PV SERIES STORY 05 : ಶೀತಲಾವಸ್ಥೆಗೊಂಡ ಬಸ್ ನಿಲ್ದಾಣ ನವೀಕರಣ: ಗ್ರಾಮಸ್ಥರ ಆಕ್ರೋಶ..!!

You are currently viewing PV SERIES STORY 05 : ಶೀತಲಾವಸ್ಥೆಗೊಂಡ ಬಸ್ ನಿಲ್ದಾಣ ನವೀಕರಣ: ಗ್ರಾಮಸ್ಥರ ಆಕ್ರೋಶ..!!

ಪ್ರಜಾ ವೀಕ್ಷಣೆ ಸುದ್ದಿಜಾಲ :-

PV NEWS SERIES STORY NUMBER 5 : ಶೀತಲಾವಸ್ಥೆಗೊಂಡ ಬಸ್ ನಿಲ್ದಾಣ ನ12012ವೀಕರಣ: ಗ್ರಾಮಸ್ಥರ ಆಕ್ರೋಶ..!!

ಕುಕನೂರು : ಗ್ರಾಮದ ಬಸ್ ನಿಲ್ದಾಣವು ಸಂಪೂರ್ಣ ಶೀತಲಗೊಂಡಿದ್ದು ಇಂತಹ ಬಸ್ ನಿಲ್ದಾಣವನ್ನು ನವೀಕರಣಗೊಳಿಸಲು ಅಧಿಕಾರಿಗಳು ಮುಂದಾಗಿರುವುದನ್ನು ತಂಡ ಗ್ರಾಮಸ್ಥರು ಆಕ್ರೋಶಗೊಂಡ ಘಟನೆ ಜಿಲ್ಲೆಯ ಕುಕನೂರು ತಾಲೂಕಿನ ಬನ್ನಿಕೊಪ್ಪ ಗ್ರಾಮದಲ್ಲಿ ಜರುಗಿದೆ.

2006-07 ನೇ ಸಾಲಿನಲ್ಲಿ ಉದ್ಘಾಟನೆಗೊಂಡ ಬಸ್ ನಿಲ್ದಾಣವು ಸುಮಾರು 18 ವರ್ಷಗಳಿಗಿಂತ ಹೆಚ್ಚಿನ ಸಮಯ ಗತಿಸಿದ್ದು ಸದ್ಯ ಈ ಬಸ್ ನಿಲ್ದಾಣ ಸಂಪೂರ್ಣವಾಗಿ ಶೀತಲಗೊಂಡಿದ್ದು ಯಾವಾಗ ಬೀಳುತ್ತದೆಯೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಉಂಟಾಗುವಂತಹ ಸ್ಥಿತಿ ತಲುಪಿರುತ್ತದೆ.

ಇಂತಹ ಬಸ್ ನಿಲ್ದಾಣದ ಕಟ್ಟಡವನ್ನು 2.21 ಕೋಟಿ ರೂಪಾಯಿಗಳ ವೆಚ್ಚದಲ್ಲಿ ನವೀಕರಣಕ್ಕೆ ಅನುದಾನ ಮಂಜೂರ್ ಆಗಿದ್ದು ಮೂಲತಃ ಬುನಾದಿಯೇ ಗಟ್ಟಿಯಾಗಿರದ ಬಸ್ ನಿಲ್ದಾಣ ಕಟ್ಟಡವನ್ನು ಮೇಲೆ ಎಷ್ಟೇ ತೇಪೆ ಹಚ್ಚಿದರು ಸಾರ್ಥಕವಾಗದ ಕೆಲಸ ಎಂದು ಗ್ರಾಮಸ್ಥರು ತಮ್ಮ ಆಕ್ರೋಶವನ್ನು ಹೊರ ಹಾಕಿರುತ್ತಾರೆ.

ಬಸ್ ನಿಲ್ದಾಣ ಕಟ್ಟಡ ಎಂದರೆ ಗ್ರಾಮದ ಎಲ್ಲಾ ಜನರು ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸಹಿತ ಮಳೆ, ಗಾಳಿ ಹಾಗೂ ಬಿಸಿಲಿನಿಂದ ರಕ್ಷಿಸಿಕೊಳ್ಳಲು ಆಶ್ರಯ ಪಡಿಯುವಂತಹ ಕಟ್ಟಡವಾಗಿದ್ದು ಸದ್ಯ ಕಟ್ಟಡ ಎಲ್ಲೆಂದರಲ್ಲಿ ಬಿರುಕು ಬಿಟ್ಟಿದ್ದು ಮಳೆ ಬಂದರೆ ಸಂಪೂರ್ಣ ಸೇರುವ ಸ್ಥಿತಿಯಲ್ಲಿದೆ. ಇಂತಹ ಕಟ್ಟಡವನ್ನು ನವೀಕರಣಗೊಳಿಸದೆ ಸಂಪೂರ್ಣವಾಗಿ ನೆಲಸಮಗೊಳಿಸಿ ಪುನರ್ ನಿರ್ಮಿಸಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿರುತ್ತದೆ.

ಈ ವೇಳೆಯಲ್ಲಿ ಗ್ರಾಮದ ಪ್ರಮುಖರಾದ ಹನುಮಂತಗೌಡ ಆದಾಪುರ, ಸಿದ್ದಪ್ಪ ಮಳೆಕೊಪ್ಪ, ಹಾಲೇಶ್ ಯರಾಶಿ, ವೀರಣ್ಣ ಗೋಂದಿ, ನಾಗರಾಜ ಹಳ್ಳಿಕೇರಿ, ನಾಗರಾಜ ವೆಂಕಟಪುರ, ಶಿವಪ್ಪ ಚೌಡಿ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Leave a Reply

error: Content is protected !!