಗುತ್ತಿಲ್ಲ, ಸುಮಾರು ರಾಜ್ಯದಲ್ಲಿ 736 ಬಾಣಂತಿಯರ ಸಾವು ಪ್ರಕರಣಗಳು ದಾಖಲಾಗುತ್ತಿವೆ, ಇದರಿಂದ ಬಹಳ ಸ್ಪಷ್ಟವಾಗಿ ತಿಳಿಯುತ್ತದೆ. ಇದು ಸಾವಿನ ಗ್ಯಾರೆಂಟಿ ಕೊಡುವ ಸರ್ಕಾರ’ ಎಂದು ಹೇಳಿದರು.
ಈ ವೇಳೆಯಲ್ಲಿ ಮಾಜಿ ಸಚಿವ ಹಾಲಪ್ಪ ಆಚಾರ್, ಬಿಜೆಪಿ ಜಿಲ್ಲಾ ಅಧ್ಯಕ್ಷ ನವೀನ್ ಕುಮಾರ್ ಈ ಗುಳ್ಳಗಣನವರು, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಮುಖಂಡ ಡಾ. ಬಸವರಾಜ್ ಕ್ಯಾವಟರ್, ಮಹಿಳಾ ಮೋರ್ಚಾ ರಾಜ್ಯ ಅಧ್ಯಕ್ಷೆ ಕು.ಮಂಜುಳಾ, ವೈದ್ಯಕೀಯ ಪ್ರಕೋಷ್ಠದ ರಾಜ್ಯ ಸಂಚಾಲಕ ಡಾ. ನಾರಾಯಣ್, ಜಿಲ್ಲಾ ಉಪಾಧ್ಯಕ್ಷೆ ಡಾ. ಅರುಣಾ, ಮಹಿಳಾ ಮೋರ್ಚಾ ರಾಜ್ಯ ಖಜಾಂಚಿ ಶ್ರೀಮತಿ ವಿಜಯಲಕ್ಷ್ಮೀ ಕರೂರು, ಮುಖಂಡರಾದ ಡಾ. ಸುಧಾ ಹಲ್ಕಾಯಿ, ವೈದ್ಯಕೀಯ ಪ್ರಕೋಷ್ಠದ ಡಾ. ಲಕ್ಷ್ಮಣ್, ರಾಜ್ಯ ಮಾಧ್ಯಮ ಸಮಿತಿ ಸದಸ್ಯ ರತನ್ ರಮೇಶ್ ಪೂಜಾರಿ, ಕುಷ್ಟಗಿ ಶಾಸಕ ಹಾಗೂ ವಿಧಾನ ಸಭೆ ಮುಖ್ಯ ಸಚೇತಕರು ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಹೇಮಲತಾ ನಾಯಕ, ಮಾಜಿ ಶಾಸಕರು ಪರಣ್ಣ ಮನವಳ್ಳಿ ಹಾಗೂ ಇತರರು ಇದ್ದರು.