ಕರ್ನಾಟಕ ವಿಧಾನಮಂಡಲದ ಎಸ್.ಸಿ. ಎಸ್‌ಟಿ ಕಲ್ಯಾಣ ಸಮಿತಿಯಿಂದ ಕಲಬುರಗಿ ವಿಭಾಗ ಪ್ರವಾಸ

You are currently viewing ಕರ್ನಾಟಕ ವಿಧಾನಮಂಡಲದ ಎಸ್.ಸಿ. ಎಸ್‌ಟಿ ಕಲ್ಯಾಣ ಸಮಿತಿಯಿಂದ ಕಲಬುರಗಿ ವಿಭಾಗ ಪ್ರವಾಸ

ಕರ್ನಾಟಕ ವಿಧಾನಮಂಡಲದ ಎಸ್.ಸಿ. ಎಸ್‌ಟಿ ಕಲ್ಯಾಣ ಸಮಿತಿಯಿಂದ ಕಲಬುರಗಿ ವಿಭಾಗ ಪ್ರವಾಸ

ಹೊಸಪೇಟೆ (ವಿಜಯನಗರ) : ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಪಿ.ಎಂ. ನರೇಂದ್ರಸ್ವಾಮಿ ಇವರ ನೇತೃತ್ವದ 19 ಜನ ಸದಸ್ಯರನ್ನೊಳಗೊಂಡ ಸಮಿತಿಯು ಸೆಪ್ಟೆಂಬರ್ 19 ರಿಂದ ಸೆಪ್ಟೆಂಬರ್ 21ರವರೆಗೆ ಕಲಬುರಗಿ ವಿಭಾಗದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದೆ ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ತಿಳಿಸಿದ್ದಾರೆ.

ಈ ಸಮಿತಿಯು ಕಲಬುರಗಿ ವಿಭಾಗದ ಜಿಲ್ಲೆಗಳಾದ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಮುದಾಯದವರ ಅಭಿವೃದ್ಧಿ, ಕಲ್ಯಾಣ, ಏಳಿಗೆಗೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಕುರಿತು ಪ್ರಗತಿ ಪರಿಶೀಲನಾ ಸಭೆ ನಡೆಸಿ ಚರ್ಚೆ ನಡೆಸಲಿದೆ.

ಸಮಿತಿಯು ಸೆಪ್ಟೆಂಬರ್ 19 ರಂದು ಬೆಳಿಗ್ಗೆ 10.30ಕ್ಕೆ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳ ಹಾಗೂ ಮಧ್ಯಾಹ್ನ 2.30ಕ್ಕೆ ಬೀದರ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆಯು ಕ್ರಮವಾಗಿ ಕಲಬುರಗಿ ಮತ್ತು ಬೀದರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ನಡೆಸಿ ಅಲ್ಲಿಂದ ರಾಯಚೂರಿಗೆ ಪ್ರಯಾಣಿಸಿ ವಾಸ್ತವ್ಯ ಮಾಡಲಿದೆ.
ಸೆಪ್ಟೆಂಬರ್ 20 ರಂದು ಬೆಳಿಗ್ಗೆ 10.30 ಗಂಟೆಗೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯು ರಾಯಚೂರು ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಸಿ ಬಳ್ಳಾರಿಯತ್ತ ಪ್ರಯಾಣ ಬೆಳೆಸಲಿದೆ.

ಸೆಪ್ಟೆಂಬರ್ 21 ರಂದು ಬೆಳಿಗ್ಗೆ 10.30 ಗಂಟೆಗೆ ಬಳ್ಳಾರಿ ಮತ್ತು ಮಧ್ಯಾಹ್ನ 2.30 ಗಂಟೆಗೆ ವಿಜಯನಗರ ಜಿಲ್ಲೆಗಳ ಪ್ರಗತಿ ಪರಿಶೀಲನಾ ಸಭೆಯನ್ನು ಕ್ರಮವಾಗಿ ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಅಥವಾ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿ ನಂತರ ಮರಳಿ ಕೇಂದ್ರಸ್ಥಾನಕ್ಕೆ ಪ್ರಯಾಣಿಸಲಿದೆ.

ಪಿ.ಎಂ. ನರೇಂದ್ರಸ್ವಾಮಿ ನೇತೃತ್ವದ ಈ ಸಮಿತಿಯಲ್ಲಿ ವಿಧಾನಮಂಡಲದ ಸದಸ್ಯರುಗಳಾದ ಬಿ.ಜಿ. ಗೋವಿಂದಪ್ಪ, ಐಹೊಳೆ ದುರ್ಯೋಧನ ಮಹಾಲಿಂಗಪ್ಪ, ಅಬ್ಬಯ್ಯ ಪ್ರಸಾದ, ಎಸ್.ಎನ್. ನಾರಾಯಣಸ್ವಾಮಿ ಕೆ.ಎಂ., ಮಾನಪ್ಪ ಡಿ. ವಜ್ಜಲ, ಬಸನಗೌಡ ದದ್ದಲ, ಅನಿಲ್ ಚಿಕ್ಕಮಾದು, ಬಸವರಾಜ್ ಮತ್ತಿಮೂಡ್, ಎನ್. ಶ್ರೀನಿವಾಸಯ್ಯ, ಕೆ.ಸಿ. ವೀರೇಂದ್ರ ಪಪ್ಪಿ, ಪ್ರಕಾಶ ಕೋಳಿವಾಡ, ಕೃಷ್ಣ ನಾಯಕ, ಸಿಮೆಂಟ್ ಮಂಜು, ಕರೆಮ್ಮ, ಶಾಂತರಾಮ್ ಬುಡ್ನ ಸಿದ್ದಿ, ರಾಜೇಂದ್ರ ರಾಜಣ್ಣ, ವೈ.ಎಂ. ಸತೀಶ್ ಹಾಗೂ ಜಗದೇವ್ ಗುತ್ತೇದಾರ್ ಅವರು ಒಳಗೊಂಡಿದ್ದಾರೆ.

Leave a Reply

error: Content is protected !!